ಸೋಮವಾರ, ಏಪ್ರಿಲ್ 28, 2025
HomeCinemaDarshan Thoogudeepa viral photos : ಹುಡುಗಿ ಜೊತೆ ವೈರಲ್ ಆಯ್ತು ದರ್ಶನ್ ಪೋಟೋ :...

Darshan Thoogudeepa viral photos : ಹುಡುಗಿ ಜೊತೆ ವೈರಲ್ ಆಯ್ತು ದರ್ಶನ್ ಪೋಟೋ : ಏನಿದರ ಅಸಲಿಯತ್ತು ಗೊತ್ತಾ?!

- Advertisement -

ಸೋಷಿಯಲ್ ಮೀಡಿಯಾಗಳು ನಟ-ನಟಿಯರ ಅಭಿಮಾನಿಗಳಿಗೆ ಒಂದು ಸುಂದರ ವೇದಿಕೆ ಇದ್ದಂತೆ. ಸದಾ ನಮ್ಮ ನೆಚ್ಷಿನ ನಟ-ನಟಿಯರ ಬಗ್ಗೆ ಯೋಚಿಸುವ ಅಭಿಮಾನಿಗಳಿಗೆ ಅವರ ಬಗ್ಗೆ ಸಿಗೋ ಪ್ರತಿಯೊಂದು ಪೋಟೋ, ಬರಹಗಳು ಕೂಡ ಸಖತ್ ಖುಷಿ ಕೊಡುತ್ತೆ. ಈಗ ಅಂತಹ ಸಂಭ್ರಮದಲ್ಲಿದ್ದಾರೆ ಕರುನಾಡಿನ ಡಿ ಬಾಸ್, ದಚ್ಚು, ಚಾಲೆಂಜಿಂಗ್ ಸ್ಟಾರ್ (Darshan Thoogudeepa) ಅಭಿಮಾನಿಗಳು. ಡಿ ಬಾಸ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳು ಸದಾ ದರ್ಶನ್ ಬಗ್ಗೆ ಹೊಸ ವಿಚಾರ ಕೇಳೋಕೆ ಖುಷಿ ಪಡೋಕೆ ಕಾಯ್ತಿರುತ್ತಾರೆ. ಈಗ ಅಂತಹ ಅಭಿಮಾನಿಗಳಿಗೆ ಹಬ್ಬದೂಟದಂತ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಚಲನಚಿತ್ರ ರಂಗದಲ್ಲಿ ಲೈಟ್ ಬಾಯ್, ಕ್ಯಾಮರಾ ಅಸಿಸ್ಟೆಂಟ್ ನಿಂದ ಕೆರಿಯರ್ ಆರಂಭಿಸಿ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದು ನಿಂತಿರೋ ದರ್ಶನ್ ಹಳೆ ಕಾಲದಲ್ಲಿ ನಾಟಕವೊಂದರಲ್ಲಿ ನಟಿಸಿದ ಪೋಟೋವೊಂದು ಈಗ ವೈರಲ್ ( viral photos )ಆಗಿದೆ.

ಪೋಟೋದಲ್ಲಿ ದರ್ಶನ್ ಹುಡುಗಿಯೊಬ್ಬರ ಕೈ ಹಿಡಿದು ಕುಳಿತಿದ್ದು ಹಿರಿಯರೊಬ್ಬರು ತಲೆ‌ಮೇಲೆ ಅಕ್ಷತೆ ಹಾಕುತ್ತಿದ್ದಾರೆ. ಮದುವೆ ದೃಶ್ಯವನ್ನು ಬಿಂಬಿಸುವಂತ ಈ ಪೋಟೋದಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಟೋ ಯಾವ ನಾಟಕದ್ದು, ಎಲ್ಲಿ ತೆಗೆದಿದ್ದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಪೋಟೋಮಾತ್ರ ಈಗ ಸೋಷಿಯಲ್ ಮೀಡಿಯಾ ವೈರಲ್ ಲಿಸ್ಟ್ ಸೇರಿದೆ.

ಸಿನಿಮಾಕ್ಕೆ ಬರೋ ಮುನ್ನ ದರ್ಶನ್ ಸಾಕಷ್ಟು ತಯಾರಿ ಸಮೇತವೇ ಬಂದಿದ್ದಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ದರ್ಶನ್ ಸಿನಿಮಾಗೆ ಬರೋ ಮುನ್ನವೇ ನೀನಾಸಂನಲ್ಲಿ ತರಬೇತಿ‌ ಪಡೆದಿದ್ದರು. ನಟನೆಯ ಬಗ್ಗೆ ತರಬೇತಿ ಪಡೆದೇ ದರ್ಶನ್ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದರು. 1997 ರಲ್ಲಿ ಲೈಟ್ ಬಾಯ್ ಆಗಿ ಸ್ಯಾಂಡಲ್ ವುಡ್ ಗೆ ಬಂದ ದರ್ಶನ್ 2002 ರಲ್ಲಿ ತೆರೆಕಂಡ ಮೆಜೆಸ್ಟಿಕ್ ಮೂಲಕ ಹೀರೋ ಆಗಿ ಕಾಣಿಸಿಕೊಂಡರು.

ಸದ್ಯ ರಾಬರ್ಟ್ ಗೆಲುವಿನ ಬಳಿಕ ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕ್ರಾಂತಿ ಶೈಲಜಾ‌ನಾಗ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು ಇದು ದರ್ಶನ್ ೫೫ ನೇ ಸಿನಿಮಾ ಅನ್ನೋದು ಇನ್ನೊಂದು ವಿಶೇಷ. ರಾಬರ್ಟ್ ಸಿನಿಮಾ ದರ್ಶನ್ ಸಿನಿ ಇತಿಹಾಸದಲ್ಲೇ ಹೊಸ ದಾಖಲೆ‌ಬರೆದಿದ್ದು ಸಿನಿಮಾದ ಟ್ರೇಲರ್, ಟೀಸರ್ ಹಾಡುಗಳು ಹಾಗೂ ಸಿನಿಮಾದಲ್ಲಿ ಸಖತ್ ಸದ್ದು ಮಾಡಿತ್ತು.

ಇದನ್ನೂ ಓದಿ :‌ Darshan: ಡಿ-ಬಾಸ್ ಹೆಸರಿನಲ್ಲಿ ಸ್ಥಾಪನೆಯಾಯ್ತು ಶಿವಲಿಂಗ….! ವೈರಲ್ ಆಯ್ತು ವಿಡಿಯೋ…!!

ಇದನ್ನೂ ಓದಿ : ದಯವಿಟ್ಟು ಹೋಲಿಕೆ ಮಾಡ್ಬೇಕು, ಇನ್ನು100 ವರ್ಷ ಕಳೆದ್ರೂ ಅದು ದೊಡ್ಮನೆ : ನಟ ದರ್ಶನ್‌

( Darshan Thoogudeepa marriage with girl viral photos)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular