High Court Relief : ಕಾನೂನು ಸಮರದಲ್ಲಿ ಮಂತ್ರಿ‌ಮಾಲ್ ಗೆ ರಿಲೀಫ್ ಕೊಟ್ಟ ಹೈಕೋರ್ಟ್

ಬೆಂಗಳೂರು : ಆಸ್ತಿ ತೆರಿಗೆ ವಿಚಾರದಲ್ಲಿ ಬಿಬಿಎಂಪಿ ಮತ್ತು ಮಂತ್ರಿ ಮಾಲ್ ನಡುವಿನ ಫೈಟ್ ಜೋರಾಗಿದೆ. ಈಗಾಗಲೇ ಮೂರು ಭಾರಿ ಮಂತ್ರಿ ಮಾಲ್ ಗೆ ಬೀಗಮುದ್ರೆ ಕರುಣಿಸಿದ್ದ ಬಿಬಿಎಂಪಿ ಗೆ ತೀವ್ರ ಹಿನ್ನಡೆಯಾಗಿದ್ದು ಕಾನೂನು ಸಮರದಲ್ಲಿ ಸದ್ಯ ಮಂತ್ರಿ ಮಾಲ್ ಗೆ ರಿಲೀಫ್ ( High Court Relief ) ಸಿಕ್ಕಿದೆ. ಅಂದಾಜು 27 ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್ ( Mantri mall ) ಕಳೆದ ಐದು ವರ್ಷದಿಂದ ಕಳ್ಳಾಟವಾಡುತ್ತಲೇ ಬಂದಿತ್ತು. ಹೀಗಾಗಿ ಹಲವಾರು ಭಾರಿ ಮಂತ್ರಿ ಮಾಲ್ ಗೆ ಬಿಬಿಎಂಪಿ ನೊಟೀಸ್ ನೀಡಿತ್ತು.

ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಮಂತ್ರಿ ಮಾಲ್ ಸ್ವಲ್ಪ ಸ್ವಲ್ಪ ತೆರಿಗೆ ಪಾವತಿಸಿ ಕಾಲಾವಕಾಶ ಕೋರುವುದನ್ನೇ ಅಭ್ಯಾಸ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಖಡಕ್ ನೊಟೀಸ್ ರವಾನಿಸಿದ್ದ ಬಿಬಿಎಂಪಿ ಮಂತ್ರಿ‌ಮಾಲ್ ಗೆ ಬೀಗ ಹಾಕಿತ್ತು. ಬಿಬಿಎಂಪಿ ಯ ಕ್ರಮ ಪ್ರಶ್ನಿಸಿದ್ದ ಮಂತ್ರಿ ಮಾಲ್ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಮಂತ್ರಿ ಮಾಲ್ ಗೆ ಹಾಕಿರುವ ಬೀಗವನ್ನು ತೆರೆಯುವಂತೆ ಆದೇಶಿಸಿದೆ.

ಮಾತ್ರವಲ್ಲ ಮಂತ್ರಿ ಮಾಲ್ ಗೆ ತಕ್ಷಣ ಬಿಬಿಎಂಪಿ ಗೆ ಆಸ್ತಿ ತೆರಿಗೆ ಮೊತ್ತದ ಸ್ವಲ್ಪ ಭಾಗ ಎಂದ್ರೇ 4 ಕೋಟಿ ರೂಪಾಯಿ ಚೆಕ್ ನೀಡುವಂತೆ ಆದೇಶಿಸಿದೆ. ಅಲ್ಲದೇ ಡಿಸೆಂಬರ್ 13 ರೊಳಗೆ 2 ಕೋಟಿ ಪಾವತಿಸುವಂತೆಯೂ ಸೂಚಿಸಿದೆ. ಅಲ್ಲದೇ ಮಂತ್ರಿ ಮಾಲ್ ಪಾವತಿಸಬೇಕಿರುವ ಅಸ್ತಿ ತೆರಿಗೆ ವಿವರಗಳನ್ನು ದಾಖಲೆಗಳೊಂದಿಗೆ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.

2018-19 ವರ್ಷದಿಂದ ಅರಂಭಿಸಿ ಇದುವರೆಗೂ ಒಟ್ಟು 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಸಾಕಷ್ಟು ಭಾರಿ ನೋಟಿಸ್ ಕೊಟ್ಟು ಬೇಸತ್ತ ಬಿಬಿಎಂಪಿ ಡಿಸೆಂಬರ್ 6 ರಂದು ಮಂತ್ರಿ ಮಾಲ್ ಗೆ ಬೀಗ ಹಾಕಿದೆ. ಕಳೆದ ಐದುದಿನಗಳಿಂದ‌ಮಂತ್ರಿ ಮಾಲ್ ಗೆ ಬೀಗ ಹಾಕಿರೋದರಿಂದ ಮಾಲ್ ಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು ಬಿಬಿಎಂಪಿ ಕ್ರಮದ ವಿರುದ್ಧ ಮಂತ್ರಿ ಹೈಕೋರ್ಟ್ ಮೊರೆ ಹೋಗಿತ್ತು. ಈಗ ತಕ್ಷಣಕ್ಕೆ ಮಂತ್ರಿ ಗೆ ರಿಲೀಫ್ ಸಿಕ್ಕಂತಾಗಿದ್ದು ಮಂತ್ರಿ ಮಾಲ್ ತೆರಿಗೆ ಬಾಕಿ ಪಾವತಿಸುತ್ತಾ ಅಥವಾ ಕಾನೂನು ನೆರವಿನಿಂದ ಸೇಫಾಗುತ್ತಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ : Mantri Mall Lock : 27 ಕೋಟಿ ತೆರಿಗೆ ಬಾಕಿ : ಮಂತ್ರಿಮಾಲ್‌ಗೆ ಬೀಗ ಜಡಿದ ಬಿಬಿಎಂಪಿ

(‌ High Court Relief given to Mantri mall in the legal battle)

Comments are closed.