ಮೈಸೂರು : ನೀವು ಗಂಡಸೇ ಆಗಿದ್ರೆ, ನೀವು ಅಪ್ಪನಿಗೆ ಹುಟ್ಟಿದ್ದರೆ. ನಿಮ್ಮ ಬಳಿಯಲ್ಲಿರುವ ನನ್ನ ಆಡಿಯೋವನ್ನು ಇಂದು ಬಿಡುಗಡೆ ಮಾಡಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ನಟ ದರ್ಶನ್ ತೂಗುದೀಪ್ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂದೇಶ್ ಹಾಗೂ ಇಂದ್ರಜಿತ್ ಅವರು ಮಾಡಿರುವ ಆಡಿಯೋ ನನ್ನದಲ್ಲ ಎಂದು ಸಂದೇಶ್ ಹೇಳಿದ್ದಾರೆ. ನನ್ನ ಆಡಿಯೋವೊಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಳಿ ಇದೆ. ಅದನ್ನು ಗಂಡಸೇ ಆಗಿದ್ದರೇ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಲಿ. ಆನಂತ್ರ ಏನೇ ಬರಲೀ ನಾನು ಅದನ್ನು ಸವಾಲಾಗಿ ಆಗಿ ಸ್ವೀಕರಿಸುತ್ತೇನೆ. ಆಡಿಯೋದಲ್ಲಿ ತಪ್ಪು ಸಾಭೀತಾದ್ರೆ ನಾನು ಜೈಲಿಗೆ ಹೋಗಲು ಸಿದ್ದ ಎಂದಿದ್ದಾರೆ.

ಈವರೆಗೂ ನಾನು ಸುಮ್ಮನೆ ಇದ್ದೆ. 25 ಕೋಟಿ ವಂಚನೆ ಪ್ರಕರಣವನ್ನು ಡೈವರ್ಟ್ ಮಾಡ್ತಿದ್ದಾರೆ. ಇನ್ಮುಂದೆ ಈ ಕೇಸ್ ಎಲ್ಲಿಗೋ ಹೋಗುತ್ತೆ. ನಾನು ಯಾವುದಾದ್ರೂ ಮರ್ಡರ್ ಮಾಡಿದ್ದೇನಾ. ನನ್ನನ್ನು ಸುಮ್ಮನೆ ಟ್ರಿಗರ್ ಮಾಡ್ತೀರಾ. ಸಿನಿಮಾ ಮಾಡೋದಾದ್ರೆ ಬನ್ನಿ ಸಿನಿಮಾ ಮಾಡೋಣಾ. ಇದೆಲ್ಲಾ ಉಮಾಪತಿಯಿಂದಲೇ ಆಗ್ತಿರೋದು. ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ನಿಮಗ ಯೋಗ್ಯತೆ ಇದ್ದರೆ ಸಿನಿಮಾ ನಿರ್ದೇಶನ ಮಾಡಿ ಎಂದು ಇಂದ್ರಜಿತ್ ಲಂಕೇಶ್ ವಿರುದ್ದ ಎಂದು ಕೆಂಡಾಮಂಡಲವಾಗಿದ್ದಾರೆ.