Corona 3rd Wave : ಮುಂದಿನ 100 ದಿನಗಳು ಡೇಂಜರ್‌ : ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ

ನವದೆಹಲಿ : ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ತಲ್ಲಣ ಮೂಡಿಸಿದೆ. ಇದೀಗ ಭಾರತದ ಪಾಲಿಗೆ ಮುಂದಿನ ನೂರು ದಿನಗಳು ಡೇಂಜರ್‌ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಐಸಿಎಂಆರ್‌ ಅಧ್ಯಯನ ನಡೆಸಿದ್ದು, ಅಧ್ಯಯನದ ವರದಿಯನ್ನು ಮುಂದಿಟ್ಟುಕೊಂಡು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್‌ ಸುದ್ದಿಗಾರರದೊಂದಿಗೆ ಮಾತನಾಡಿದ್ರು, ಭಾರತದಲ್ಲಿ ಕೊರೊನಾ ಸೋಂಕು ಇಳಿಕೆಯಾಗುವ ಪ್ರಮಾಣ ಮಂದಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಮುಂದಿನ ನೂರು ದಿನಗಳ ಕಾಲ ಎಚ್ಚರಿಕೆವಹಿಸಬೇಕಾಗಿದೆ ಎಂದಿದ್ದಾರೆ. ಕೇಂದ್ರ ಸರಕಾರ 66 ಕೋಟಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯನ್ನು ಖರೀದಿ ಮಾಡಿದೆ. ಜುಲೈ ಅಂತ್ಯದ ವೇಳೆಗೆ 50 ಕೋಟಿ ಕೊರೊನಾ ವ್ಯಾಕ್ಸಿನ್‌ ಹಂಚಿಕೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ವಿ.ಕೆ.ಪೌಲ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಹಾಟ್ ಪೋಟೋಸ್ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ ಮಾದಕ ಬೆಡಗಿ ತಾನ್ಯಾ ಹೋಪ್..!!

ದೇಶದ 47 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಹೆಚ್ಚಿದೆ. ಕೊರೊನಾ ಲಾಕ್‌ ಡೌನ್‌ ತೆರವಿನ ಬೆನ್ನಲ್ಲೇ ಜನರು ಕೊರೊನಾ ನಿಯಮಗಳನ್ನು ಮೀರುತ್ತಿದ್ದಾರೆ. ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿರು ವುದು ಕಂಡು ಬರುತ್ತಿದೆ. ಜನರು ಎಚ್ಚರಿಕೆ ವಹಿಸದಿದ್ರೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಹೇಳಿದ್ದಾರೆ.

Comments are closed.