ಮಂಗಳವಾರ, ಜೂನ್ 17, 2025
HomeCinemaಚಿರು - ಮೇಘನಾ ಮಗುವಿಗೆ ಧ್ರುವ ಸರ್ಜಾ ದುಬಾರಿ ಗಿಫ್ಟ್ !

ಚಿರು – ಮೇಘನಾ ಮಗುವಿಗೆ ಧ್ರುವ ಸರ್ಜಾ ದುಬಾರಿ ಗಿಫ್ಟ್ !

- Advertisement -

ಜೂನಿಯರ್ ಚಿರು ಆಗಮನಕ್ಕೆ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬಸ್ಥರು ಕಾತರರಾಗಿದ್ದಾರೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಣ್ಣ ಚಿರುವಿನ ಮಗುವಿಗಾಗಿ ಧ್ರುವಾ ಸರ್ಜಾ ಇದೀಗ ಬೆಳ್ಳಿಯ ತೊಟ್ಟಿಲನ್ನು ಖರೀದಿಸಿದ್ದಾರೆ.

Dhruva Sarja

ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸುತ್ತಲೇ ಕುಸಿದು ಹೋಗಿದ್ದ ಧ್ರುವಾ ಸರ್ಜಾಗೆ ಇದೀಗ ಅಣ್ಣ ಮಗುವಾಗಿ ಹುಟ್ಟಿ ಬರ್ತಾನೆ ಅನ್ನೋ ಆ ಒಂದು ನಂಬಿಕೆ ಮತ್ತೆ ಧ್ರುವಾ ಸರ್ಜಾರ ಬದುಕಲ್ಲಿ ಚೈತನ್ಯ ಮೂಡಿಸಿದೆ. ಅಣ್ಣನಿಲ್ಲದ ಕೊರಗು ಅತ್ತಿಗೆ ಮೇಘನಾರನ್ನು ಕಾಡಬಾರದು ಅನ್ನೋ ಕಾರಣಕ್ಕೆ ಅಕ್ಕರೆಯಿಂದಲೇ ನೋಡಿಕೊಳ್ಳುತ್ತಿದ್ದಾರೆ.

Meghan Raj 1

ಅಣ್ಣನ ಆಸೆಯಂತೆ ಇತ್ತೀಚಿಗಷ್ಟೇ ಮೇಘನಾ ರಾಜ್ ಅವರಿಗೆ ಸೀಮಂತ ಸಮಾರಂಭವನ್ನು ನೆರವೇರಿಸಿದ್ದ ಧ್ರುವ ಸರ್ಜಾ ಇದೀಗ ಜೂನಿಯರ್ ಚಿರು ಆಗಮನಕ್ಕೆ ಕಾಯುತ್ತಿದ್ದಾರೆ. ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿರುವ ಅಣ್ಣನ ಮಗುವಿಗಾಗಿ ಧ್ರುವಾ ಸರ್ಜಾ ಭರ್ಜರಿ ಸ್ವಾಗತಕೋರಲು ಸಜ್ಜಾಗಿದ್ದಾರೆ.

Druva Sarja 2

ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಖರೀದಿ ಮಾಡಿದ್ದಾರೆ. ಅಲ್ಲದೇ ಮೊಮ್ಮಗನಿಗಾಗಿ ಚಿರಂಜೀವಿ ಸರ್ಜಾ ಅವರು ತಾಯಿ ಚಿನ್ನದ ಬಟ್ಟಲನ್ನೂ ಖರೀದಿಸಿದ್ದಾರೆ.

Namami Shankara 1 1

ಸದಾ ಅಣ್ಣನ ನೆನಪಿನಲ್ಲಿಯೇ ಇರುವ ಧ್ರುವಾ ಸರ್ಜಾ ಅಣ್ಣನ ಹುಟ್ಟು ಹಬ್ಬಕ್ಕೆ ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು.

Meghana Raj 2 1

ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.

Meghana Raj 7

ಅಲ್ಲದೇ ಸೀಮಂತ ಶಾಸ್ತ್ರದಲ್ಲಿಯೂ ಅಣ್ಣನನ್ನ ಅತ್ತಿಗೆಯ ಪಕ್ಕದಲ್ಲಿ ನಿಲ್ಲಿಸುವ ಮೂಲಕ ತನ್ನ ಪ್ರೀತಿಯನ್ನು ತೋರ್ಪಡಿಸಿದ್ದರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular