ಸೋಮವಾರ, ಏಪ್ರಿಲ್ 28, 2025
HomeCinemaPrerana Sarja baby girl : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ...

Prerana Sarja baby girl : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

- Advertisement -

Prerana Sarja baby girl : ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮನೆಗೆ ನವರಾತ್ರಿಯ ಶುಭಸಂದರ್ಭದಲ್ಲೇ ಮಹಾಲಕ್ಷ್ಮೀ ಆಗಮಿಸಿದ್ದಾಳೆ. ಧ್ರುವ ಸರ್ಜಾ ಪ್ರೇರಣಾ ದಂಪತಿ ದಸರಾ ಹಬ್ಬದ ಸಂಭ್ರಮದ ಮಧ್ಯೆಯೇ ಪೋಷಕರಾಗಿ ಭಡ್ತಿ ಪಡೆದಿದ್ದು ಹೆಣ್ಣುಮಗು ಜನಿಸಿದೆ ಎಂದು ಧ್ರುವ್ ಸರ್ಜಾ ಮಾಹಿತಿ ನೀಡಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್, ನಿನ್ನೆ ಹೆರಿಗೆ ನೋವಿನಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 2 ರಂದು ಭಾನುವಾರ ಪ್ರೇರಣಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ತಮಗೆ ಹೆಣ್ಣುಮಗುವಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ನಟ ಧ್ರುವ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ಅಜ್ಜಿ ಲಕ್ಷ್ಮೀದೇವಮ್ಮ ಅಗಲಿಕೆ ಬಳಿಕ ಸರ್ಜಾ ಕುಟುಂಬದಲ್ಲಿ ದಃಖ‌ಮಡುಗಟ್ಟಿತ್ತು. ಈ ಮಧ್ಯೆ ಧ್ರುವ ಸರ್ಜಾ ಹಾಗೂ ಪ್ರೇರಣಾ ಮೊದಲ ಮಗುವಿನ ನೀರಿಕ್ಷೆಯಲ್ಲಿರೋ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಪ್ರೇರಣಾಗೆ ದ್ರುವ್ ಸರ್ಜಾ ಕುಟುಂಬ ಅದ್ದೂರಿ ಸೀಮಂತ ಶಾಸ್ತ್ರವನ್ನು ನೆರವೇರಿಸಿತ್ತು. ಬೇಬಿ ಬಂಪ್ ಜೊತೆ ಧ್ರುವ್ ಸರ್ಜಾ ಪ್ರೇರಣಾ ಗ್ರ್ಯಾಂಡ್ ಪೋಟೋಶೂಟ್ ನಡೆಸಿದ್ದು ಆ ವಿಡಿಯೋ ಹಾಗೂ ಪೋಟೋಗಳನ್ನು ಸ್ವತಃ ಧ್ರುವ ಸರ್ಜಾ ಶೇರ್ ಮಾಡಿಕೊಂಡಿದ್ದರು.

ಚಿರು ಸರ್ಜಾ ನಿಧನದ ಬಳಿಕ ಸರ್ಜಾ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿತ್ತು. ಚಿರು ನಿಧನದ ಬಳಿಕ ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೇಘನಾ ಡೆಲಿವರಿ ಬಳಿಕ ಅಣ್ಣ ಮರಳಿ ಬಂದಿದ್ದಾನೆ ಎಂದು ಸಂಭ್ರಮಿಸಿದ್ದ ಧ್ರುವ ಸರ್ಜಾ, ಅಣ್ಣನ ಮಗನಲ್ಲೇ ಅಣ್ಣನನ್ನು ನೋಡಿ ಖುಷಿ ಪಡುತ್ತೇನೆ ಎಂದಿದ್ದರು.

ಅಲ್ಲದೇ ಇತ್ತೀಚಿಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧ್ರುವ್ ಸರ್ಜಾ, ನನಗೆ ಹೆಣ್ಣುಮಗುವಾಗಬೇಕೆಂಬ ಆಸೆ ಇದೆ. ನಮ್ಮ ಮನೆಗೆ ಮತ್ತೆ ಗಂಡು ಮಗು ಬೇಡ. ನಮ್ಮ ಕುಟುಂಬಕ್ಕೆ ಒಬ್ಬನೇ ವಾರಸುದಾರ ರಾಯನ್ ರಾಜ್ ಸರ್ಜಾ. ಅಣ್ಣನ ಮಗನೇ ನನ್ನ ಮಗ. ಹೀಗಾಗಿ ನನಗೆ ಮತ್ತೆ ಗಂಡು ಮಗು ಬೇಡ. ಮಗಳೇ ಹುಟ್ಟಬೇಕೆಂದು ಬಯಸುತ್ತೇನೆ. ಪ್ರೇರಣಾ ಆಸೆಯೂ ಇದೆ ಆಗಿದೆ ಎಂದಿದ್ದರು. ಈಗ ಪ್ರೇರಣಾ ಡೆಲಿವರಿಯಾಗಿದ್ದು, ಧ್ರುವ್ ಸರ್ಜಾ ಆಸೆಯಂತೆ ಹೆಣ್ಣು ಮಗು ಜನಿಸಿದೆ. ಧ್ರುವ್ ಸರ್ಜಾ, ಪ್ರೇರಣಾ ಈ ಖುಷಿಯಲ್ಲಿ ಸ್ಯಾಂಡಲ್ ವುಡ್ ಭಾಗಿಯಾಗಿದ್ದು ಎಲ್ಲರೂ ಧ್ರುವ್ ಕುಟುಂಬಕ್ಕೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ : Dhruva sarja Rayan Raj Sarja : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ

ಇದನ್ನೂ ಓದಿ : Meghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್‌ ಸರ್ಜಾ : ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಕುಟ್ಟಿಮಾ

Dhruva Sarja wife Prerana Sarja gave birth to a baby girl

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular