Zaid Khan : ನನಗೂ ನನ್ನ ಅಪ್ಪನಿಗೆ ಸಂಬಂಧವಿಲ್ಲ ಎಂದ ಝೈದ್ ಖಾನ್‌ : ಟ್ರೋಲ್‌ ಆದ ಜಮೀರ್‌ ಖಾನ್ ಪುತ್ರ

ಶಾಸಕ ಜಮೀರ್‌ ಅಹ್ಮದ್‌‌ ಖಾನ್ ಪುತ್ರ ಝೈದ್‌ ಖಾನ್‌ (Zaid Khan) ನಟನೆಯ ಬನಾರಸ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ನಡುವಲ್ಲೇ ನನಗೂ ನನ್ನ ತಂದೆಗೂ ಸಂಬಧವಿಲ್ಲ ಎನ್ನುವ ಮೂಲಕ ಜಮೀರ್‌ ಪುತ್ರ ಝೈದ್‌ ಖಾನ್‌ ಭರ್ಜರಿ ಟ್ರೋಲ್‌ ಆಗುತ್ತಿದ್ದಾರೆ.

ಜಮೀರ್‌ ಪುತ್ರ ಅಭಿನಯದ ಬನಾರಸ್‌ ಚಿತ್ರ ಹಾಡು ಹಾಗೂ ಟ್ರೇಲರ್ ನ ಮೂಲಕ ಬಹಳಷ್ಟು ಸದ್ದು ಮಾಡುತ್ತಿದೆ. ಈ ಕುರಿತಂತೆ ಮೊನ್ನೆಯಷ್ಟೇ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿತ್ತು. ಬನಾರಸ್‌ ಸಿನಿಮಾದ ಮಾಯಗಂಗೆ ಸಾಕಷ್ಟು ಟ್ರೋಲ್‌ ಆಗಿತ್ತು. ಶಾಸಕ ಜಮೀರ್‌ ಅಹ್ಮದ್‌ ಪುತ್ರ ಝೈದ್ ಖಾನ್‌ (Zaid Khan)ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ರಾಬರ್ಟ್‌ ಖ್ಯಾತಿಯ ನಟಿ ಸೋನಲ್‌ ಮೊಂತೆರೋ ಝೈದ್‌ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ತಿಲಕ್‌ ರಾಜ್‌ ಬಳ್ಳಾಲ್‌ ಬಂಡವಾಳ ಹೂಡಿರುವ ಈ ಸಿನಿಮಾಕ್ಕೆ ಜಯತೀರ್ಥ ಆಕ್ಷನ್‌ ಕಟ್‌ ಹೇಳಿದ್ದಾರೆ.

ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಳಯಾಳಂ ಸೇರಿದಂತೆ ಐದು ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಕುರಿತಂತೆ ಝೈದ್‌ ಖಾನ್‌ ನನಗೂ ಹಾಗೂ ನನ್ನ ತಂದೆಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಟ್ರೋಲಿಗರ ಪಾಲಿಗೆ ಆಹಾರವಾಗಿದ್ದಾರೆ.

ಹೌದು, ಸಿನಿಮಾ ಥಿಯೇಟರ್‌ಗಳಲ್ಲಿ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯನ್ನು ಪ್ರಸಾರ ಮಾಡಬೇಕು ಎಂದು ಸಿಎಂ ಬಳಿ ಮನವಿ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನಟ ಝೈದ್‌ ಖಾನ್‌ ಮಾತಿನ ಬರದಲ್ಲಿ ನನಗೂ ಹಾಗೂ ನನ್ನ ತಂದೆಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಕೆಲವೊಂದು ಕಾರಣಗಳಿಂದಾಗಿ ಜಮೀರ್‌ ಪುತ್ರ ಅಭಿನಯದ ಬನಾರಸ್‌ ಚಿತ್ರ ಬ್ಯಾನ್‌ ಮಾಡಬೇಕು ಎಂದು ಹೇಳಲಾಗುತ್ತಿತ್ತು. ಆ ಕುರಿತಂತೆ ತಂದೆಯ ರಾಜಕೀಯಕ್ಕೂ ಹಾಗೂ ನನ್ನ ಸಿನಿಮಾಗೂ ಸಂಬಧವಿಲ್ಲ ಎಂದು ಹೇಳುವ ಬದಲಾಗಿ ನನಗೂ ಹಾಗೂ ನನ್ನ ಅಪ್ಪನಿಗೂ ಸಂಬಂಧವಿಲ್ಲ ಎಂದು ಹೇಳಿ ಟ್ರೋಲ್‌ ಆಗಿದ್ದಾರೆ.

ಇದನ್ನೂ ಓದಿ : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಇದನ್ನೂ ಓದಿ : 20 ವರ್ಷಗಳ ಕನಸು ಕೊನೆಗೂ ನನಸು – ನಟನಾಗಿ ಬಣ್ಣ ಹಚ್ಚಿದ ಪಶು ವೈದ್ಯ ಮಧುನಂದನ್

ಇದನೂ ಓದಿ : ರೆಟ್ರೋ ಲುಕ್, ಅಂಬಾಸಿಡರ್ ನಲ್ಲಿ ಪ್ರವಾಸ: ವಿದೇಶ ಪ್ರವಾಸದಲ್ಲೂ ಡಾಲಿ ಸಿನಿಮಾ ಪ್ರಮೋಶನ್

ಇದನ್ನೂ ಓದಿ : ಕಾಂತಾರ ವೀಕ್ಷಿಸಿ ಹುಚ್ಚೆದ್ದು ಕುಣಿದ ರಕ್ಷಿತ್​ ಶೆಟ್ಟಿ : ಇಂತಹ ಕ್ಲೈಮಾಕ್ಸ್​​ ಹಿಂದೆಂದೂ ಕಂಡೇ ಇಲ್ಲ ಎಂದ ಸಿಂಪಲ್​ಸ್ಟಾರ್​

ಇದಕ್ಕೂ ಮೊದಲು ಟ್ರೋಲ್‌ ಎಂಬ ಹಾಡಿನ ಮೂಲಕ ಚಿತ್ರತಂಡ ಸುದ್ದಿಯಾಗಿತ್ತು. ಆದರೆ ಇದೀಗ ಸ್ವತಃ ಸಿನಿಮಾದ ನಾಯಕ ನಟನೇ ಟ್ರೋಲ್‌ ಆಗುವಂತಾಗಿದೆ. ಒಂದೆಡೆ ಸಿನಿಮಾ ಟ್ರೇಲರ್‌ ಹಾಗೂ ಹಾಡುಗಳ ಮೂಲಕ ಸುದ್ದಿಯಾದರೆ ಚಿತ್ರದ ನಾಯಕ ನಟ ಟ್ರೋಲ್‌ಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

Zaid Khan said that I am not related to my father: son of trolled Zameer Khan

Comments are closed.