diganth : ಸ್ಯಾಂಡಲ್ವುಡ್ ನಟ ದಿಗಂತ್ ದೂದ್ಪೇಡ ಅಂತಲೇ ಹೆಸರುವಾಸಿಯಾಗಿರುವ ನಟ. ಮಲೆನಾಡಿನ ಸಾಗರದವರಾದ ದಿಗಂತ್ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಖ್ಯಾತಿಯನ್ನು ಗಳಿಸಿರುವ ನಟ. ಗೋವಾದಲ್ಲಿ ಕುಟುಂಬಸ್ಥರ ಜೊತೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಈ ನಟ ಸಮ್ಮರ್ ಶಾಟ್ ಮಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಬಲವಾದ ಪೆಟ್ಟನ್ನು ಮಾಡಿಕೊಂಡಿದ್ದಾರೆ.
ದಿಗಂತ್ ಈ ರೀತಿ ಏಟು ಮಾಡಿಕೊಂಡು ಸುದ್ದಿಯಾಗುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಸಿನಿಮಾ ಶೂಟಿಂಗ್ನಲ್ಲಿ ನನ್ನ ಕಣ್ಣಿಗೆ ಏಟಾಗಿತ್ತು ಎಂದು ಸ್ವತಃ ನಟ ದಿಗಂತ್ ಹೇಳಿಕೊಂಡಿದ್ದರು. ತುಳು ಭಾಷೆಯ ಕಡಲ ಮಗೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ದಿಗಂತ್ ಬಳಿಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಮಿಸ್ ಕ್ಯಾಲಿಫೋರ್ನಿಯಾ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ಮುಂಗಾರು ಮಳೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಟ ದಿಗಂತ್ ನೀಡಿದ್ದಾರೆ. ಮೀರಾ ಮಾಧವ ರಾಘವ, ಗಾಳಿಪಟ, ಮಸ್ತ್ ಮಜಾ ಮಾಡಿ, ಹೌಸ್ಫುಲ್, ಮನಸಾರೆ, ಬಿಸಿಲೆ, ಸ್ವಯಂವರ, ಪಂಚರಂಗಿ, ಜಾಲಿ ಬಾಯ್ಸ್, ಮಿ.ಡುಪ್ಲಿಕೇಟ್, ಲೈಫು ಇಷ್ಟೇನೆ, ಕಾಂಚಾಣ, ಪುತ್ರ, ಫಾರ್ಚುನರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹೀಗೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟ ದಿಗಂತ್ ನಟಿಸಿದ್ದಾರೆ. ಸಧ್ಯ ನಟ ದಿಗಂತ್ ಮುಂಗಾರು ಮಳೆ 2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು.
ನಟ ದಿಗಂತ್ ಸ್ಯಾಂಡಲ್ವುಡ್ನಲ್ಲಿ ಎಷ್ಟರ ಮಟ್ಟಿಗೆ ಹೆಸರು ಮಾಡಿದ್ದರು ಎಂದರೆ ಬಾಲಿವುಡ್ ಚಿತ್ರರಂಗ ಕೂಡ ಇವರನ್ನು ಕೈ ಬೀಸಿ ಕರೆದಿತ್ತು. ಇನ್ನು ಬಾಲಿವುಡ್ನಲ್ಲಿ ದಿಗಂತ್ ಹೊಸ ಅಧ್ಯಾಯ ಬರೆಯುತ್ತಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುವಷ್ಟರಲ್ಲಿ ನಟ ದಿಗಂತ್ ಸಿನಿಮಾ ಶೂಟಿಂಗ್ಗೆಂದು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಣ್ಣಿಗೆ ಏಟು ಮಾಡಿಕೊಂಡು ಸುದ್ದಿಯಾಗಿದ್ದರು.
ವೆಡ್ಡಿಂಗ್ ಪುಲಾವ್ ಎಂಬ ಹಿಂದಿ ಸಿನಿಮಾದ ಶೂಟಿಂಗ್ ಪೂರೈಸಿ ದಿಗಂತ್ ಟಿಕೆಟ್ ಟು ಬಾಲಿವುಡ್ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿಯೇ ಈ ಅವಘಡ ಸಂಭವಿಸಿತ್ತು. ನಾಯಕ ನಟಿ ದಿಗಂತ್ಗೆ ಚೂರಿ ಎಸೆದ ಪರಿಣಾಮ ದಿಗಂತ್ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದ ನಟ ದಿಗಂತ್ ನಾಯಕ ನಟಿ ನನಗೆ ಚೂರಿ ಎಸೆದಿರಲಿಲ್ಲ. ಅವರ ಹೀಲ್ಸ್ ಚಪ್ಪಲಿ ಎಸೆದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ನಾನು ಶೀಘ್ರ ಗುಣಮುಖನಾಗುತ್ತೇನೆ ಎಂದು ದಿಗಂತ್ ಸ್ಪಷ್ಟನೆ ನೀಡಿದ್ದರು. ಅದರಂತೆ ನಟ ದಿಗಂತ್ ಗುಣಮುಖರಾಗಿದ್ದರು.
ಇದೀಗ ಕತ್ತಿಗೆ ಬಲವಾದ ಏಟು ಮಾಡಿಕೊಂಡಿರುವ ನಟ ದಿಗಂತ್ ಮಣಿಪಾಲ್ ಆಸ್ಪತ್ರೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದಾಖಲಾಗಲಿದ್ದಾರೆ. ನಟ ದಿಗಂತ್ ಈ ಸಂಕಷ್ಟವನ್ನೂ ಅತ್ಯಂತ ಸುಲಭವಾಗಿ ಎದುರಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ .
ಇದನ್ನು ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?
ಇದನ್ನೂ ಓದಿ : ನಟ ದಿಗಂತ್ ಕತ್ತಿಗೆ ಏಟು ಬೀಳಲು ಕಾರಣವಾಯ್ತು ಸಮ್ಮರ್ ಶಾಟ್ : ಇಲ್ಲಿದೆ ಘಟನೆ ಬಗೆಗಿನ ಪಿನ್ ಟು ಪಿನ್ ಡಿಟೇಲ್ಸ್
diganth eye damaged in while bollywood movie shooting