ನಟ ದಿಗಂತ್​ ಕತ್ತಿಗೆ ಏಟು ಬೀಳಲು ಕಾರಣವಾಯ್ತು ಸಮ್ಮರ್​ ಶಾಟ್​ : ಇಲ್ಲಿದೆ ಘಟನೆ ಬಗೆಗಿನ ಪಿನ್​ ಟು ಪಿನ್​ ಡಿಟೇಲ್ಸ್​​

ಗೋವಾ : actor diganth gets accident : ಕುಟುಂಬಸ್ಥರ ಜೊತೆಯಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ ನಟ ದಿಗಂತ್​ ಕುತ್ತಿಗೆಗೆ ಬಲವಾದ ಏಟನ್ನು ಮಾಡಿಕೊಂಡಿದ್ದಾರೆ. ಗೋವಾದ ಸಮುದ್ರ ತೀರದಲ್ಲಿ ಸಮ್ಮರ್​ ಶಾಟ್​​​ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ದಿಗಂತ್​ ಕತ್ತಿಗೆ ಬಲವಾದ ಏಟು ಬಿದ್ದಿರುವ ಬಗ್ಗೆ ಕುಟುಂಬಸ್ಥರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಗೋವಾದ ಆಸ್ಪತ್ರೆಯೊಂದರಲ್ಲಿ ನಟ ದಿಗಂತ್​ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ದಿಗಂತ್​ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಏರ್​ಲಿಫ್ಟ್​ ಆಗಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಮಣಿಪಾಲ್​ ಆಸ್ಪತ್ರೆಗೆ ನಟ ದಿಗಂತ್​​ರನ್ನು ಅವರ ಕುಟುಂಬಸ್ಥರೇ ಕರೆ ತರಲಿದ್ದಾರೆ ಎನ್ನಲಾಗಿದೆ. ನಟ ದಿಗಂತ್​ ಕುಟುಂಬಸ್ಥರ ಜೊತೆಯಲ್ಲಿ ಗೋವಾ ಟ್ರಿಪ್​ಗೆ ತೆರಳಿದ್ದು. ಇಲ್ಲಿ ಸಮುದ್ರ ತೀರದಲ್ಲಿ ಸಮ್ಮರ್ ಶಾಟ್​ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ .

ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ದಿಗಂತ್​ ಗಾಳಿಪಟ, ಲೈಫು ಇಷ್ಟೇನೆ, ಪಂಚರಂಗಿ ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿಯನ್ನು ಗಳಿಸಿದ್ದಾರೆ. ಚಂದನವನದ ದೂದ್​ ಪೇಡಾ ಅಂತಲೇ ಖ್ಯಾತಿ ಪಡೆದಿರುವ ನಟ ದಿಗಂತ್​​ರ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಕೆಲವು ದಿನಗಳ ಹಿಂದೆಯಷ್ಟೇ ತೆರೆ ಕಂಡಿದೆ. ಪ್ರಸ್ತುತ ನಟ ದಿಗಂತ್​ ಗಾಳಿಪಟ 2 ಸಿನಿಮಾದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು.

ನಟ ದಿಗಂತ ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ವೇಳೆ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಸ್ವತಃ ದಿಗಂತ್​ರೇ ಈ ಅವಘಡದ ಬಗ್ಗೆ ಮಾಹಿತಿಯನ್ನು ನೀಡಿದ್ದರು.

ಇದನ್ನು ಓದಿ : Ashwin tests Covid Positive : ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ಪಾಸಿಟಿವ್

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

actor diganth gets accident in a disaster on the goa tour

Comments are closed.