ಚೆನ್ನೈ : Mani Ratnam : ಕೊರೊನಾ ಸೋಂಕಿಗೆ ಒಳಗಾಗಿರುವ ಚಲನಚಿತ್ರ ನಿರ್ಮಾಪಕ ಮಣಿರತ್ನಂರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಣಿರತ್ನಂ ಆರೋಗ್ಯ ಸ್ಥಿತಿಯ ಬಗ್ಗೆ ಆಸ್ಪತ್ರೆಯಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಿದ್ದಿಲ್ಲ. ಜುಲೈ15ರಂದು ನಿಧನರಾದ ನಟ ಹಾಗೈ ನಿರ್ಮಾಪಕ ಪ್ರತಾಪ್ ಪೋಥೆನ್ ಅಂತ್ಯಕ್ರಿಯೆಯಲ್ಲಿ ಮಣಿರತ್ನಂ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಜುಲೈ 8ರಂದು ನಡೆದಿದ್ದ ಇವರ ಮುಂದಿನ ಸಿನಿಮಾ ಪೊನ್ನಿಯಿನ್ ಸೆಲ್ವನ್ ಭಾಗ 1ರ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಮಣಿರತ್ನಂ ಭಾಗವಹಿಸಿದ್ದರು.
ಕಲ್ಕಿ ಅವರ ಐತಿಹಾಸಿಕ ಕಾದಂಬರಿಯನ್ನು ಆಧರಿಸಿದ ಸಿನಿಮಾ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ಮಾಪಕ ಮಣಿರತ್ನಂ ನಾಡೋಡಿ ಮನ್ನನ್ ಬಳಿಕ ಈ ಸಿನಿಮಾವನ್ನು ಮಕ್ಕಳ್ ತಿಲಗಂ ಎಂಜಿಆರ್ ಸರ್ ಮಾಡಬೇಕಿತ್ತು. ಈ ಪ್ರಾಜೆಕ್ಟ್ನ ಮೇಲೆ ನಾನು ಮೂರು ಬಾರಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. 1980, 2000 ಹಾಗೂ 2010ರಲ್ಲಿ ಒಟ್ಟು ಮೂರು ಬಾರಿ ನಾನು ಯತ್ನಿಸಿದ್ದೇನೆ. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಚೆನ್ನಾಗಿ ಇರುವುದರಿಂದ ಇದನ್ನು ಸಿನಿಮಾ ಮಾಡಿದ್ದೇನೆ ಎಂದು ಹೇಳಿದ್ದರು.
ಲೈಕಾ ಪ್ರಾಡಕ್ಷನ್ ಸಂಸ್ಥೆಯ ಈ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಸಿನಿಮಾದಲ್ಲಿ ವಿಕ್ರಮ್, ಐಶ್ವರ್ಯ ರೈ, ತ್ರಿಶಾ, ಕಾರ್ತಿ, ಜಯಂ ರವಿ, ಜಯರಾಮ್, ಪಾರ್ಥಿಬನ್, ಲಾಲ್, ಪ್ರಭು, ವಿಕ್ರಮ್ ಪ್ರಭು ಮತ್ತು ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಈ ಸಿನಿಮಾಗೆ ಎ.ಆರ್ ರೆಹಮಾನ್ ಸಂಗೀತವಿದೆ. ರವಿ ವರ್ಮನ್ ಕ್ಯಾಮರಾ ಕೈಚಳಕದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಜುಲೈ 8ರಂದು ರಿಲೀಸ್ ಆದ ಸಿನಿಮಾದ ಟೀಸರ್ನ್ನು ಮೋಹನ್ ಲಾಲ್, ಅಮಿತಾಬ್ ಬಚ್ಛನ್ , ಸೂರ್ಯ ಹಾಗೂ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇದನ್ನು ಓದಿ : KL Rahul Training at NCA : ಕೆ.ಎಲ್ ರಾಹುಲ್ ಬ್ಯಾಟಿಂಗ್ ; ದಿಗ್ಗಜ ಮಹಿಳಾ ಕ್ರಿಕೆಟರ್ ಬೌಲಿಂಗ್, NCAನಲ್ಲಿ ಭರ್ಜರಿ ಪ್ರಾಕ್ಟೀಸ್
ಇದನ್ನೂ ಓದಿ : woman kills husband : ಜೀನ್ಸ್ ಪ್ಯಾಂಟ್ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ
Director Mani Ratnam hospitalised in Chennai after testing positive for coronavirus
Comments are closed.