“ಬಾಹುಬಲಿ” ಸಿನಿಮಾದಿಂದ ನಟ ಪ್ರಭಾಸ್ ಪಡೆದುಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿರೋದು ಗೊತ್ತೇ ಇದೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರೊ ಪ್ರಭಾಸ್‌ಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟ ಉಳಿಸಿಕೊಳ್ಳುವುದಕ್ಕೆ ಪ್ರಭಾಸ್‌ಗೆ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಬೇಕೇ ಬೇಕು. ಅದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದಿಂದ (Director Prashant Neel – Actor Prabhas) ಮಾತ್ರ ಅಂತ ಭವಿಷ್ಯ ನುಡಿಯುತ್ತಿದ್ದಾರೆ.
ಆದರೆ, ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡುತ್ತಿಲ್ಲ. ಸೈಲೆಂಟ್ ಆಗಿಯೇ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಡಾರ್ಲಿಂಗ್ ಫ್ಯಾನ್ಸ್ ಕೊಂಚ ಮಟ್ಟಿಗೆ ಬೇಸರ ಆಗಿದ್ದೂ ಇದೆ. ಆದ್ರೀಗ ಟಾಲಿವುಡ್‌ನಲ್ಲೊಂದು ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ಮೆಗಾ ಮಾಸ್ ಸಿನಿಮಾ ಡೈರೆಕ್ಟರ್ ಒಂದ್ಕಡೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಇನ್ನೊಂದು ಕಡೆ. ಇಬ್ಬರೂ ಜೊತೆಯಾಗಿದ್ದಾರೆ ಅಂದ್ಮೇಲೆ ಹೈ ವೋಲ್ಟೇಜ್ ಆಕ್ಷನ್ ಸಿನಿಮಾ ನೋಡುವುದಕ್ಕೆ ಸಿಗುವುದಂತೂ ಗ್ಯಾರಂಟಿ.
ಅದರಲ್ಲೂ ‘ಕೆಜಿಎಫ್ 2’ ಮೂಲಕ ಸೂಪರ್ ಸಕ್ಸಸ್ ಕಂಡಿರೋ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ಪ್ರಶಾಂತ್ ನೀಲ್‌ಗೂ ‘ಸಲಾರ್’ ಗೆಲ್ಲಬೇಕಿದೆ. ಅದೇ ಇನ್ನೊಂದು ಕಡೆ ಪ್ರಭಾಸ್‌ಗೂ ‘ಸಲಾರ್’ ಗೆಲ್ಲಲೇ ಬೇಕಿದೆ. ಈ ಒತ್ತಡದಲ್ಲಿ ಕೆಲಸ ಮಾಡುತ್ತಿರೋ ಇಬ್ಬರ ಸಿನಿಮಾ ಬಗ್ಗೆ ಟಾಲಿವುಡ್‌ನಿಂದ ಒಂದು ಅಪ್‌ಡೇಟ್ ಸಿಕ್ಕಿದೆ. ಡಾರ್ಲಿಂಗ್ ಪ್ರಭಾಸ್ ಸಿನಿಮಾ ‘ಸಲಾರ್’ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಇನ್ನೇನು ಸಿನಿಮಾ ಮುಗಿಯುತ್ತಿರುವ ಬೆನ್ನಲ್ಲೇ ಟೀಸರ್‌ಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಅದರ ಬಗ್ಗೆನೂ ಅಪ್‌ಡೇಟ್ ಸಿಕ್ಕಿದೆ. ‘ಸಲಾರ್’ ಟೀಸರ್ ರಿಲೀಸ್‌ಗೂ ಮುಹೂರ್ತ ಫಿಕ್ಸ್ ಮಾಡಿದ್ದು, ಏಪ್ರಿಲ್ 2ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Rashmika Mandanna : ನೆಗೆಟಿವಿಟಿಗೆ ತಲೆಕೆಡಿಸಿಕೊಳ್ಳಬೇಡಿ: ಟ್ರೋಲರ್ ಗಳಿಗೆ ಟಾಂಟ್ ಕೊಟ್ಟ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : 12 ಕಿ.ಮೀ ರಸ್ತೆಗೆ ಅಪ್ಪು ಹೆಸರು : ಟ್ವೀಟ್ ಮಾಡಿ ಪ್ರಶಂಸಿದ ಸಂಸದೆ ಸುಮಲತಾ
ಇದನ್ನೂ ಓದಿ : Raveena Tandon : “ಚೂರು ಬಟ್ಟೆ ಹರಿಯದೇ ಬಲತ್ಕಾರದ ಸನ್ನಿವೇಶದಲ್ಲಿ ನಟಿಸಿದವಳು ನಾನೊಬ್ಳೆ”: ರವೀನಾ ಟಂಡನ್
ಪ್ರಶಾಂತ್ ನೀಲ್ ಸಿನಿಮಾ ‘ಸಲಾರ್’ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಟಾಪ್‌ನಲ್ಲಿದೆ. ಹಾಗಂತ ಈ ಸಿನಿಮಾ ಮುಗಿದ ಕೂಡಲೇ ಪ್ರಭಾಸ್ ಫ್ರೀ ಆಗೋದಿಲ್ಲ. ಈ ಸಿನಿಮಾಗೂ ಮುನ್ನ ‘ಆದಿಪುರುಷ್’ ರಿಲೀಸ್ (ಜೂನ್ 16) ಆಗುತ್ತಿರೋದ್ರಿಂದ ಅದರ ಪ್ರಚಾರದಲ್ಲೂ ಭಾಗಿಯಾಗಬೇಕಿದೆ. ಹಾಗೇ ‘ಪ್ರಾಜೆಕ್ಟ್ ಕೆ’,’ಸೂಪರ್ ಡಿಲಕ್ಸ್’,’ಸ್ಪಿರಿಟ್’ ಸಿನಿಮಾಗಳ ಶೂಟಿಂಗ್‌ನಲ್ಲಿ ಭಾಗಿಯಾಗಬೇಕಿದೆ. ಜೊತೆಗೆ ಮುಂದಿನ ವರ್ಷ ‘ಪಠಾಣ್’ ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳಿಗೂ ‘ಸಲಾರ್’ ಗೆಲುವೇ ಮುಖ್ಯ ಎನಿಸಿಕೊಂಡಿದೆ.
Director Prashant Neel – Actor Prabhas Combination Movie “Salaar” Teaser Release Date Fix