Sexual assault-couple arrested : ಮಗುವಿನ ಆರೈಕೆಗೆ ಇದ್ದ ಬಾಲಕಿಗೆ ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ: ದಂಪತಿ ಅರೆಸ್ಟ್‌

ಗುರುಗ್ರಾಮ : (Sexual assault-couple arrested) ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳಿಬ್ಬರು ತಮ್ಮ ಮಗುವನ್ನು ನೋಡಿಕೊಳ್ಳಲು 14 ವರ್ಷದ ಬಾಲಕಿಯೋರ್ವಳನ್ನು ನೇಮಿಸಿಕೊಂಡಿದ್ದು, ಬಾಲಕಿಗೆ ಚಿತ್ರಹಿಂಸೆ ಹಾಗೂ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಘಟನೆ ಗುರುಗ್ರಾಮದ ನ್ಯೂ ಕಾಲೋನಿಯಲ್ಲಿ ನಡೆದಿದೆ.

ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳು ತಮ್ಮ ಮಗುವನ್ನು ನೋಡಿಕೊಳ್ಳಲು 14 ವರ್ಷದ ಬಾಲಕಿಯೋರ್ವಳನ್ನು ಪ್ಲೇಸ್‌ ಮೆಂಟ್‌ ಏಜೆನ್ಸಿಯ ಮೂಲಕ ಐದು ತಿಂಗಳ ಹಿಂದೆ ನೇಮಿಸಿಕೊಂಡಿದ್ದಾರೆ. ಪ್ರತಿದಿನ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ನಿಷ್ಕರುಣೆಯಿಂದ ಹೊಡೆಯುತ್ತಿದ್ದರು. ರಾತ್ರಿಯಿಡೀ ಆಕೆಯನ್ನು ಮಲಗಲು ಬಿಡುತ್ತಿರಲಿಲ್ಲ. ಇದಲ್ಲದೇ ಆಕೆಗೆ ಊಟವನ್ನೂ ಕೊಡದೇ ಉಪವಾಸ ಬೀಳಿಸುತ್ತಿದ್ದರು. ಕಳೆದ ಒಂದು ತಿಂಗಳಿಂದ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳ ಮಿತಿಮೀರಿದ್ದು, ಬಾಲಕಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.

ಇದನ್ನು ತಿಳಿದ ಸಖಿ ಕೇಂದ್ರದ ಉಸ್ತುವಾರಿ ಪಿಂಕಿ ಮಲಿಕ್‌ ಪೊಲೀಸರಿಗೆ ದೂರು ನೀಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗಳು ನೀಡಿದ ಚಿತ್ರಹಿಂಸೆಗೆ ಆಕೆಯ ಬಾಯಿ ಸಂಪೂರ್ಣವಾಗಿ ಊದಿಕೊಂಡಿದ್ದು, ಆಕೆಯ ದೇಹದ ಎಲ್ಲೆಡೆ ಗಾಯದ ಗುರುತುಗಳು ಕಂಡುಬಂದಿವೆ ಎಂದು ಮಲಿಕ್‌ ಆರೋಪಿಸಿದ್ದಾರೆ. ಸಖಿ ಕೇಂದ್ರದ ಉಸ್ತುವಾರಿ ಪಿಂಕಿ ಮಲಿಕ್‌ ನೀಡಿದ ದೂರಿನ ಪ್ರಕಾರ, ಬಾಲಕಿ ಜಾರ್ಖಂಡ್‌ ಮೂಲದವಳಾಗಿದ್ದು, ಆಕೆಯನ್ನು ಪ್ಲೇಸ್‌ ಮೆಂಟ್‌ ಏಜೆನ್ಸಿಯ ಮೂಲಕ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ.

ದಂಪತಿಗಳು ತಮ್ಮ ಮೂರೂವರೆ ವರ್ಷದ ಮಗಳನ್ನು ನೋಡಿಕೊಳ್ಳಲು ಐದು ತಿಂಗಳ ಹಿಂದೆ ಬಾಲಕಿಯನ್ನು ನೇಮಿಸಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಅವಧಿಯಲ್ಲಿ ಪತಿ-ಪತ್ನಿ ಇಬ್ಬರೂ ಆಕೆಯನ್ನು ಪ್ರತಿನಿತ್ಯ ಹೊಡೆಯುತ್ತಿದ್ದರು. ಆಕೆಗೂ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಹುಡುಗಿಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಮರಕ್ಕೆ ಕಟ್ಟಿ ಮೂತ್ರ ಕುಡಿಸಿದ ಗ್ರಾಮಸ್ಥರು

ಇದನ್ನೂ ಓದಿ : Constable committed suicide: ಕುಂದಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇದನ್ನೂ ಓದಿ : Threatening call for mumbai airport: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಹೈಅಲರ್ಟ್ ಘೋಷಣೆ

ಇದೀಗ ದೂರಿನನ್ವಯ ದಂಪತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 342 ಮತ್ತು ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನ್ಯೂ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ದಂಪತಿಯನ್ನು ಬಂಧಿಸಲಾಗುವುದು ಎಂದು ನ್ಯೂ ಕಾಲೋನಿ ಪೊಲೀಸ್ ಠಾಣೆ ಎಸ್‌ಎಚ್‌ಒ ದಿನಕರ್ ತಿಳಿಸಿದ್ದಾರೆ.

Sexual assault-couple arrested : Child care girl tortured, sexually assaulted: Couple arrested

Comments are closed.