disha patani : ಬಾಲಿವುಡ್ನಲ್ಲಿ ತೆರೆಕಂಡ ಎಂಎಸ್ ಧೋನಿ ಸಿನಿಮಾದ ಮೂಲಕ ಹೆಸರು ಮಾಡಿರುವ ನಟಿ ದಿಶಾ ಪಠಾಣಿ ಅದಾದ ಬಳಿಕ ಮಾಡಿದ ಯಾವುದೇ ಸಿನಿಮಾಗಳು ಅಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ. ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದೇ ಇದ್ದರೂ ಸಹ ನಟಿ ದಿಶಾ ಪಠಾಣಿ ತಮ್ಮ ಸೋಶಿಯಲ್ ಮಿಡಿಯಾ ಖಾತೆಗಳ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಎಂದಿಗೂ ವಿಫಲರಾಗಿಲ್ಲ. ಫಿಟ್ನೆಟ್ ವಿಡಿಯೋಗಳು, ಹಾಟ್ ಲುಕ್ಗಳ ಮೂಲಕ ನಟಿ ದಿಶಾ ಪಠಾಣಿ ಪಡ್ಡೆ ಹುಡುಗರ ಮನ ಕದಿಯುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ. ಫಿಟ್ನೆಸ್ ಒಂದನ್ನು ಕಾಯ್ದುಕೊಂಡರೆ ನೀವು ಬಿಕಿನಿಯಲ್ಲ ಸೀರೆ ಧರಿಸಿದರೂ ಸಹಾ ಸೆಕ್ಸಿಯಾಗೇ ಕಾಣುತ್ತೀರಿ ಎಂಬುದನ್ನು ಸಾಬೀತುಪಡಿಸಿದ್ದಾರೆ ನಟಿ ದಿಶಾ ಪಠಾನಿ.

ತಮ್ಮ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಂನಲ್ಲಿ ನಟಿ ದಿಶಾ ಪಠಾಣಿ ಗುಲಾಬಿ ಬಣ್ಣದ ನೇಟೆಡ್ ಸೀರೆಯನ್ನುಟ್ಟು ಕಂಗೊಳಿಸಿದ್ದಾರೆ. ಬೆಳ್ಳಿ ಬಣ್ಣದ ಸ್ಲೀವ್ಲೆಸ್ ಬ್ಲೌಸ್ ದಿಶಾ ಪಠಾಣಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಕೂದಲನ್ನು ಕಟ್ಟದೇ ಹಾಗೇ ಬಿಟ್ಟಿರುವ ದಿಶಾ ಅತ್ಯಂತ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ.

ಕತ್ತಿಗೆ ಯಾವುದೇ ಆಭರಣವನ್ನು ಧರಿಸದೇ ಕಿವಿಯೋಲೆಯನ್ನು ಮಾತ್ರ ಹಾಕಿರುವ ದಿಶಾ ಪಠಾಣಿ ಮತ್ತಷ್ಟು ಹಾಟ್ ಆಗಿ ಕಾಣ್ತಿದ್ದಾರೆ.

ಸದಾ ಗ್ಲಾಮರಸ್ ಲುಕ್ ಮೂಲಕ ಗಮನ ಸೆಳೆಯುವ ದಿಶಾ ಪಠಾಣಿ ಈ ಬಾರಿ ಸೀರೆಯನ್ನುಟ್ಟು ಪಡ್ಡೆ ಹುಡುಗರ ಎದೆ ಝಲ್ ಎನಿಸುವಂತೆ ಮಾಡಿದ್ದಾರೆ.

ದಿಶಾ ಪಠಾಣಿ ಸೀರೆ ಲುಕ್ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಅನೇಕರು ನೀವು ವೆಸ್ಟರ್ನ್ ಬಟ್ಟೆಗಳಿಗಿಂತ ಸೀರೆಯಲ್ಲಿಯೇ ಹೆಚ್ಚು ಚಂದ ಕಾಣುತ್ತೀರಿ ಅಂತಾ ಕೂಡ ಹೇಳ್ತಿದ್ದಾರೆ.

ನಟಿ ದಿಶಾ ಪಠಾಣಿ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಬಾಲಿವುಡ್ನ ಕೇ ಟಿನಾ, ಯೋಧಾ ಹಾಗೂ ತೆಲುಗಿನ ಕೆ ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ.
ಇದನ್ನು ಓದಿ : Sachin Vs Kohli 33 phobia: ಅಂದು ಸಚಿನ್, ಇಂದು ವಿರಾಟ್.. ಬ್ಯಾಟಿಂಗ್ ದಿಗ್ಗಜರಿಗೆ ‘33’ ಫೋಬಿಯಾ
ಇದನ್ನೂ ಓದಿ : man arrested for rape : ನಿರಂತರ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 50ರ ಕಾಮುಕ ಅರೆಸ್ಟ್
disha patani cuts a sensuous figure in pink net saree