amarnath yatra : ಅಮರನಾಥ ಯಾತ್ರೆಯಲ್ಲಿರುವ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ : ಸಿಎಂ ಬೊಮ್ಮಾಯಿ

ಬೆಂಗಳೂರು : amarnath yatra says cm bommai : ಅಮರನಾಥದಲ್ಲಿ ಉಂಟಾಗಿರುವ ಮೇಘಸ್ಫೋಟದ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ನಿವಾಸದ ಬಳಿಯಲ್ಲಿ ಮಾಧ್ಯಮಗಳ ಜೊತೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಅಮರನಾಥದಲ್ಲಿ ಉಂಟಾಗಿರುವ ಮೇಘಸ್ಫೋಟದಿಂದ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಮರನಾಥ ಯಾತ್ರೆಗೆ ನೂರಕ್ಕೂ ಅಧಿಕ ಕನ್ನಡಿಗರು ತೆರಳಿದ್ದು ಎನ್ನಲಾಗಿದ್ದು ಇವರ ರಕ್ಷಣೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ರಾಜ್ಯದಿಂದ ಅಮರನಾಥಕ್ಕೆ ತೆರಳಿರುವ ಕನ್ನಡಿಗರ ರಕ್ಷಣೆಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅದೃಷ್ಠವಶಾತ್​​ ಮೇಘಸ್ಫೋಟದಿಂದ ಯಾವುದೇ ಕನ್ನಡಿಗರಿಗೆ ಹಾನಿ ಉಂಟಾಗಿಲ್ಲ . ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆಯಲ್ಲಿ ನಾವು ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಅಮರನಾಥದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಇಂದು ಸಹಾಯವಾಣಿಯನ್ನು ಆರಂಭಿಸಿದ್ದೇವೆ. ಈಗಷ್ಟೇ ಸಾಕಷ್ಟು ಕರೆಗಳು ಈ ಸಹಾಯವಾಣಿಗೆ ಬಂದಿವೆ. ಇವರೆಲ್ಲರ ರಕ್ಷಣೆ ನಮ್ಮ ಹೊಣೆ. ಎನ್​ಡಿಆರ್​ಎಫ್​, ಎಸ್​ಡಿಆರ್ಎಫ್​ , ಕಾಶ್ಮೀರದ ಪೊಲೀಸರು, ಟಿಬೇಟ್​ ಫೋರ್ಸ್​ ಸೇರಿದಂತೆ ಅಲ್ಲಿನ ರಕ್ಷಣಾ ಸಿಬ್ಬಂದಿಯ ದಂಡೇ ಇದೆ. ಯಾರೇ ಸಮಸ್ಯೆಗೆ ಸಿಲುಕಿದ್ದರೂ ಸಹ ರಾಜ್ಯ ಸರ್ಕಾರ ನೀಡಿರುವ ಸಹಾಯವಾಣಿಗೆ ಕರೆ ಮಾಡಿ. ನಿಮ್ಮನ್ನು ಅಲ್ಲಿಂದ ಕಾಪಾಡುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಭಯ ನೀಡಿದರು.

ಎನ್ ಡಿ ಆರ್ ಎಫ್ – 011-23438252 ಅಥವಾ 011-23438253 ,ಕಾಶ್ಮೀರ ಡಿವಿಷನಲ್ ಹೆಲ್ಪ್ ಲ್ಲೈನ್ – 0914- 2496240 ,ದೇವಸ್ಥಾನ ಮಂಡಳಿಯ ಸಹಯಾವಾಣಿ – 0194-2313149 ಹಾಗೂಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ – 080-1070 ಅಥವಾ 22340676 ಗಳು ಅಮರನಾಥ ಯಾತ್ರೆಯಲ್ಲಿರುವವರ ರಕ್ಷಣೆಗೆ ತೆರೆಯಲಾದ ಸಹಾಯವಾಣಿಯಾಗಿದ್ದು ಅಗತ್ಯವಿರುವವರು ಯಾರೇ ಇದ್ದರೂ ಇದನ್ನು ಬಳಸಿಕೊಳ್ಳಬಹುದಾಗಿದೆ.

ಇದನ್ನು ಓದಿ : disha patani : ಸೀರೆಯನ್ನುಟ್ಟು ಹಾಟ್​ ಆಗಿ ಕಾಣಿಸಿದ ನಟಿ ದಿಶಾ ಪಠಾಣಿ : ಫಿದಾ ಆದ ನೆಟ್ಟಿಗರು

ಇದನ್ನೂ ಓದಿ : ravindra jadeja : ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ ರವೀಂದ್ರ ಜಡೇಜಾ

action taken to bring back kannadigas from amarnath yatra says cm bommai

Comments are closed.