ಅವರಿಬ್ಬರೂ ಒಂದೊಂದು ಕತೆಯಲ್ಲಿ ಹಿರೋ ಹೀರೋಯಿನ್ ಆಗಿದ್ದವರು. ಪರಸ್ಪರ ಪ್ರೀತಿಸುತ್ತಿದ್ದೇನೆ ಎಂದು ಘೋಷಿಸಿಕೊಂಡವರು. ಆದರೆ ಸಿನಿಮಾ ಕತೆಯಂತೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಯಸಿ, ಪ್ರಿಯಕರನಿಗೆ ಕೈಕೊಟ್ಟವರು ಒಂದಾಗಿ ಹೊಸ ಬದುಕು ಕಟ್ಟಿದ್ದರು. ಈಗ ಮತ್ತೆ ತಾವೂ ಬೇರೆಯಾಗಿದ್ದಾರೆ. ಶುದ್ಧ ಒಗಟಿನಂತೆ ಇರೋ ಈ ಕತೆ ಬೇರೆ ಯಾರದ್ದೂ ಅಲ್ಲ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ಟಿವಿ ಸೆಲೆಬ್ರೆಟಿ ದಿವ್ಯ ಅಗರವಾಲ್ (Divya Agarwal) ಮತ್ತು ವರುಣ್ ಸೂದ್ (varun Sood) ಅವರದ್ದು.

ಬಿಗ್ ಬಾಸ್ ರಿಯಾಲಿಟಿ ಶೋದಿಂದ ಆರಂಭವಾಗಿ ನಾಲ್ಕು ವರ್ಷಗಳ ಕಾಲದ ಲೀವಿಂಗ್ ಟುಗೆದರ್ ವರೆಗೆ ಮುಂದುವರೆದಿದ್ದ ಈ ಸಂಬಂಧ ಕೊನೆಗೂ ಬ್ರೇಕ್ ಅಪ್ ನಲ್ಲಿ ಅಂತ್ಯ ವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ನಟಿ ದಿವ್ಯ ಅಗರವಾಲ್ (Divya Agarwal) ಬ್ರೇಕ್ ಅಪ್ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಜೀವನವೇ ಒಂದು ಸರ್ಕಸ್ ಎಂಬ ಟ್ಯಾಗ್ ಲೈನ್ ಜೊತೆ ಬರಹ ಆರಂಭಿಸಿದ ದಿವ್ಯ ಅಗರವಾಲ್ (, ಎಲ್ಲರನ್ನು ಸಂತೋಷವಾಗಿಡಲು ಪ್ರಯತ್ನಿಸಿ. ಯಾವುದು ನಿಜವಲ್ಲ ಎಂದು ನೀರಿಕ್ಷಿಸಿ. ಆದರೆ ನಮ್ಮ ಪ್ರೀತಿ ಕ್ಷೀಣಿಸಲು ಆರಂಭಿಸಿದರೇ ಏನಾಗುತ್ತದೆ? ನನ್ನ ಜೊತೆ ನಡೆಯುತ್ತಿರುವುದಕ್ಕೆ ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ. ನಾನು ಇನ್ಮುಂದೆ ನನಗಾಗಿ ಬದುಕಲು ಬಯಸುತ್ತೇನೆ.

ದೊಡ್ಡ ದೊಡ್ಡ ಹೇಳಿಕೆಗಳು, ಕ್ಷಮಿಸುವ ಮಾತುಗಳು , ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದನ್ನು ಹುಡುಕುವ ಅಗತ್ಯವಿಲ್ಲ ಎಂದಿದ್ದಾರೆ . ಮಾತ್ರವಲ್ಲ ವರುಣ ಹೆಸರು ಹೇಳದೇ ಅವರೊಂದಿಗೆ ಕಳೆದ ಎಲ್ಲ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೇನೆ. ಗೌರವಿಸುತ್ತೇವೆ.ಅವನು ನನ್ನ ಒಬ್ಬ ಅತ್ಯುತ್ತಮ ಗೆಳೆಯ ಎಂದು ದಿವ್ಯ ಅಗರವಾಲ್ ಬರೆದುಕೊಂಡಿದ್ದಾರೆ.
ದಿವ್ಯ ಅಗರವಾಲ್ ಹಾಗೂ ವರುಣ ಸೂದ್ ಜೋಡಿಗೆ ಸಾಕಷ್ಟು ಫ್ಯಾನ್ಸ್ ಇದ್ದು, ಅಭಿಮಾನಿಗಳು ಅವರನ್ನು ನೋಡಿ ಸಂಭ್ರಮಿಸುತ್ತಿದ್ದರು. ಈ ಜೋಡಿ ಹಲವು ಡ್ಯಾನ್ಸ್ ಶೋಗಳಲ್ಲಿ ಭಾಗವಹಿಸಿದ್ದರು. ಈ ಜೋಡಿ ನೋಡಿ ಹಲವರು ಸಂಭ್ರಮಿಸಿದ್ರೇ, ಕೆಲವರು ಹೊಟ್ಟೆ ಉರಿದುಕೊಂಡಿದ್ದರು.

ಅಷ್ಟೇಅಲ್ಲ ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದರು. ಈಗ ಈ ಜೋಡಿ ಬ್ರೇಕ್ ಅಪ್ ಆಫೀಸಿಯಲ್ಲಾಗಿ ಅನೌನ್ಸ್ ಮಾಡಿದೆ. ಇದಕ್ಕೂ ಮುನ್ನ ದಿವ್ಯ ಅಗರವಾಲ್ ಪ್ರಿಯಾಂಕ್ ಶರ್ಮಾ ಅವರನ್ನು ಪ್ರೀತಿಸುತ್ತಿದ್ದರು. ವರುಣ್ ಸೂದ್ ಕೂಡಾ ಬೇನಾಫಾ ರೊಂದಿಗೆ ಪ್ರೀತಿಯಲ್ಲಿದ್ದರು.

ಇದನ್ನೂ ಓದಿ : Google KGF : ಗೂಗಲ್ ತೋರಿಸ್ತಿದೆ ಕೆಜಿಎಫ್ ಸೆಟ್ ದಾರಿ : ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್
ಇದನ್ನೂ ಓದಿ : Sonakshi Sinha : ವಂಚನೆ ಪ್ರಕರಣ, ಸಂಕಷ್ಟಕ್ಕೆ ಸಿಲುಕಿದ ಸೋನಾಕ್ಷಿ ಸಿನ್ಹಾ
Divya Agarwal announces split with Varun Sood relationship