Bigg Boss contestants: ಬಿಗ್ಬಾಸ್ ಸೀಸನ್ 9 ಪ್ರವೀಣರು ಹಾಗೂ ನವೀನರ ನಡುವಿನ ಕಾದಾಟದ ಮೂಲಕ ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತಿದೆ. ಕಳೆದ ವಾರದ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ ಗೈರಾಗಿದ್ದರು.ಹೀಗಾಗಿ ಬಿಗ್ಬಾಸ್ ಕಾರ್ಯಕ್ರಮದ ಕಳೆದ ವಾರದ ಎಲಿಮಿನೇಷನ್ ಪ್ರಕ್ರಿಯೆ ಅತ್ಯಂತ ವಿಭಿನ್ನವಾಗಿ ನಡೆದಿತ್ತು. ಒಟ್ಟು ಏಳು ಸುತ್ತುಗಳಲ್ಲಿ ನಡೆದ ಎಲಿಮಿನೇಷನ್ನಲ್ಲಿ ಕೊನೆಗೆ ನಟಿ ಮಯೂರಿ ಕ್ಯಾತಾರಿ ದೊಡ್ಮನೆಯಿಂದ ಹೊರ ಬಿದ್ದಿದ್ದರು.
ಕಳೆದ ವಾರದ ಎಲಿಮಿನೇಷನ್ ಪ್ರಕ್ರಿಯೆ ಬಳಿಕ ಇದೀಗ ಸ್ಪರ್ಧಿಗಳು ಈ ವಾರದ ಎಲಿಮಿನೇಷನ್ನಿಂದ ಪಾರಾಗೋಕೆ ಇನ್ನಿಲ್ಲದ ಸಾಹಸವನ್ನು ಮಾಡ್ತಿದ್ದಾರೆ. ಸಾನಿಯಾ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಬಿಗ್ಬಾಸ್ ಮನೆ ನಡೆಯುತ್ತಿದೆ. ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ಬಾಸ್ ಮನೆ ಸ್ಪರ್ಧಿಗಳಿಗೆ ದೊಡ್ಡ ಸಪ್ರೈಸ್ ಒಂದು ಬಂದಿದೆ.
ಬೆಳಕಿನ ಹಬ್ಬದ ಪ್ರಯುಕ್ತ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಎಣ್ಣೆ ಸ್ನಾನವನ್ನು ಮಾಡಿದ್ದಾರೆ. ಈ ಸಂಬಂಧ ಸುಂದರವಾದ ಪ್ರೋಮೋವೊಂದನ್ನು ಕಲರ್ಸ್ ಕನ್ನಡ ಶೇರ್ ಮಾಡಿದೆ. ಇದರ ಜೊತೆಯಲ್ಲಿ ಇನ್ನೊಂದು ಪ್ರೋಮೋವನ್ನು ಹರಿಬಿಟ್ಟಿದ್ದಾರೆ.ಅದೇನೆಂದರೆ ಬಿಗ್ಬಾಸ್ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಿಗಳ ಮನೆಯಿಂದ ಸಪ್ರೈಸ್ ಗಿಫ್ಟ್ ತರಿಸಿದ್ದಾರೆ , ಆದರೆ ಈ ಉಡುಗೊರೆಯನ್ನು ಗೆಲ್ಲಬೇಕು ಅಂದರೆ ಸ್ಪರ್ಧಿಗಳು ವಿವಿಧ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಪ್ರೋಮೋದಲ್ಲಿ ಕಾಣುವಂತೆ ಪ್ರಶಾಂತ್ ಸಂಬರಗಿ ತನ್ನ ಮನೆಯ ಗಿಫ್ಟ್ಗಳನ್ನು ಗೆಲ್ಲಲ್ಲು ದಿವ್ಯಾ ಉರುಡುಗರನ್ನು ಸ್ಪರ್ಧೆಗೆ ಇಳಿಸುತ್ತಾರೆ. ಆದರೆ ದಿವ್ಯಾ ಉರುಡುಗ ಆ ಸ್ಪರ್ಧೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗೋದಿಲ್ಲ. ಇದು ದಿವ್ಯಾ ಉರುಡುಗರಲ್ಲಿ ಪಶ್ಚಾತಾಪವನ್ನು ಉಂಟು ಮಾಡಿದೆ. ಅನುಪಮಾ ಬಳಿ ಬರುವ ದಿವ್ಯಾ ಉರುಡುಗ, ಪ್ರಶಾಂತ್ ನನ್ನನ್ನು ನಂಬಿ ಈ ಸ್ಪರ್ಧೆಗೆ ಇಳಿಸಿದ್ದರು. ಆದರೆ ನಾನು ಅದನ್ನು ಗೆಲ್ಲುವಲ್ಲಿ ಸೋತಿದ್ದೇನೆ. ಅವರು ಮನೆಯಿಂದ ಬಂದ ಸಪ್ರೈಸ್ ಗಿಫ್ಟ್ನ್ನು ಕುತೂಹಲದಿಂದ ನೋಡುವಾಗ ನನಗೆ ತುಂಬಾನೇ ನೋವಾಯ್ತು ಎಂದು ಹೇಳಿಕೊಂಡು ಅತ್ತಿದ್ದಾರೆ.
ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರ್ಗಿ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿಗಳಾಗಿದ್ದರೂ ಸಹ ಇಬ್ಬರ ನಡುವಿನ ತಾಳ ಮೇಳ ಅಷ್ಟೇನು ಚೆನ್ನಾಗಿಲ್ಲ. ಇಬ್ಬರ ನಡುವೆ ಶೀತಲ ಸಮರವೊಂದು ನಡೆಯುತ್ತಲೇ ಇದೆ. ಎದುರಿಗೆ ಒಬ್ಬರಿಗೊಬ್ಬರು ಒಳ್ಳೆಯವರಂತೆ ಮಾತನಾಡಿಸಿಕೊಂಡರೂ ಅವರ ನಡುವಿನ ಶೀತಲ ಸಮರ ಮನೆಯವರಿಗೆ ಗೊತ್ತಾಗುವಷ್ಟರ ಮಟ್ಟಿಗೆ ಗಾಢವಾಗಿದೆ .
ಇದನ್ನೂ ಓದಿ : T20 World Cup 2022 : ಟಿ20 ವಿಶ್ವಕಪ್: ಸಕ್ಸಸ್’ಫುಲ್ ಚೇಸ್’ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 500ಕ್ಕೂ ಹೆಚ್ಚು!
Diwali Dhamaka for Bigg Boss contestants: Surprise gift from home