sextortion fraud :ಅಪರಿಚಿತ ನಂಬರ್​​ನಿಂದ ಬಂದ ವಿಡಿಯೋ ಕಾಲ್​ ರಿಸೀವ್​ ಮಾಡಿ ಲೈಂಗಿಕ ವಂಚನೆಗೊಳಗಾದ ಪ್ರತಿಷ್ಠಿತ ಕಂಪನಿ ಸಿಇಓ

ಮುಂಬೈ : sextortion fraud : ಪ್ರತಿಷ್ಠಿತ ಕಂಪನಿಯೊಂದರಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 59 ವರ್ಷದ ವ್ಯಕ್ತಿಯೊಬ್ಬರು ಲೈಂಗಿಕ ವಂಚನೆಗೆ ಒಳಗಾದ ಘಟನೆಯೊಂದು ವರದಿಯಾಗಿದೆ. ಸಿಇಓ ಆಗಿರುವ ಇವರಿಗೆ ಅಪರಿಚಿತ ನಂಬರ್​ನಿಂದ ವಾಟ್ಸಾಪ್​ ಕರೆ ಬಂದಿತ್ತು. ಆ ಕರೆಯನ್ನು ರಿಸೀವ್​ ಮಾಡಿದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಅಶ್ಲೀಲವಾಗಿ ನಡೆದುಕೊಂಡಿದ್ದಾಳೆ.


ಕೂಡಲೇ ಸಂತ್ರಸ್ತ ವ್ಯಕ್ತಿಯು ಕರೆಯನ್ನು ಕಟ್​ ಮಾಡಿದ್ದಾರೆ. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ಅಪರಿಚಿತ ನಂಬರ್​ನಿಂದ ಎಡಿಟ್​ ಮಾಡಿದ ಅಶ್ಲೀಲ ವಿಡಿಯೋವನ್ನು ಸೆಂಡ್​ ಮಾಡಿದ್ದಾರೆ. ಅಲ್ಲದೇ ಈ ಕೂಡಲೇ ಹಣ ನೀಡದೇ ಹೋದಲ್ಲಿ ವಿಡಿಯೋ ಕಾಲ್​ ಮೂಲಕ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ನಿಮ್ಮ ವಿಡಿಯೋವನ್ನು ಸ್ನೇಹಿತರಿಗೆ ಹಾಗೂ ಸಂಬಂಧಿಗಳಿಗೆ ಶೇರ್​ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಮರ್ಯಾದೆಗೆ ಅಂಜಿದ ವ್ಯಕ್ತಿಯು ಕೂಡಲೇ 31 ಸಾವಿರದ 500 ರೂಪಾಯಿಗಳನ್ನು ನೀಡಿದ್ದಾರೆ.


ಖಾರ್​ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಅಕ್ಟೋಬರ್​ ನಾಲ್ಕರಂದು ಈ ಘಟನೆ ಸಂಭವಿಸಿದೆ. ಸಂತ್ರಸ್ತ ವ್ಯಕ್ತಿಯು ಮನೆಯಲ್ಲಿದ್ದ ಸಂದರ್ಭದಲ್ಲಿ ಅಪರಿಚಿತ ನಂಬರ್​ನಿಂದ ವಾಟ್ಸಾಪ್​ ವಿಡಿಯೋ ಕಾಲ್​ ಬಂದಿತ್ತು. ವ್ಯಕ್ತಿಯು ಕಾಲ್​ ರಿಸೀವ್​ ಮಾಡುತ್ತಿದ್ದಂತೆಯೇ ಅ ಕಡೆಯಿಂದ ಮಹಿಳೆಯು ಅಶ್ಲೀಲವಾಗಿ ವಿಡಿಯೋ ಕಾಲ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಕೂಡಲೇ ವ್ಯಕ್ತಿಯು ಕರೆಯನ್ನು ಕಟ್​ ಮಾಡಿದ್ದಾರೆ.


ಘಟನೆ ನಡೆದು ಕೆಲವು ಗಂಟೆಗಳ ಬಳಿಕ ವ್ಯಕ್ತಿಗೆ ಅದೇ ಸಂಖ್ಯೆಯಿಂದ ಮೆಸೇಜ್​ ಒಂದು ಬಂದಿತ್ತು. ಮೆಸೇಜ್​ ಪರಿಶೀಲನೆ ಮಾಡಿ ನೋಡಿದಾಗ ವಿಡಿಯೋವನ್ನು ಮಾರ್ಫ್​ ಮಾಡಿ ಕಳುಹಿಸಲಾಗಿತ್ತು. ಈ ವಿಡಿಯೋವನ್ನು ನೋಡಿ ಸಿಇಓ ಆಘಾತಕ್ಕೆ ಒಳಗಾಗಿದ್ದಾರೆ. ಈ ವಿಡಿಯೋವನ್ನು ಡಿಲೀಟ್​ ಮಾಡಬೇಕು ಅಂಧರೆ ಹಣ ನೀಡಬೇಕು ಅಂತಾ ಕಿಡಿಗೇಡಿಗಳು ಬ್ಲಾಕ್ಮೇಲ್​ ಮಾಡಿದ್ದಾರೆ.


ವಂಚಕರ ಬೆದರಿಕೆಗೆ ಬೆದರಿದ ವ್ಯಕ್ತಿಯು ಕೂಡಲೇ 31,500 ರೂಪಾಯಿಯನ್ನು ಕಳುಹಿಸಿದ್ದಾರೆ. ಹಣ ಪಾವತಿ ಮಾಡಿದ ಬಳಿಕ ವಂಚಕರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತ ವ್ಯಕ್ತಿಯು ವಂಚಕರ ಸಂಖ್ಯೆಯನ್ನು ಬ್ಲಾಕ್​ ಮಾಡಿದ್ದಾರೆ. ಆದರೆ ಇನ್ನೂ ಎರಡು ನಂಬರ್​​ನಿಂದ ವಂಚಕರು ಬ್ಲಾಕ್​ ಮೇಲ್​ ಮಾಡಿದ್ದಾರೆ. ವಂಚಕರ ಕಾಟವನ್ನು ತಡೆಯಲಾರದೇ ಸಂತ್ರಸ್ತ ವ್ಯಕ್ತಿಯು ಪೊಲೀಸರಿಗೆ ದೂರನ್ನು ನೀಡಿದ್ದಾರೆ.


ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384 , 385 , 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 67A (ಲೈಂಗಿಕವಾಗಿ ಒಳಗೊಂಡಿರುವ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ : Bigg Boss contestants: ಬಿಗ್​ಬಾಸ್​ ಸ್ಫರ್ಧಿಗಳಿಗೆ ದೀಪಾವಳಿ ಧಮಾಕಾ : ಮನೆಯಿಂದ ಬಂದಿದೆ ಸಪ್ರೈಸ್​ ಗಿಫ್ಟ್​ , ಕಣ್ಣೀರಿಟ್ಟ ದಿವ್ಯಾ ಉರುಡುಗ

ಇದನ್ನೂ ಓದಿ : WhatsApp services restored :ವಾಟ್ಸಾಪ್​​ ಸೇವೆ ಪುನಾರಂಭ : ನಿಟ್ಟುಸಿರು ಬಿಟ್ಟ ಬಳಕೆದಾರರು

Mumbai: Khar resident duped, loses Rs 31k in sextortion fraud

Comments are closed.