ಮಂಗಳೂರು : pruthvi ambaar mother passes away : ದಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಯನ್ನು ಗಳಿಸಿರುವ ನಟ , ಕರಾವಳಿ ಹುಡುಗ ಪೃಥ್ವಿ ಅಂಬರ್ಗೆ ಮಾತೃ ವಿಯೋಗವಾಗಿದೆ . ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟ ಪೃಥ್ವಿ ಅಂಬರ್ ತಾಯಿ ಸುಜಾತಾ ವೀರಪ್ಪ ಶುಕ್ರವಾರದಂದು ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಇಂದು ಸುಜಾತಾ ವೀರಪ್ಪ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೃಥ್ವಿ ಅಂಬರ್ ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಪೃಥ್ವಿ ಅಂಬರ್ 2008ರಲ್ಲಿ ಪ್ರಸಾರವಾಗ್ತಿದ ರಾಧಾ ಕಲ್ಯಾಣ ಧಾರವಾಹಿಯಿಂದ ಕೊನೆಯದಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್ನಲ್ಲಿಯೂ ನಟಿಸಿದ್ದಾರೆ. ಡ್ಯಾನ್ಸರ್ ಕೂಡ ಆಗಿರು ಪೃಥ್ವಿ ಅಂಬರ್ ಸಾಕಷ್ಟು ತುಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆದರೆ ಇವರ ವೃತ್ತಿ ರಂಗಕ್ಕೆ ಬ್ರೇಕ್ ನೀಡಿದ ಸಿನಿಮಾ ಅಂದರೆ ಅದು ದಿಯಾ. ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇದಾದ ಬಳಿಕ ಪೃಥ್ವಿ ಅಂಬರ್ ಕನ್ನಡ ಚಿತ್ರರಂಗದ ಹೆಸರಾಂತ ನಟರ ಸಾಲಿನಲ್ಲಿ ಸ್ಥಾನ ಪಡೆದರು.
ಇದಾದ ಬಳಿಕ ನಟ ಶಿವಣ್ಣ ಜೊತೆಯಲ್ಲಿ ನಟಿಸುವ ಅವಕಾಶ ಪೃಥ್ವಿ ಅಂಬರ್ರನ್ನು ಹುಡುಕಿಕೊಂಡು ಬಂತು. ಬೈರಾಗಿ ಸಿನಿಮಾದಲ್ಲಿ ವಾತಾಪಿ ಎಂಬ ಪಾತ್ರಕ್ಕೆ ಪೃಥ್ವಿ ಬಣ್ಣ ಹಚ್ಚಿದ್ದರು. ಈ ಪಾತ್ರ ಕೂಡ ಪೃಥ್ವಿ ಅಂಬರ್ಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ. ಇದಾದ ಬಳಿಕ ಶುಗರ್ ಲೆಸ್, ಲೈಫ್ ಈಸ್ ಬ್ಯೂಟಿಫುಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟ ಪೃಥ್ವಿ ಅಂಬರ್ ನಾಯಕ ನಟನಾಗಿ ಕಾಣಿಸಿಕೊಂಡು ಸೈ ಎನಿಸಿದ್ದಾರೆ.
ನಟ ಪೃಥ್ವಿ ಅಂಬರ್ ತಾಯಿ ಸುಜಾತಾ ವೀರಪ್ಪ ದುರ್ಗಾ ಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದರು. ಸುಜಾತಾ ವೀರಪ್ಪ ನಿಧನದಿಂದ ಪೃಥ್ವಿ ಅಂಬರ್ ಕುಟುಂಬದಲ್ಲಿ ದುಃಖದ ಕಾರ್ಮೋಡ ಕವಿದಂತಾಗಿದೆ.
ಇದನ್ನು ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ
ಇದನ್ನೂ ಓದಿ : NEET MDS:ನೀಟ್ ಎಂಡಿಎಸ್ ಮೆರಿಟ್ ಲಿಸ್ಟ್ ಬಿಡುಗಡೆ; ಮಾರ್ಕ್ ಕಾರ್ಡ್ ಜುಲೈ 27ಕ್ಕೆ
diya fame actor pruthvi ambaar mother passes away funeral today