ಭಾನುವಾರ, ಏಪ್ರಿಲ್ 27, 2025
HomeCinemaಕೆಜಿಎಫ್-2 ಸಿನಿಮಾ ನಿಮ್ಮ ಮನೆ ಬಾಗಿಲಿಗೆ : ಯಶ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್

ಕೆಜಿಎಫ್-2 ಸಿನಿಮಾ ನಿಮ್ಮ ಮನೆ ಬಾಗಿಲಿಗೆ : ಯಶ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್

- Advertisement -

ಕನ್ನಡ ಚಿತ್ರರಂಗಕ್ಕೆ ಹೊಸ‌ ದಿಕ್ಕನ್ನು ತೋರಿದ ಸಿನಿಮಾ ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾ. ಸಿನಿರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದ ಕೆಜಿಎಫ್-2ಸಿನಿಮಾ ಇನ್ನೂ ಹೊಸ‌ಹೊಸ‌ದಾಖಲೆಗಳನ್ನು ಬರೆಯುತ್ತಲೇ‌ ಇದೆ. ಈ ಸಿನಿಮಾದಿಂದ‌ ಸ್ಯಾಂಡಲ್ ವುಡ್ ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಈ ಮಧ್ಯೆ ಥಿಯೇಟರ್ ಹಾಗೂ ಓಟಿಟಿಯಲ್ಲಿ ಮೋಡಿ ಮಾಡಿದ್ದ ಕೆಜಿಎಫ್-2 ಸಿನಿಮಾ (KGF 2 Zee Kannada) ಸದ್ಯದಲ್ಲೇ ನಿಮ್ಮ ಮನೆ ಟಿವಿಗೂ ಬರಲಿದೆ.

ಇನ್ನೂ ಕೆಜಿಎಫ್-2 ಸಿನಿಮಾ ನೋಡೋಕೆ ಆಗಲಿಲ್ಲ ಅಂತ ಬೇಸರಗೊಂಡಿರೋ ಯಶ್ ಅಭಿಮಾನಿಗಳಿಗೆ ಇಲ್ಲೊಂದು ಸಿಹಿಸುದ್ದಿ ಕಾದಿದೆ. ನಿಮ್ಮ ಬೇಸರವನ್ನು ದೂರ ಮಾಡೋಕೆ ನಿಮ್ಮ ಮನೆಗೆ ಅಂದ್ರೇ ನಿಮ್ಮ ಮನೆ ಟಿವಿಗೆ ಬರಲು ಕೆಜಿಎಫ್-೨ ಸಿದ್ಧವಾಗಿದೆ. ಭಾರಿ ಪೈಪೋಟಿಯ ಬಳಿಕ ಕೆಜಿಎಫ್-2 ಸಿನಿಮಾದ ಟಿವಿ ಹಕ್ಕನ್ನು ಝೀ ಟಿವಿ ಪಡೆದುಕೊಂಡಿದೆ. ಹೀಗಾಗಿ ಸದ್ಯದಲ್ಲೇ‌ ಕೆಜಿಎಫ್-2 ಸಿನಿಮಾ ಝೀ ಟಿವಿಯಲ್ಲಿ ಬರಲಿದೆ.

ಅತೀ ಶೀಘ್ರದಲ್ಲೇ ಝೀ ಟಿವಿಯಲ್ಲಿ ಕೆಜಿಎಫ್-2 ಸಿನಿಮಾ ಪ್ರಸಾರವಾಗಲಿದೆ. ಆದರೆ ಝಿ ವಾಹಿನಿ ಯಾವಾಗ ಸಿನಿಮಾ ಪ್ರದರ್ಶನವಾಗಲಿದೆ ಎಂಬುದನ್ನು ಖಚಿತಪಡಿಸಿಲ್ಲ. ಆದರೆ ಅವನು ಬರ್ತಿದ್ದಾನೆ ಅದು ಓನ್ ವೇ ನಲ್ಲಿ ಎನ್ನುವ ಮೂಲಕ ಪ್ರೇಕ್ಷಕರ ಕುತೂಹಲ ಹಾಗೂ ಎದೆ ಬಡಿತ ಹೆಚ್ಚಿಸಿದೆ. ಈ ಬಗ್ಗೆ ಝೀ ವಾಹಿನಿ ಟ್ರೇಲರ್ ಕೂಡ ರಿಲೀಸ್ ಮಾಡಿದ್ದು, ಪ್ರೇಕ್ಷಕರು ಟ್ರೇಲರ್ ನೋಡಿ ಮತ್ತಷ್ಟು ಖುಷಿಯಾಗಿದ್ದಾರೆ. ಸಾಮಾನ್ಯವಾಗಿ ಸ್ವಾತಂತ್ರೋತ್ಸವ,ದೀಪಾವಳಿ,ದಸರಾ ವೇಳೆಗೆ ಹೊಚ್ಚ ಹೊಸ ಸಿನಿಮಾ ಗಳನ್ನು ತೆರೆಗೆ ತರೋದು ವಾಡಿಕೆ. ಹೀಗಾಗಿ ಬಹುತೇಕ ಗಣೇಶ ಹಬ್ಬದ ವೇಳೆಗೆ ಕೆಜಿಎಫ್-2 ಸಿನಿಮಾ ಝೀ‌ ಕನ್ನಡದಲ್ಲಿ ಪ್ರಸಾರವಾಗಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

ಸದ್ಯ ಕೆಜಿಎಫ್-2 ಸಿನಿಮಾ ಭಾರತ ಸಿನಿರಂಗದ ಎಲ್ಲ ಸಾರ್ವಕಾಲಿನ ದಾಖಲೆಗಳನ್ನು ಮುರಿದಿದ್ದು ಸಾವಿರ ಕೋಟಿ ಕ್ಲಬ್ ಸೇರಿದೆ. ಇನ್ನೂ ನಟ ಯಶ್ ಸ್ಟಾರ್ ವಾಲ್ಯು ಕೂಡ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾದ ಬಗ್ಗೆಯೂ ನೊರೆಂಟು ರೂಮರ್ ಗಳು ಹಬ್ಬಿವೆ. ಯಶ್ 19 ನೇ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಕೆಜಿಎಫ್-2 ಸಿನಿಮಾ ಥಿಯೇಟರ್ ನಲ್ಲಿ ಹಲವು ದಾಖಲೆ ಬರೆದಿದ್ದು ಇನ್ನು ಟಿವಿಯಲ್ಲಿ ಪ್ರಸಾರವಾಗೋದು ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Ramya Re Entry : ರಮ್ಯನಿಗೆ ಜೊತೆಯಾದ ರಾಜ್ ಶೆಟ್ಟಿ: ಸ್ಯಾಂಡಲ್ ವುಡ್ ಮೋಹಕ ತಾರೆ ಗ್ರ್ಯಾಂಡ್ ರೀ ಎಂಟ್ರಿ

ಇದನ್ನೂ ಓದಿ : Shilpa Shetty broke her leg: ಶೂಟಿಂಗ್ ವೇಳೆ ಅವಘಡ: ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

Do you know when the movie KGF 2 will be released in Zee Kannada

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular