national flag :ಹರ್​ಘರ್​ ತಿರಂಗಾ ಅಭಿಯಾನ : ಮನೆಯಲ್ಲೇ ತ್ರಿವರ್ಣ ಧ್ವಜ ಹಾರಿಸಿದವರು ರಾಷ್ಟ್ರಧ್ವಜದ ಘನತೆ ಮರೆಯಬೇಡಿ

national flag : ದೇಶಾದ್ಯಂತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಜೋರಾಗಿದೆ. ಕೇಂದ್ರ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ಪ್ರತಿ ಮನೆ ಮನೆಗೂ ಅವಕಾಶವನ್ನು ನೀಡಿದ್ದು ಇಂದಿನಿಂದಲೇ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ನೆನಪಿರಲಿ ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ತ್ರಿವರ್ಣ ಧ್ವಜಕ್ಕೆ ಗೌರವವನ್ನು ನೀಡುವುದು ಪ್ರತಿಯೊಬ್ಬ ದೇಶ ವಾಸಿಯ ಕರ್ತವ್ಯವಾಗಿದೆ.

ಪ್ರತಿಯೊಬ್ಬರ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕೇಂದ್ರ ಸರ್ಕಾರವು ಈ ಬಾರಿ ರಾಷ್ಟ್ರ ಧ್ವಜ ಸಂಹಿತೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ರಾಷ್ಟ್ರ ಧ್ವಜವನ್ನು ಅವರೋಹಣ ಮಾಡಿದ ಬಳಿಕ ರಾಷ್ಟ್ರಧ್ವಜವನ್ನು ಸರ್ಕಾರಿ ಶಿಷ್ಟಾಚಾರದಂತೆಯೇ ಮಡಚಿ ಇಡುವುದನ್ನು ಮರೆಯುವಂತಿಲ್ಲ. ಈ ರಾಷ್ಟ್ರ ಧ್ವಜವನ್ನು ಮಡಚುವಾಗ ನೀವು ಇನ್ನೊಬ್ಬರ ಸಹಾಯವನ್ನು ಪಡೆಯಬೇಕು. ಬಿಳಿ ಬಣ್ಣದ ಹಿಂದೆ ಹಸಿರು ಬಣ್ಣವನ್ನು ಮಡಚಬೇಕು. ಒಂದು ಎಳೆ ಹಸಿರು ಬಣ್ಣ ಕಾಣುವಂತಿರಲಿ. ಇದಾದ ಬಳಿಕ ಕೇಸರಿ ಬಣ್ಣವನ್ನು ಸಹ ಹಸಿರು ಬಣ್ಣವನ್ನು ಬಿಳಿ ಬಣ್ಣದ ಕೆಳಗೆ ಮಡಚಿದಂತೆ ಇದನ್ನೂ ಮಡಚಬೇಕು. ಈಗ ಅಶೋಕ ಚಕ್ರ ಮಾತ್ರ ಕಾಣುವಂತೆ ಬಿಳಿ ಬಣ್ಣದ ಎರಡೂ ತುದಿಗಳನ್ನು ಅಶೋಕ ಚಕ್ರದ ಹಿಂಬಧಿಯಲ್ಲಿ ಮಡಚಬೇಕು. ಬಳಿಕ ಇದನ್ನು ಸೊಂಟದಿಂದ ಕೆಳಗೆ ತರದೇ ಮನೆಯಲ್ಲಿ ಶುದ್ಧವಾದ ಸ್ಥಳದಲ್ಲಿ ರಾಷ್ಟ್ರ ಧ್ವಜಕ್ಕೆ ಯಾವುದೇ ರೀತಿ ಹಾನಿ ಉಂಟಾಗದಂತೆ ಇರಿಸಬೇಕು.

ಹಿಂದೆಲ್ಲ ರಾಷ್ಟ್ರ ಧ್ವಜವನ್ನು ಸೂರ್ಯಾಸ್ತದ ಒಳಗಾಗಿ ಇಳಿಸುವುದು ಕಡ್ಡಾಯವಾಗಿತ್ತು. ಆದರೆ ಕಲಂ 11 ರ ಪ್ಯಾರಗ್ರಾಫ್ 2.2 ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ರಾತ್ರಿ ಕೂಡ ಧ್ವಜವನ್ನು ಅವರೋಹಣ ಮಾಡದೇ ಇಡಬಹುದಾಗಿದೆ.


ರಾಷ್ಟ್ರಧ್ವಜವನ್ನು ಆರೋಹಣ ಮಾಡುವ ಮುನ್ನ ನೆನಪಿನಲ್ಲಿಡಬೇಕಾದ ಅಂಶಗಳು ಇಲ್ಲಿವೆ ನೋಡಿ :

  • ರಾಷ್ಟ್ರಧ್ವಜವನ್ನು ಕೇಸರಿ ಬಣ್ಣ ಮೇಲಾಗಿಯೇ ಹಾರಿಸಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರ ಧ್ವಜವನ್ನು ತಲೆ ಕೆಳಗು ಮಾಡಿ ಹಾರಿಸುವಂತಿಲ್ಲ.
  • ಯಾವುದೇ ಕಾರಣಕ್ಕೂ ರಾಷ್ಟ್ರ ಧ್ವಜವನ್ನು ಹರಿಯುವಂತಿಲ್ಲ. ಅಲ್ಲದೇ ಹರಿದ ರಾಷ್ಟ್ರಧ್ವಜವನ್ನು ಹಾರಿಸುವಂತೆಯೂ ಇಲ್ಲ. ಅಲಂಕಾರಿಕ ವಸ್ತುವಾಗಿ ರಾಷ್ಟ್ರಧ್ವಜವನ್ನು ಬಳಕೆ ಮಾಡಬಾರದು. ಉಡುಪಿನಲ್ಲಿ ಸೊಂಟಕ್ಕಿಂತ ಕೆಳಗೆ ತ್ರಿವರ್ಣ ಧ್ವಜವನ್ನು ಉಪಯೋಗಿಸುವಂತಿಲ್ಲ.
  • ರಾಷ್ಟ್ರ ಧ್ವಜದ ಮೇಲೆ ಇನ್ಯಾವುದೇ ಧ್ವಜವನ್ನು ಹಾರಿಸುವಂತಿಲ್ಲ. ಕತ್ತರಿಸಿದ ಬಳಿಕ ರಾಷ್ಟ್ರ ಧ್ವಜವನ್ನು ಬಳಕೆ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ಧ್ವಜವನ್ನು ನೆಲಕ್ಕೆ ತಾಕಿಸುವಂತಿಲ್ಲ.
  • ರಾಷ್ಟ್ರ ಧ್ವಜವನ್ನು ರಸ್ತೆಯಲ್ಲಿ , ಕಸದ ಬುಟ್ಟಿಗೆ ಎಸೆಯುವಂತಿಲ್ಲ. ಧ್ವಜವು ಹಾನಿಗೊಳಗಾಗಿದ್ದಲ್ಲಿ, ಬಳಕೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದಾದಲ್ಲಿ ಯಾರಿಗೂ ಕಾಣದಂತೆ ಖಾಸಗಿಯಾಗಿ ಧ್ವಜವನ್ನು ಅಗ್ನಿಗೆ ಅರ್ಪಿಸಬೇಕು.


ರಾಷ್ಟ್ರ ಧ್ವಜಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಕೇಂದ್ರ ಸರ್ಕಾರವು ಆಗಸ್ಟ್​ 13ರಿಂದ ಆಗಸ್ಟ್​ 15ರವರೆಗೆ ಮನೆಗಳಲ್ಲಿ ಧ್ವಜವನ್ನು ಹಾರಿಸುವಂತೆ ಅವಕಾಶವನ್ನು ನೀಡಿದೆ. ಈ ಧ್ವಜವನ್ನು ಬಳಕೆ ಮಾಡಿದ ಬಳಿಕ ಅದನ್ನು ಕಂಡ ಕಂಡಲ್ಲಿ ಇಡಬೇಡಿ. ಅಥವಾ ಎಲ್ಲೆಂದರಲ್ಲಿ ಎಸೆಯಬೇಡಿ. ನಿಮ್ಮ ಮನೆಯಲ್ಲಿರುವ ದೇವರ ಫೋಟೊದಷ್ಟೇ ರಾಷ್ಟ್ರ ಧ್ವಜ ಕೂಡ ಪವಿತ್ರವಾಗಿದೆ. ಹೀಗಾಗಿ ರಾಷ್ಟ್ರ ಧ್ವಜದ ಘನತೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಇದನ್ನು ಓದಿ : Ganguly and Morgan : ಭಾರತದ 75ನೇ ಸ್ವಾತಂತ್ರ್ಯೋತ್ಸವ: ಸೆಪ್ಟೆಂಬರ್ 16ರಂದು ಕೋಲ್ಕತಾದಲ್ಲಿ ಭಾರತ Vs ವಿಶ್ವ ಇಲೆವೆನ್ ಕ್ರಿಕೆಟ್ ಮ್ಯಾಚ್

ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ನಿಮ್ಮ ಮನೆ ಬಾಗಿಲಿಗೆ : ಯಶ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್

Here is information about the respect to be given to the national flag

Comments are closed.