Dolly Dhananjay : ಹುಟ್ಟೂರಿಗೆ ಹೋಗಿ ಬೆಟ್ಟ ಹತ್ತಿ ತಂದೆಯೊಂದಿಗೆ ದೇವರ ದರ್ಶನ ಪಡೆದ ಡಾಲಿ ಧನಂಜಯ್‌

ಸ್ಯಾಂಡಲ್‌ವುಡ್‌ನಲ್ಲಿ ನಟ ರಾಕ್ಷಸ ಎಂದೇ ಪ್ರಖ್ಯಾತಿ ಪಡೆದ ಡಾಲಿ ಧನಂಜಯ್‌ (Dolly Dhananjay) ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿದ್ದಾರೆ. ನಟ ಧನಂಜಯ್‌ ಅಭಿನಯದ ಸಿನಿಮಾಗಳು ಕಳೆದ ವರ್ಷದಿಂದ ಒಂದರ ಹಿಂದೆ ಒಂದು ಎನ್ನುವಂತೆ ರಿಲೀಸ್‌ ಆಗಿ ಯಶಸ್ಸನ್ನು ಕಂಡಿದೆ. ಸದ್ಯ ಸಿನಿಮಾಗಳಿಂದ ಕೊಂಚ ಬಿಡುವು ಮಾಡಿಕೊಂಡು ತನ್ನ ಹುಟ್ಟೂರಿನ ದೇವಸ್ಥಾನಕ್ಕೆ ತಂದೆಯೊಂದಿಗೆ ಹೋಗಿ ದರ್ಶನ ಮಾಡಿಕೊಂಡು ಬಂದಿದ್ದಾರೆ. ದೇವರ ದರ್ಶನ ಮಾಡಿದ ನಟ ಧನಂಜಯ್‌ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ನಟ ಧನಂಜಯ್‌ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ತಮ್ಮ ಬ್ಯುಸಿ ಜೀವನದ ನಡುವೆಯೂ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಾಲ್ಯದ ಜೀವನವನ್ನು ಮೆಲುಕು ಹಾಕಿದ್ದಾರೆ. ಅರಸಿಕರೆಯ ಯಾದಾಪುರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರ್ಶನವನ್ನು ಡಾಲಿ ಧನಂಜಯ್‌ ಪಡೆದಿದ್ದಾರೆ. ದೇವರ ದರ್ಶನಕ್ಕೆ ಹೋಗುವಾಗ ತಂದೆ ಅಡವಿಸ್ವಾಮಿ ಹಾಘೂ ಸಹೋದರರೊಂದಿಗೆ ಹೋಗಿದ್ದಾರೆ.

ಇದನ್ನೂ ಓದಿ : Radhika Pandit : ಅಮ್ಮ ರಾಧಿಕಾ ಪಂಡಿತ್‌ನಂತೆ ಫೋಟೋಗೆ ಫೋಸ್‌ ಕೊಟ್ಟ ಮಗಳು ಆಯ್ರಾ ಯಶ್‌

ಇದನ್ನೂ ಓದಿ : Saanya Iyer : ಮತ್ತೆ ಬೋಲ್ಡ್‌ ಆಗಿ ಫೋಟೋಶೂಟ್‌ ಮಾಡಿಸಿದ ನಟಿ ಸಾನ್ಯಾ ಅಯ್ಯರ್‌

ನಟ ಧನಂಜಯ್‌ ದೇವರ ದರ್ಶನಕ್ಕೆ ಸಹೋದರರೊಂದಿಗೆ ಕಾಲ್ನಡಿಗೆಯಲ್ಲಿ ಹೋಗಿರುವುದು ವಿಶೇಷವಾಗದೆ. ಸಿನಿಮಾ ವಿಷಯಕ್ಕೆ ಬಂದರೆ, ಪರಮೇಶ್ವರ್‌ ಗುಂಡ್ಕಲ್‌ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ್‌ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್‌ ಮೈಸೂರಿನಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲದೇ ನಟ ಧನಂಜಯ್‌ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

Dolly Dhananjay : Dolly Dhananjay went to Hatturi and climbed the hill and got darshan of God with his father

Comments are closed.