ಸೋಮವಾರ, ಏಪ್ರಿಲ್ 28, 2025
HomeCinemaಮುತ್ತಪ್ಪ ರೈಗೆ ಕೇರಳ‌ನಂಟು....!ಎಂಆರ್ ಗೆ ಜೋಡಿಯಾದ ಸೌಮ್ಯ ಮೆನನ್...!!

ಮುತ್ತಪ್ಪ ರೈಗೆ ಕೇರಳ‌ನಂಟು….!ಎಂಆರ್ ಗೆ ಜೋಡಿಯಾದ ಸೌಮ್ಯ ಮೆನನ್…!!

- Advertisement -

ಭೂಗತಲೋಕದ ಡಾನ್ ಆಗಿ ಮೆರೆದ ಮುತ್ತಪ್ಪ ರೈ ಜೀವನ ಕತೆ ಸಧ್ಯದಲ್ಲೇ ಸಿನಿಮಾರೂಪದಲ್ಲಿ ತೆರೆಗೆ ಬರಲಿದೆ.

ಮುತ್ತಪ್ಪ ರೈ ಜೀವನಗಾಥೆ ಅನ್ನೋ ಕಾರಣಕ್ಕೆ ಇಲ್ಲಿ ಬರಿ ಭೂಗತಲೋಕದ ಕತೆ ಮಾತ್ರ ಇಲ್ಲ.‌ಬದಲಾಗಿ ನವೀರಾದ ಲವ್ ಸ್ಟೋರಿಯೂ ಇದೆ. ಈ ಲವ್ ಸ್ಟೋರಿಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಡೋ ಪ್ರಯತ್ನದಲ್ಲಿದೆ ಚಿತ್ರ ತಂಡ.

ಹೀಗಾಗಿ ಎಂಆರ್ ಚಿತ್ರಕ್ಕೆ ನಾಯಕಿಯಾಗಿ ಮಲೆಯಾಳಂ ಚೆಲುವೆಯನ್ನು ಆಯ್ಕೆ ಮಾಡಲಾಗಿದೆ. ಮಲೆಯಾಳಂ ಬ್ಯೂಟಿಫುಲ್ ನಟಿ ಸೌಮ್ಯ ಮೆನನ್, ಮುತ್ತಪ್ಪ ರೈ ಸ್ಟೋರಿ ಯ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ರವಿ ಶ್ರೀವತ್ಸ ನಿರ್ದೇಶನದ ಮುತ್ತಪ್ಪ ರೈ ರಿಯಲ್ ಸ್ಟೋರಿ ಆಧಾರಿತ ಎಂಆರ್ ಚಿತ್ರದಲ್ಲಿ ಶೋಭ ರಾಜಣ್ಣ ಪುತ್ರ ದಿಕ್ಷಿತ್ ನಾಯಕನಾಗಿ ನಟಿಸುತ್ತಿದ್ದು, ಇತ್ತೀಚಿಗಷ್ಟೇ ಅದ್ದೂರಿಯಾಗಿ ಮುಹೂರ್ತ ನಡೆಸಲಾಗಿದೆ.

ಕೇರಳದ ಬ್ಯೂಟಿ ಸೌಮ್ಯ ಮೆನನ್ ಗೆ ಇದು ಕನ್ನಡದಲ್ಲಿ ಮೊದಲ ಚಿತ್ರವಾಗಿದ್ದು, ಮಲೆಯಾಳಂನಲ್ಲಿ ಕಿನವಲ್ಲಿ,ಫ್ಯಾನ್ಸಿಡ್ರೆಸ್,ಚಿಲ್ಡ್ರನ್ ಪಾರ್ಕ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ.

ಮುತ್ತಪ್ಪ ರೈಯನ್ನು ರೌಡಿಯಾಗಿ ಮಾತ್ರ ಜನ ನೋಡಿದ್ದಾರೆ. ಆದರೆ ಅವರ ಬದುಕಿನಲ್ಲಿ ನವಿರಾದ ಪ್ರೇಮ ಕತೆಯೂ ಇದೆ. ಅದನ್ನು ಅಷ್ಟೇ ಸುಂದರವಾಗಿ ಪ್ರೇಕ್ಷಕರಿಗೆ ಹೇಳುವ ಉದ್ದೇಶದಿಂದ ಸೌಮ್ಯರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದೇವೆ ಅಂತ ನಿರ್ದೇಶಕ ರವಿಶ್ರೀವತ್ಸ ವಿವರಣೆ ನೀಡಿದ್ದಾರೆ.

RELATED ARTICLES

Most Popular