ಭಾನುವಾರ, ಏಪ್ರಿಲ್ 27, 2025
HomeCinemaMeghana Raj Sarja Emotional answer : ನಿಮಗೀಗ ಚಿರು ನೆನಪಿಲ್ಲವಾ ? ಪ್ರಶ್ನೆಗೆ ಮೇಘನಾ...

Meghana Raj Sarja Emotional answer : ನಿಮಗೀಗ ಚಿರು ನೆನಪಿಲ್ಲವಾ ? ಪ್ರಶ್ನೆಗೆ ಮೇಘನಾ ಕೊಟ್ರು ಭಾವುಕ ಉತ್ತರ

- Advertisement -

Meghana Raj Sarja emotional answer : ಸ್ಯಾಂಡಲ್ ವುಡ್ ನ ಸಿಂಪಲ್‌ನಟಿ ಖ್ಯಾತಿಯ ಮೇಘನಾ ರಾಜ್ ಸದ್ಯ ತಮ್ಮ ವೃತ್ತಿ ಬದುಕಿಗೆ ಮರಳಿದ್ದಾರೆ. ಜಾಹೀರಾತು, ನಟನೆ, ರಿಯಾಲಿಟಿ ಶೋದಲ್ಲಿ ಬ್ಯುಸಿ ಆಗಿರೋ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ. ಆದರೆ ಬದುಕಿನ ಕಹಿ ಘಟನೆಗಳನ್ನು ಮರೆತು ಮುಂದೇ ಸಾಗ್ತಿರೋ ಮೇಘನಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ ಗಳ ಕಾಟ ಮಾತ್ರ ತಪ್ಪಿಲ್ವಂತೆ. ಆದರೇ ಈ ಕಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳದ ಮೇಘನಾ ಅದಕ್ಕೆ ತಕ್ಕ ಉತ್ತರ ನೀಡಿ ಮುಂದೇ ಸಾಗ್ತಿದ್ದೇನೆ ಎಂದಿದ್ದಾರೆ.

ಸ್ಯಾಂಡಲ್ ವುಡ್ ಕಂಡ ಲಲ್ವಿ ಜೋಡಿಗಳಲ್ಲಿ ಒಂದು ಚಿರು ಹಾಗೂ ಮೇಘನಾ. 2019 ರಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಕಾಲಿಟ್ಟಿತ್ತು. 2021 ರಲ್ಲಿ ಈ ಮುದ್ದಾದ ಜೋಡಿ ತಮ್ಮ ಹೊಸ ಬದುಕಿನ ಆನಂದದಲ್ಲಿ ಹೊಸ ಅತಿಥಿಯನ್ನು ನೀರಿಕ್ಷಿಸುತ್ತಿರುವಾಗಲೇ ವಿಧಿಯಾಟಕ್ಕೆ ನಟ ಚಿರು ಇಹಲೋಕ ತ್ಯಜಿಸಿದರು. ಪ್ರೀತಿಯ ಪತಿ ನಿಧನರಾದಾಗ ಮೇಘನಾ ನಾಲ್ಕೂವರೆ ತಿಂಗಳ ಗರ್ಭಿಣಿ. ಪತಿಯ ಸಾವಿಗಾಗಿ ದುಃಖಿಸಬೇಕೋ ಅಥವಾ ಮುದ್ದಾದ ಮಗುವಿನ ಆಗಮನಕ್ಕೆ ನೀರಿಕ್ಷಿಸಬೇಕೋ ಎಂಬುದು ಅರ್ಥವಾಗದೇ ಮೇಘನಾ ಕುಗ್ಗಿ ಹೋಗಿದ್ದರು. ಆದರೆ ಚಿರು ಕೊನೆಯ ನೆನಪಿನ ಪ್ರತಿರೂಪವಾಗಿ ರಾಯನ್ ಸರ್ಜಾ ಮೇಘನಾ ಮಡಿಲಿಗೆ ಬಂದ ಮೇಲೆ ಕುಟ್ಟಿಮಾ ಕೊಂಚ ಚೇತರಿಸಿಕೊಂಡರು.

ಈಗ ಬರೋಬ್ಬರಿ ಚಿರು ಅಗಲಿ ವರ್ಷ ಕಳೆದ ಮೇಲೆ ಮೇಘನಾ ಮತ್ತೆ ವೃತ್ತಿಬದುಕಿಗೆ‌ ಮರಳಿದ್ದಾರೆ. ಚಿರು ಆಸೆಯಂತೆ ಮತ್ತೆ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮ ವೃತ್ತಿಬದುಕಿನ ಅಪ್ಡೇಟ್ ಹಾಗೂ ಪುತ್ರ ರಾಯನ್ ರಾಜ್ ಸರ್ಜಾ ವಿಡಿಯೋ, ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಆದರೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಮೇಘನಾಗೆ ಕಿಡಿಗೇಡಿಗಳ ಕಾಟ ಜೋರಾಗಿದೆಯಂತೆ. ಮೇಘನಾ ಖುಷಿಯಾಗಿರುವ ಅಥವಾ ಪಾರ್ಟಿ ,ಫಂಕ್ಷನ್ ಗಳನ್ನು ಅಟೆಂಡ್ ಮಾಡಿರೋ ಪೋಟೋಗಳನ್ನು ಶೇರ್ ಮಾಡಿದ್ರೇ ನಿಮಗೆ ಈಗ ಚಿರು ನೆನಪಿಲ್ಲ ಅಲ್ವಾ ಎಂದು ಮೇಘನಾಗೆ ಟಾಂಟ್ ಕೊಡೋ ಕಮೆಂಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡ್ತಿದ್ದಾರಂತೆ. ಈ ಬಗ್ಗೆ ನೋವಿನಿಂದ ಮಾತನಾಡಿದ ಮೇಘನಾ ನೋಡಿ ನೋಡಿ ಸಾಕಾದ ಮೇಲೆ ನಾನು ಅಂತಹವರಿಗೆ ಸರಿಯಾದ ಉತ್ತರ ನೀಡಿದ್ದೇನೆ ಎಂದಿದ್ದಾರೆ.

ನನಗೆ ಚಿರು ನೆನಪಿದ್ದಾರೋ ಇಲ್ಲವೋ ಎಂಬುದನ್ನು ನಾನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ. ಸಹೋದರ ನಾನು ಏನನ್ನು ಮಾಡುತ್ತಿದ್ದೇನೆ ? ಏನನ್ನು ತಿನ್ನುತ್ತಿದ್ದೇನೆ ? ನಾನು ಯಾವ ವ್ಯಕ್ತಿಯನ್ನು ಹಿಂಬಾಲಿಸುತ್ತಿದ್ದೇನೆ ? ಅಥವಾ ಯಾವ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಬೇಕಿಲ್ಲ. ಅದಕ್ಕಾಗಿ‌ ನಾನು ಯಾರೊಂದಿಗೂ ಕಾನೂನು ಒಪ್ಪಂದ ಮಾಡಿಕೊಂಡಿಲ್ಲ ಎಂದು ಖಡಕ್ ಅನ್ಸರ್ ನೀಡಿದ್ದಾರೆ. ಈ ಹಿಂದೆಯೂ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ ಈ ರೀತಿ ನೆಗೆಟಿವ್ ಕಮೆಂಟ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : Meghana Raj Sarja : ಮತ್ತೊಂದು ಮದುವೆಯಾಗ್ತಾರಾ ನಟಿ ಮೇಘನಾ ರಾಜ್ ಸರ್ಜಾ ; ಇಲ್ಲಿದೇ ಕುಟ್ಟಿಮಾ ಬೋಲ್ಡ್ ಆನ್ಸರ್

ಇದನ್ನೂ ಓದಿ : Kichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

Don’t you remember Chiru ? Meghana Raj Sarja emotional answer to the Negative question

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular