Gautam Gambhir : ಭಾರತ ಪರ ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ ವಿಶ್ವಕಪ್ ಹೀರೋ, ಸಂಸದ ಗೌತಮ್ ಗಂಭೀರ್

ಬೆಂಗಳೂರು: ಭಾರತದ ವಿಶ್ವಕಪ್ ಹೀರೊಗಳಲ್ಲೊಬ್ಬರಾದ ಸಂಸದ ಗೌತಮ್ ಗಂಭೀರ್ (Gautam Gambhir) ಭಾರತ ಪರ ಮತ್ತೆ ಬ್ಯಾಟ್ ಹಿಡಿಯಲು ಸಜ್ಜಾಗಿದ್ದಾರೆ. 2016ರಲ್ಲೇ ಕ್ರಿಕೆಟ್’ಗೆ ನಿವೃತ್ತಿ ಘೋಘಿಸಿದ್ದ 41 ವರ್ಷದ ಗೌತಮ್ ಗಂಭೀರ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ,. ಆದ್ರೆ ಗೌತಮ್ ಗಂಭೀರ್ ಆಡಲಿರುವುದು ಟೀಮ್ ಇಂಡಿಯಾ ಪರ ಅಲ್ಲ, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ (Legends League Cricket – LLC ) ಇಂಡಿಯಾ ಮಹಾರಾಜಾಸ್ ತಂಡದ ಪರ (India Maharajas).

2ನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಟೂರ್ನಿ ಸೆಪ್ಟೆಂಬರ್ 17ರಂದು ಆರಂಭವಾಗಲಿದ್ದು, ಭಾರತದ ಹಲವು ದಿಗ್ಗಜ ಆಟಗಾರರು ಆಡಲಿದ್ದಾರೆ. ಇದಕ್ಕೂ ಮುನ್ನ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೆಪ್ಟೆಂಬರ್ 15ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಇಲೆವೆನ್ ತಂಡಗಳ ಮಧ್ಯೆ ಪ್ರದರ್ಶನ ಪಂದ್ಯ ನಡೆಯಲಿದೆ.

ಭಾರತದ ಎರಡು ವಿಶ್ವಕಪ್ ಗೆಲುವುಗಳಲ್ಲಿ ಗೌತಮ್ ಗಂಭೀರ್ ಅವರ ಪಾತ್ರ ಮಹತ್ವದ್ದು. 2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 75 ರನ್ ಬಾರಿಸಿದ್ದ ಗಂಭೀರ್ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಮಿಂಚಿದ್ದ ಗಂಭೀರ್ ಶ್ರೀಲಂಕಾ ವಿರುದ್ಧ 97 ರನ್ ಬಾರಿಸಿದ್ದ ಗಂಭೀರ್ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು,.

2016ರಲ್ಲಿ ಭಾರತ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಗಂಭೀರ್, ನಿವೃತ್ತಿಯ ನಂತರ ರಾಜಕೀಯ ಇನ್ನಿಂಗ್ಸ್ ಶುರು ಮಾಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ದೆಹಲಿ ಪೂರ್ವ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಭೀರ್, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ 3,91,222 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿ ರಾಜಕೀಯದ ಮೊದಲ ಹೆಜ್ಜೆಯಲ್ಲೇ ಯಶಸ್ಸು ಕಂಡಿದ್ದರು.

ಕಳೆದ 6 ವರ್ಷಗಳಿಂದ ಕ್ರಿಕೆಟ್ ಮೈದಾನದಿಂದ ದೂರವಿದ್ದ ಗಂಭೀರ್ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿದ್ದಾರೆ. ಇದೀಗ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಮೂಲಕ ಗಂಭೀರ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಭಾರತ ಪರ 58 ಟೆಸ್ಟ್ ಪಂದ್ಯಗಳನ್ನಾಡಿರುವ ಗೌತಮ್ ಗಂಭೀರ್ 9 ಶತಕಗಳ ಸಹಿತ 4,154 ರನ್, 147 ಏಕದಿನ ಪಂದ್ಯಗಳಿಂದ 11 ಶತಕಗಳ ಸಹಿತ 5,238 ರನ್ ಹಾಗೂ 37 ಟಿ20 ಪಂದ್ಯಗಳಿಂದ 7 ಅರ್ಧಶತಕಗಳ ಸಹಿತ 932 ರನ್ ಗಳಿಸಿದ್ದಾರೆ.

ಇಂಡಿಯಾ ಮಹಾರಾಜಸ್ ತಂಡ :
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಮೊಹಮ್ಮದ್ ಕೈಫ್, ಎ. ಬದ್ರಿನಾಥ್, ಪ್ರಗ್ಯಾನ್ ಓಜಾ, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಆರ್‌ಪಿ ಸಿಂಗ್, ಅಜಯ್ ಜಡೇಜಾ, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಮತ್ತು ಇರ್ಫಾನ್ ಪಠಾಣ್.

ಇದನ್ನೂ ಓದಿ : India Women Cricket Team: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ, ಹರ್ಮನ್ ಪ್ರೀತ್ ಕೌರ್ ಸಾರಥ್ಯ

ಇದನ್ನೂ ಓದಿ : Shukla Vs Tiwary : ಬಂಗಾಳ ಕ್ರಿಕೆಟ್ ತಂಡಕ್ಕೆ ಮಾಜಿ ಕ್ರೀಡಾ ಸಚಿವ ಕೋಚ್, ಹಾಲಿ ಕ್ರೀಡಾ ಸಚಿವ ಆಟಗಾರ

World Cup hero MP Gautam Gambhir will hold the bat again for India

Comments are closed.