Drishyam 2 Trailer : ಮೋಹನ್ ಲಾಲ್ ನಟನೆಯ ದೃಶ್ಯಂ ಸಿನಿಮಾ ಮಲಯಾಲಂ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ನಂತರದಲ್ಲಿ ಬಾಲಿವುಡ್, ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿಯೂ ಮೋಡಿ ಮಾಡಿತ್ತು. ದೃಶ್ಯಂ 2 ಕೂಡ ಸೂಪರ್ ಹಿಟ್ ಆಗಿದೆ. ಅದ್ರೀಗ ಹಿಂದಿ ಆವೃತ್ತಿಯಲ್ಲಿ ದೃಶ್ಯಂ 2 ತೆರೆಗೆ ಬರಲು ಸಿದ್ದವಾಗಿದೆ. ಗೋವಾದಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಅಜಯ್ ದೇವಗನ್ ಸಿನಿಮಾದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಮೋಹನ್ ಲಾಲ್ ನಟನೆಯ ಸಿನಿಮಾಗಳಿಗಿಂತ ಹಿಂದಿ ಆವೃತ್ತಿ ಸಾಕಷ್ಟು ವಿಭಿನ್ನವಾಗಿದೆ. ದೃಶ್ಯಂ 2 ಸಿನಿಮಾ ಮಲಯಾಲಂ ಹಾಗೂ ತೆಲುಗು ಆವೃತ್ತಿಯಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಅಲ್ಲದೇ ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಲಕ್ಷಾಂತರ ಮಂದಿ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಆದ್ರೀಗ ರವಿಚಂದ್ರನ್ ನಟಿಸಿದ್ದ ಕನ್ನಡದ ದೃಶ್ಯಂ ಕೂಡ ಸೂಪರ್ ಹಿಟ್ ಆಗಿತ್ತು. ಆದ್ರೀಗ ಹಿಂದಿ ಆವೃತ್ತಿಯಲ್ಲಿ ದೃಶ್ಯಂ2 ಸಿನಿಮಾ ಈಗಾಗಲೇ ಸಿದ್ದವಾಗಿದ್ದು, ನವೆಂಬರ್ 18ರಂದು ತೆರೆಗೆ ಬರಲಿದೆ.
ದೃಶ್ಯಂ 2 ನಲ್ಲಿ ಸಾಕಷ್ಟು ಹೊಸ ಪಾತ್ರಗಳನ್ನು ಸೇರಿಸಲಾಗಿದ್ದು, ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ನಿರ್ದೇಶಕ ಅಭಿಷೇಕ್ ಪಾಠಕ್ ಅವರು ಮಲಯಾಳಂ ಮತ್ತು ತೆಲುಗು ಆವೃತ್ತಿಗಳ ಭಾಗವಾಗಿರದ ಹಲವಾರು ವಿಷಯಗಳನ್ನು ಒಳಗೊಂಡಿರುವ ಸ್ಕ್ರಿಪ್ಟ್ ಅನ್ನು ಸುಮಾರು ಏಳು ತಿಂಗಳ ಕಾಲಾವಕಾಶದಲ್ಲಿ ಸಿದ್ದ ಪಡಿಸಲಾಗಿದೆ.ಮಲಯಾಳಂ ಮತ್ತು ತೆಲುಗು ಆವೃತ್ತಿಗಳಿಗಿಂತ ವಿಭಿನ್ನವಾಗಿ ಸಾಕಷ್ಟು ಬದಲಾವಣೆಗಳಿವೆ ಎಂದು ನಿರ್ದೇಶಕ ಅಭಿಷೇಕ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ದೃಶ್ಯಂ ನಿಶಿಕಾಂತ್ ಕಾಮತ್ ಅವರ 2015 ರ ಹಿಟ್ ಥ್ರಿಲ್ಲರ್‌ನ ಮುಂದುವರಿದ ಭಾಗವಾಗಿದೆ. ಅಜಯ್ ದೇವಗನ್ ಜೊತೆಗೆ ಇದು ಟಬು, ಇಶಿತಾ ದತ್ತಾ, ಅಕ್ಷಯ್ ಖನ್ನಾ, ರಜತ್ ಕಪೂರ್ ಮತ್ತು ಶ್ರಿಯಾ ಸರನ್ ಕೂಡ ನಟಿಸಿದ್ದಾರೆ. ಇದು ನವೆಂಬರ್ 18 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.ಅಜಯ್ ವಿಜಯ್ ಸಲ್ಗಾಂವ್ಕರ್ ಅವರ ಪಾತ್ರವನ್ನು ಮುಂದುವರಿಸಿದ್ದಾರೆ. ಸಿನಿಮಾ ಪಣಜಿಯಲ್ಲಿ ಸೆಟ್ಟೇರಿದ್ದು, ಅಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಾಸನ್ ಮತ್ತು ಎಸ್ತರ್ ಅನಿಲ್ ಅಭಿನಯದ ದೃಶ್ಯಂ 2 ರ ಮಲಯಾಳಂ ಆವೃತ್ತಿಯು ಫೆಬ್ರವರಿ 2021 ರಲ್ಲಿ ಬಿಡುಗಡೆಯಾಗಿತ್ತು.ಜೀತು ಜೋಸೆಫ್ ನಿರ್ದೇಶನದ ಅವರ 2013 ದೃಶ್ಯಂ ಸಿನಿಮಾದ ಮುಂದುವರಿದ ಭಾಗವಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಿನಿಮಾವನ್ನು ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಗಳ ಮೂಲಕ ಬಿಡುಗಡೆ ಮಾಡಲಾಗಿತ್ತು.
After 20 Years, It's Going To Be Super Lit To See The Face-Off Between Ajay Devgn & Akshaye Khanna In #Drishyam2. ✨ #Drishyam2Trailer pic.twitter.com/OcuGeSAtY6
— SAMIR. (@MeSamir23) October 17, 2022
ಮಲಯಾಳಂ ಚಿತ್ರದ ಯಶಸ್ಸಿನ ನಂತರ, ನಿರ್ದೇಶಕ ಜೀತು ಜೋಸೆಫ್ ಅವರು ತೆಲುಗು ರಿಮೇಕ್ ಮಾಡಿದ್ದರು. ವೆಂಕಟೇಶ್, ಮೀನಾ, ನದಿಯಾ, ನರೇಶ್ ಮತ್ತು ಕೃತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ನವೆಂಬರ್ 2021 ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡಿಜಿಟಲ್ ನಲ್ಲಿ ಬಿಡುಗಡೆಯಾಗಿತ್ತು. ಡಿ ಸುರೇಶ್ ಬಾಬು, ಆಂಟೋನಿ ಪೆರುಂಬವೂರ್ ಮತ್ತು ರಾಜ್‌ಕುಮಾರ್ ಸೇತುಪತಿ ಸಹ-ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿತ್ತು.
ಇದನ್ನೂ ಓದಿ : Chiranjeevi Sarja Birthday : ಚಿರಂಜೀವಿ ಸರ್ಜಾ ಬರ್ತಡೇ: ಭಾವನಾತ್ಮಕ ಪೋಸ್ಟ್ ಶೇರ್‌ಮಾಡಿದ ಮೇಘನಾ
ಇದನ್ನೂ ಓದಿ : Kantara Movie : ಕಾಂತಾರ ಸಕ್ಸಸ್ ಮೂಲಕ ನನಸಾಯ್ತು ನಟ ಯಶ್ ಕಂಡಿದ್ದ ಕನಸು
Drishyam 2 Trailer Ajay Devgan Director Nishikant Kamat Different from malayalam version