Deepika Padukone :ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ

(Deepika Padukone)ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದಾಂಪತ್ಯದಲ್ಲಿ ಬ್ರೇಕಪ್ ಸುದ್ದಿ ಹರಿದಾಡಿತ್ತು. ಆದ್ರೀಗ ದೀಪಿಕಾ ಇದೀಗ ವಿಶ್ವದ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ, ಉಪೇಂದ್ರ ನಟನೆಯ “ಐಶ್ವರ್ಯ” ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ದೀಪಿಕಾ ಪಡುಕೋಣೆ ನಂತರದಲ್ಲಿ ಬಾಲಿವುಡ್ ಸಿನಿಮಾದಲ್ಲಿ ಸ್ಥಾನ ಪಡೆದ್ರು.

2007 ರಲ್ಲಿ ಶಾರುಖ್ ಖಾನ್ ನಟನೆಯ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸುವ ಮೂಲಕ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಹಾಲಿವುಡ್ ಅಂಗಳದಲ್ಲಿ ಯಶಸ್ಸನ್ನು ಕಂಡಿದ್ದಾರೆ. ದೀಪಿಕಾ ಪಡುಕೋಣೆ ನಟನಾ ಕೌಶಲ್ಯದ ಜೊತೆ ನೈಜ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಸಿನಿಮಾ ನಟ ನಟಿಯರು ಕೂಡ ಇವರ ಸೌಂದರ್ಯದ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಆದರೆ ಈಗ ದೀಪಿಕಾ ಪಡುಕೋಣೆ ವಿಶ್ವದ 10 ಸುಂದರ ಮಹಿಳೆಯರ (Deepika Padukone)ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾಗಿ ಇವರು ವಿಶ್ವ ಸುಂದರಿಯ ಮಹಿಳೆಯರ ಪಟ್ಟಿಯಲ್ಲಿ ಸೇರಿದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೀಗ ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವ ಸುಂದರ ಮಹಿಳೆಯರ ಸಾಲಿಗೆ ಸೇರಿದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇನ್ನುಳಿದಂತೆ ಈ ವಿಶ್ವ ಸುಂದರ ಮಹಿಳೆಯರ ಸಾಲಿನಲ್ಲಿ ಜೋಡಿ ಕಮರ್, ಝೆಂಡಾಯ, ಬೆಲ್ಲಾ ಹದಿದ್, ಬೆಯೋನ್ಸ್, ಅರಿಯಾನಾ ಗ್ರಾಂಡೆ, ಟೇಲರ್ ಸ್ವಿಫ್ಟ್, ಜೋರ್ಡಾನ್ ಡನ್, ಕಿಮ್ ಕಾರ್ಡಶಿಯಾನ್, ಹೋ ಯೇನ್ ಜಂಗ್ ಸ್ಥಾನವನ್ನು ಗಳಿಸಿದ್ದಾರೆ. ವಿಶ್ವ ಸುಂದರ ಮಹಿಳೆಯರ ಪಟ್ಟಿಯನ್ನು ಗೋಲ್ಡನ್ ರೇಶಿಯೋ ಆಫ್ ಬ್ಯುಟಿ ಪೈ ಎಂದು ಹೇಳುತ್ತಾರೆ. ಈ ಪಟ್ಟಿಯನ್ನು ಮುಖದ ಅಳತೆಗಳ ಅಂಶಗಳನ್ನು ಇಟ್ಟುಕೊಂಡು ಈ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:Kantara Movie : ಕಾಂತಾರ ಸಕ್ಸಸ್ ಮೂಲಕ ನನಸಾಯ್ತು ನಟ ಯಶ್ ಕಂಡಿದ್ದ ಕನಸು

ಇದನ್ನೂ ಓದಿ:Chiranjeevi Sarja Birthday : ಚಿರಂಜೀವಿ ಸರ್ಜಾ ಬರ್ತಡೇ: ಭಾವನಾತ್ಮಕ ಪೋಸ್ಟ್ ಶೇರ್‌ಮಾಡಿದ ಮೇಘನಾ

ಇದನ್ನೂ ಓದಿ:Drishyam 2 Trailer : ದೃಶ್ಯಂ 2 ಹಿಂದಿ ಟ್ರೈಲರ್ ಬಿಡುಗಡೆ : ಸಿನಿಮಾ ವಿಭಿನ್ನವಾಗಿದೆ ಎಂದ ಅಜಯ್ ದೇವಗನ್‌

ವಿಶ್ವ ಸುಂದರಿ ಎಂದ್ರೆ ತಕ್ಷಣಕ್ಕೆ ಎಲ್ಲರ ಬಾಯಲ್ಲೂ ಬರುವ ಹೆಸರು, ಐಶ್ವರ್ಯ ರೈ ಹೆಸರಾಗಿದೆ. ತನ್ನ ಕಣ್ಣಿನ ಸೌಂದರ್ಯದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಂತಹ ಆಕರ್ಷಣೆ ಇವರಿಗಿದೆ. ಈ ಸಾಲಿನಲ್ಲಿ ನಟಿ ದೀಪಿಕಾ ಹೆಸರು ಕೇಳಿ ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಡಿಂಪಲ್ ಕ್ವೀನ್ ದೀಪಿಕಾಗೆ ಯಾವುದೇ ಪಾತ್ರವನ್ನು ಕೊಟ್ಟರು ತಮ್ಮ ಅದ್ಬುತ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.ಈಗಲೂ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸಿದ್ಧಾರ್ಥ ಆನಂದ್ ನಿರ್ದೇಶನ, ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುವ ಚಿತ್ರದಲ್ಲಿ ನಟಿಸಲಿದ್ದಾರೆ. ಪ್ರಭಾಸ್ ಮತ್ತು ದಿಶಾ ಪಟಾಣಿ ನಟಿಸಲಿರುವ ಯೇ ಜವಾನಿ ಹೈ ದೀವಾನಿ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಹಿಂದಿಯ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಟಿ ದೀಪಿಕಾ ಅವರ ಮುಂಬರುವ ಸಿನಿಮಾಕ್ಕಾಗಿ ಅಭಿಮಾನಿ ಬಳಗದವರು ಕಾತುರದಿಂದ ಕಾಯುತ್ತಿದ್ದಾರೆ.

Deepika Padukone in the list of 10 most beautiful women in the world

Comments are closed.