ದುನಿಯಾ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಿತಗೊಂಡ ಹೀರೋ ದುನಿಯಾ ವಿಜಯ್ (Duniya Vijay ). ನಟನೆ, ನಿರ್ದೇಶನ ಹಾಗೂ ಸದ್ಯ ಖಳನಟನಾಗಿಯೂ ಮಿಂಚುತ್ತಿರೋ ದುನಿಯಾ ವಿಜಯ್, ಸದ್ಯ ಸಲಗ ಗೆಲುವಿನ ಖುಷಿಯಲ್ಲಿದ್ದಾರೆ. ಅದರ ಜೊತೆಗೆ ಶಿವರಾತ್ರಿಯ ಶುಭಪರ್ವದಂದು ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅಭಿನಯದ 28ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ವಿಜಯ್ ( Duniya Vijay )ತಾವೇ ನಟಿಸಿ ನಿರ್ದೇಶಿಸುತ್ತಿರುವ ಸಿನಿಮಾ ಅನೌನ್ಸ್ ಮಾಡಿದ್ದು, ಸಿನಿಮಾಗೆ ಭೀಮ (Bhima Movie) ಎಂದು ಟೈಟಲ್ ಇಡಲಾಗಿದೆ.
ಈಗಾಗಲೇ ಸಲಗ ಸಿನಿಮಾ ನಿರ್ದೇಶನದಲ್ಲಿ ಗೆದ್ದಿರೋ ದುನಿಯಾ ವಿಜಯ್ ಅದೇ ಕಾನ್ಸಿಡೆನ್ಸ್ ಜೊತೆ ಮತ್ತೊಮ್ಮೆ ನಿರ್ದೇಶನಕ್ಕೆ ಸಿದ್ಧವಾಗಿದ್ದಾರೆ. ಇದರ ಜೊತೆಗೆ ಭೀಮದಲ್ಲಿ ನಿರ್ದೇಶಕನ ಕ್ಯಾಪ್ ಜೊತೆಗೆ ನಟನೆಗೂ ಸೈ ಎಂದಿದ್ದಾರೆ ಸಲಗ ವಿಜಯ್. ವಿಜಯ್ ಅಭಿನಯದ ಹೊಸ ಚಿತ್ರಕ್ಕೆ ಭೀಮ ಎಂದು ಹೆಸರಿಡೋದರ ಜೊತೆಗೆ ರಕ್ತಸಿಕ್ತ ಮುಖವನ್ನ ವಿಜಯ್ ತೋರಿಸಿದ್ದಾರೆ.
ಭೀಮ ಸಿನಿಮಾದ ಕುತೂಹಲವನ್ನ ಮತ್ತಷ್ಟು ಹೆಚ್ಚು ಮಾಡಿರೋದು ಸಿನಿಮಾದ ಫರ್ಸ್ಟ್ ಲುಕ್ ಪೋಸ್ಟರ್. ಸಿನಿಮಾದ ಟೈಟಲ್ ಜೊತೆ ಭೀಮ ಕೆಣಕದಿದ್ದರೇ ಕ್ಷೇಮ ಎಂಬ ಟ್ಯಾಗ್ ಲೈನ್ ಕೂಡ ನೀಡಲಾಗಿದೆ. ಸಿನಿಮಾದ ಟೈಟಲ್ ಹಾಗೂ ಪೋಟೋ ವಿಜಯ್ (Duniya Vijay ) ಭೀಮ ಸಿನಿಮಾ ಮತ್ತೊಂದು ರಕ್ತಸಿಕ್ತ ಅಂಡರ್ ವರ್ಲ್ಡ್ ಮಾಸ್ ಸ್ಟೋರಿಯ ಚಿತ್ರ ಅನ್ನೋದನ್ನು ಕನ್ಪರ್ಮ್ ಮಾಡಿದೆ. ಸಲಗ ಸಿನಿಮಾದಲ್ಲಿ ನೈಜ ಕಥೆ ಹೇಳಿದ್ದ ವಿಜಯ್ ಈ ಭಾರಿಯೂ ಅಂತದ್ದೇ ವಿಭಿನ್ನ ಸ್ಟೋರಿಯೊಂದನ್ನ ಭೀಮನಾಗಿ ತೆರೆದಿಡ ಲಿದ್ದಾರೆ. ಇನ್ನು ಭೀಮ ಸಿನಿಮಾಕ್ಕೆ ಕೃಷ್ಣ ಹಾಗು ಜಗದೀಶ್ ಗೌಡ ಬಂಡವಾಳ ಹೂಡುತ್ತಿದ್ದಾರೆ.

ಇದರ ಜೊತೆಗೆ ಟಾಲಿವುಡ್ ಸಿನಿಮಾಗೂ ವಿಲನ್ ಆಗಿ ಎಂಟ್ರಿಕೊಡ್ತಿರೋ ದುನಿಯಾ ವಿಜಯ್ ಅದಕ್ಕಾಗಿಯೂ ಸಿದ್ಧತೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಸಾಲು ಸಾಲು ಸಿನಿಮಾ ಗಳಲ್ಲಿ ಸೋತಿದ್ದ ದುನಿಯಾ ವಿಜಯ್ ಗೆ ಸಲಗ ಸಿನಿಮಾ ಗೆಲುವು ಹೊಸತೊಂದು ವಿಶ್ವಾಸ ನೀಡಿದ್ದು, ಅದರ ಜೊತೆ ಜೊತೆಗೆ ಹೊಸ ಹೊಸ ಸಿನಿಮಾ ಪ್ರಯೋಗಗಳಿಗೂ ದುನಿಯಾ ವಿಜಯ್ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದು, ಈಗ ಹೊಸ ಸಿನಿಮಾದ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
#VK28 pic.twitter.com/ZfZ7L7owfC
— Duniya Vijay (@OfficialViji) March 1, 2022
ಇದನ್ನೂ ಓದಿ : Shahid Kapoor : ಶಾಹಿದ್ ಸಹೋದರ ಸನಾ ಅದ್ದೂರಿ ಶಾದಿಗೆ ಸಾಕ್ಷಿಯಾದ ಬಾಲಿವುಡ್
ಇದನ್ನೂ ಓದಿ : Kajal Aggarwal: ಸಖತ್ ವೈರಲ್ ಆಯ್ತು ಕಾಜಲ್ ಅಗರ್ವಾಲ್ ಫಿಟ್ನೆಸ್ ವಿಡಿಯೋ
(Duniya Vijay who returned to Sandalwood via Bhima Movie)