Suresh Raina : IPL 2022ನಲ್ಲಿ ಗುಜರಾತ್‌ ಟೈಟಾನ್ಸ್‌ ಪರ ಆಡ್ತಾರೆ ಸುರೇಶ್‌ ರೈನಾ

ಸುರೇಶ್‌ ರೈನಾ. ಭಾರತ ಕಂಡ ಶ್ರೇಷ್ಠ ಆಟಗಾರ. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಅವಧಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಐಪಿಎಲ್‌ ( IPL 2022)ನಲ್ಲಿ ಆಡಿದ್ದರೂ ಕೂಡ ಸುರೇಶ್‌ ರೈನಾ (Suresh Raina) ಈ ಬಾರಿ ಅನ್‌ ಸೋಲ್ಡ್‌ ಆಗಿದ್ದರು. ಇದು ರೈನಾ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿತ್ತು. ಆದ್ರೀಗ ಜೇಸನ್‌ ರಾಯ್‌ ತಂಡದಿಂದ ಹೊರ ಬೀಳುತ್ತಿದ್ದಂತೆಯೇ, ಸುರೇಶ್‌ ರೈನಾ ಮತ್ತೆ ಐಪಿಎಲ್‌ನಲ್ಲಿ ಆಡೋದು ಖಚಿತವಾಗಿದ್ದು, ಗುಜರಾತ್‌ ಟೈಟನ್ಸ್‌ ತಂಡದ ಪರ ಬ್ಯಾಟ್‌ ಬೀಸಲಿದ್ದಾರೆ.

IPL 2022 ಮೆಗಾ ಹರಾಜು ಮುಗಿದಿದೆ ಮತ್ತು ಎಲ್ಲಾ 10-ಫ್ರಾಂಚೈಸಿಗಳು ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ ತಂಡವನ್ನು ಸಜ್ಜುಗೊಳಿಸುತ್ತಿವೆ. ಈ ನಡುವಲ್ಲೇ ಅನ್‌ಸೋಲ್ಡ್‌ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ದಂತಕಥೆ, ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಬಾರಿ ಎರಡು ದಿನಗಳ ಕಾಲ ನಡೆದಿದ್ದ IPL ಮಹಾಹರಾಜು 2022 ನಲ್ಲಿ ಸುರೇಶ್‌ ರೈನಾ ಮಾರಾಟವಾಗದೆ ಉಳಿದಿದ್ದರು.

ಕಳೆದ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರವಾಗಿ ಆಡಿದ್ದ ಸುರೇಶ್‌ ರೈನಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಅದ್ರಲ್ಲೂ ಕಳೆದ ಬಾರಿ ದುಬೈನಲ್ಲಿ ನಡೆದಿದ್ದ ಐಪಿಎಲ್‌ ಪಂದ್ಯಾವಳಿಯಲ್ಲಿ ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ನಡುವಲ್ಲೇ ಚೆನ್ನೈ ತಂಡವನ್ನು ತೊರೆದಿದ್ದರು. ಇದೇ ಕಾರಣಕ್ಕೆ ಈ ಬಾರಿ ಯಾವುದೇ ತಂಡಗಳು ಅವರನ್ನು ಖರೀದಿಸುವತ್ತ ಮನಸ್ಸು ಮಾಡಿರಲಿಲ್ಲ. ಈ ಬಾರಿಯ ಮೆಗಾ ಹರಾಜಿನಲ್ಲಿ ಅವರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ ನಿಗದಿ ಪಡಿಸಿಕೊಂಡಿದ್ದರು. ಆದರೆ ಐಪಿಎಲ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಅವರು ಮಾರಾಟವಾಗದೆ ಉಳಿದಿದ್ದಾರೆ.

Suresh Raina enter Gujarat Titans for IPL 2022

ಇನ್ನೇನು ಸುರೇಶ್‌ ರೈನಾ (Suresh Raina) ಕ್ರಿಕೆಟ್‌ ಭವಿಷ್ಯವೇ ಅಂತ್ಯವಾಯ್ತು ಅನ್ನೋ ಹೊತ್ತಲ್ಲೇ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಗುಜರಾತ್‌ ಟೈಟಾನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಬಯೋ-ಬಬಲ್ ನಿಂದಾಗಿ ಇಂಡಿಯನ್‌ ಪ್ರೀಯರ್‌ ಲೀಗ್‌ ( IPL 2022) ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರನನ್ನು ಫ್ರಾಂಚೈಸಿ ಅವರ ಮೂಲ ಬೆಲೆ 2 ಕೋಟಿಗೆ ಖರೀದಿಸಿತು. ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಿಂದ ಹಿಂದೆ ಸರಿದಿದ್ದಾರೆ.

Suresh Raina enter Gujarat Titans for IPL 2022

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ 2 ಕೋಟಿ ರೂ.ಗಳ ಮೂಲ ಬೆಲೆಗೆ ಇಂಗ್ಲಿಷ್ ಆರಂಭಿಕ ಆಟಗಾರನನ್ನು ಖರೀದಿಸಿದ ಐಪಿಎಲ್‌ನ ಹೊಸ ತಂಡಗಳಲ್ಲಿ ಒಂದಾದ ಗುಜರಾತ್ ಟೈಟಾನ್ಸ್‌ಗೆ ಜೇಸನ್ ರಾಯ್ ಹಠಾತ್‌ ನಿರ್ಧಾರ ಇದೀಗ ಹಾರ್ದಿಕ್‌ ಪಾಂಡ್ಯ ಬಳಗಕ್ಕೆ ಆತಂಕವನ್ನು ತಂಡಿತ್ತು. ವರದಿಗಳ ಪ್ರಕಾರ, ಜೇಸನ್‌ ರಾಯ್‌ ತಮ್ಮ ನಿರ್ಧಾರವನ್ನು ಕಳೆದ ವಾರ ಅಹಮದಾಬಾದ್ ಮೂಲದ ಫ್ರಾಂಚೈಸಿಗೆ ತಿಳಿಸಿದ್ದರು. ಇದೀಗ ಗುಜರಾತ್ ಟೈಟಾನ್ಸ್ ಆಂಗ್ಲ ಕ್ರಿಕೆಟಿಗ ಜೇಸನ್ ರಾಯ್ ಬದಲಿಗೆ ಸುರೇಶ್ ರೈನಾ ಅವರನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂಬ ಕುರಿತು ಮಾತು ಕ್ರಿಕೆಟ್‌ ವಲಯದಲ್ಲಿ ಕೇಳಿಬರುತ್ತಿದೆ.

ಈ ವರ್ಷದ ಮೆಗಾ ಹರಾಜಿನ ಸಮಯದಲ್ಲಿ ಯಾವುದೇ ಫ್ರಾಂಚೈಸಿಗಳು ಸುರೇಶ್ ರೈನಾ (Suresh Raina) ಅವರ ಮೂಲ ಬೆಲೆ 2 ಕೋಟಿಗೆ ಬಯಸಲಿಲ್ಲ. ‘Mr.IPL’ ಎಂದು ಕರೆಯಲ್ಪಡುವ ರೈನಾ ಕಳೆದ ಎರಡು ಋತುಗಳಲ್ಲಿ ತೋರಿದ ಕಳಪೆ ಪ್ರದರ್ಶನ ಬಾರಿ ಹಿನ್ನಡೆಯನ್ನು ತಂದುಕೊಟ್ಟಿತ್ತು. ವೈಯಕ್ತಿಕ ಕಾರಣವನ್ನು ನೀಡಿ 2020 ಆವೃತ್ತಿಯನ್ನು ತಪ್ಪಿಸಿಕೊಂಡಿದ್ದರು. ಅಲ್ಲದೇ 2021 ರಲ್ಲಿ 17.77 ರ ಸರಾಸರಿಯಲ್ಲಿ 12 ಪಂದ್ಯಗಳಲ್ಲಿ ಅವರು ಕೇವಲ 160 ರನ್‌ ಬಾರಿಸಿದ್ದರು.

Suresh Raina enter Gujarat Titans for IPL 2022

ಐಪಿಎಲ್‌ ಇತಿಹಾಸದಲ್ಲಿ ಅನುಭವಿ ಕ್ರಿಕೆಟಿಗ 205 ಪಂದ್ಯಗಳಿಂದ 32.51 ಸರಾಸರಿ ಮತ್ತು 136.76 ಸ್ಟ್ರೈಕ್ ರೇಟ್‌ನಲ್ಲಿ ಶತಕ ಮತ್ತು 39 ಅರ್ಧ ಶತಕಗಳನ್ನು ಒಳಗೊಂಡಂತೆ 5528 ರನ್‌ಗಳೊಂದಿಗೆ IPL ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ರೈನಾ ಪಾತ್ರರಾಗಿದ್ದಾರೆ. ಈ ಹಿಂದೆ ಗುಜರಾತ್ ಲಯನ್ಸ್‌ ತಂಡದ ನಾಯಕರಾಗಿದ್ದ ರೈನಾ, ಈ ಬಾರಿ ಗುಜರಾತ್‌ ಟೈಟಾನ್ಸ್‌ ತಂಡದ ಪರವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಲಯನ್ಸ್‌ ತಂಡಕ್ಕೆ ಆರಂಭಿಕ ಆಟಗಾರನ ಅವಶ್ಯಕತೆಯಿದೆ. ಆದರೆ ಗುಜರಾತ್‌ ಲಯನ್ಸ್‌ ತಂಡವನ್ನು ರೈನಾ ಸೇರಿಕೊಂಡ್ರೆ ಬ್ಯಾಟಿಂಗ್‌ ಇನ್ನಷ್ಟು ಬಲಿಷ್ಠವಾಗಲಿದೆ.

ಐಪಿಲ್‌ ಆರಂಭದಿಂದಲೂ ಸುರೇಶ್‌ ರೈನಾ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿಯೇ ಕಾಣಿಸಿಕೊಂಡಿದ್ದರು. ಐಪಿಎಲ್‌ನಿಂದ ಸಿಎಸ್‌ಕೆ ಅಮಾನತ್ತು ಆದ ವರ್ಷ ಮಾತ್ರವೇ ಸುರೇಶ್‌ ರೈನಾ ಗುಜರಾತ್‌ ಲಯನ್ಸ್‌ ತಂಡದ ನಾಯಕರಾಗಿ ತಂಡವನ್ನು ಮುನ್ನೆಡೆಸಿದ್ದರು. ಮಹೇಂದ್ರ ಸಿಂಗ್‌ ಧೋನಿ ಅವರ ಶಿಷ್ಯನಾಗಿ ಗುರುತಿಸಿಕೊಂಡಿದ್ದ ರೈನಾ ಧೋನಿ ನಿವೃತ್ತಿಯ ಬೆನ್ನಲ್ಲೇ ತಾವೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಸುರೇಶ್‌ ರೈನಾ ಮತ್ತೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೇರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದರು. ಒಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುಗಳಲ್ಲಿ ಸುರೇಶ್ ರೈನಾ ಸುಮಾರು 100 ಕೋಟಿ ಆದಾಯಗಳಿಸಿಕೊಂಡಿದ್ದಾರೆ. ಒಂದೊಮ್ಮೆ ಗುಜರಾತ್‌ ತಂಡ ರೈನಾ ಅವರನ್ನು ಖರೀದಿ ಮಾಡಿದ್ರೆ ಉತ್ತಮ ಆಟದ ಪ್ರದರ್ಶನ ನೀಡುವ ಸಾಧ್ಯತೆಯೂ ಇದೆ. ಆದರೆ ರೈನಾ ಅಭಿಮಾನಿಗಳು ಮಾತ್ರ ಈ ಬಾರಿಯ ಐಪಿಎಲ್‌ನಲ್ಲಿ ರೈನಾ ಕಾಣಿಸಿಕೊಳ್ಳಲಿ ಅಂತಾ ಹಾರೈಸುತ್ತಿದ್ದಾರೆ.

ಗುಜರಾತ್‌ ಲಯನ್ಸ್‌ ತಂಡ : ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಜೇಸನ್ ರಾಯ್, ಲಾಕಿ ಫರ್ಗುಸನ್ , ಅಭಿನವ್ ಮನೋಹರ್ , ರಾಹುಲ್ ತೆವಾಟಿಯಾ, , ನೂರ್ ಅಹ್ಮದ್, ಸಾಯಿ ಕಿಶೋರ್ , ಡೊಮಿನಿಕ್ ಡ್ರೇಕ್ಸ್ , ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ , ಯಶ್ ದಯಾಳ್, ಅಲ್ಜಾರಿ ಜೋಸೆಫ್ , ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ವರುಣ್ ಆರೋನ್.

ಇದನ್ನೂ ಓದಿ : 10 ತಂಡ,74 ಪಂದ್ಯ : ಇಲ್ಲಿದೆ ಐಪಿಎಲ್ 2022ರ ಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : ಗುಜರಾತ್ ಟೈಟಾನ್ಸ್ ತಂಡಕ್ಕೆ ಶಾಕ್‌ : ಖ್ಯಾತ ಆಟಗಾರ ಐಪಿಲ್‌ನಿಂದ ಔಟ್

(Suresh Raina enter Gujarat Titans for IPL 2022)

Comments are closed.