ಸೋಮವಾರ, ಜೂನ್ 16, 2025
HomeCinemaRavi Bopanna : ಈ ಶರೀರ ಯಾಕೆ ಹಿಂಗೇ….! ಮಾದಕ‌ ಹಾಡಿನೊಂದಿಗೆ ಮತ್ತೆ ಬಂದ‌ ರವಿಚಂದ್ರನ್

Ravi Bopanna : ಈ ಶರೀರ ಯಾಕೆ ಹಿಂಗೇ….! ಮಾದಕ‌ ಹಾಡಿನೊಂದಿಗೆ ಮತ್ತೆ ಬಂದ‌ ರವಿಚಂದ್ರನ್

- Advertisement -

Ravi Bopanna : ರವಿಚಂದ್ರನ್ ಸಿನಿಮಾ ಅಂದ್ರೇ ಅಲ್ಲಿ ಶೃಂಗಾರಕ್ಕೆ ಹೆಚ್ಚಿನ ಆದ್ಯತೆ. ಸೇಬು ಹಣ್ಣು, ದ್ರಾಕ್ಷಿ, ಹೆಣ್ಣಿನ ವರ್ಣನೆ,ಹಸಿಬಿಸಿ ದೃಶ್ಯ ಇಲ್ಲದೇ ರವಿಚಂದ್ರನ್ ಸಿನಿಮಾ ಕೊನೆಯಾಗೋದೇ ಇಲ್ಲ. ಈಗ ಈ ಮಾತಿಗೆ ಸಾಕ್ಷಿ ಎಂಬಂತೇ ಈ ವಯಸ್ಸಿನಲ್ಲಿ ರವಿಚಂದ್ರನ್ ನಟಿಸ್ತಿರೋ ಸಿನಿಮಾದಲ್ಲೂ ಸಖತ್ ಹಾಟ್ ಹಾಡೊಂದು ತೆರೆಗೆ ಬಂದಿದ್ದು, ಚಿತ್ರರಸಿಕರು ಬಿಟ್ಟ ಬಾಯಿ‌ ಬಿಟ್ಟಂತೆ ನೋಡಿ ಹಾಡಿನ ಥ್ರಿಲ್ ಎಂಜಾಯ್ ಮಾಡ್ತಿದ್ದಾರೆ.

ಹೌದು ರವಿಚಂದ್ರನ್ ಬಹು ವರ್ಷಗಳ ಬಳಿಕ ರವಿ ಬೋಪಣ್ಣ ಸಿನಿಮಾದ ಮೂಲಕ ತೆರೆಗೆ ಬರಲು ಸಿದ್ಧವಾಗಿದ್ದಾರೆ. ರವಿಚಂದ್ರನ್ ನಿವೃತ್ತ ಕಾನಸ್ಟೇಬಲ್ ಪಾತ್ರದಲ್ಲಿ ಕಾಣಿಸಿ ಕೊಂಡಿರೋ ಈ ಸಿನಿಮಾ ಸಖತ್ ನೀರಿಕ್ಷೆ ಮೂಡಿಸಿದೆ. ಈಗ ಈ ಸಿನಿಮಾದ ಈ ಶರೀರ ಯಾಕೆ ಹಿಂಗೇ ಎಂಬ ವಿಡಿಯೋ ಹಾಡಿನ ಸಣ್ಣ ಝಲಕ್ ರಿಲೀಸ್ ಆಗಿದೆ. ರಿಲೀಸ್ ಆಗಿರೋ ಹಾಡಿನಲ್ಲಿ ಮತ್ತೊಮ್ಮೆ ಮಲ್ಲ ಸಿನಿಮಾವನ್ನು ನೆನಪಿಸುವಂತ ದೃಶ್ಯಗಳನ್ನು ರವಿಚಂದ್ರನ್ ಜೋಡಿಸಿದ್ದಾರೆ.

ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿದ ರವಿ ಬೋಪಣ್ಣ ಸಿನಿಮಾದ ಈ ಹಾಡಿನ ಝಲಕ್ ರಿಲೀಸ್ ಆಗಿದ ಕೆಲವೇ ಗಂಟೆಗಳಲ್ಲಿ ಸಖತ್ ವೀವ್ಸ್ ಪಡೆದುಕೊಂಡಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ರೋಮ್ಯಾಂಟಿಕ್ ಸಾಂಗ್ ನ್ನು ಮತ್ತೇರಿಸುವಂತೆ ನಟಿ ಕಾವ್ಯ ಶೆಟ್ಟಿ ನಟ ರವಿಚಂದ್ರನ್ ಜೊತೆ ರೋಮ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲೂ ರವಿಚಂದ್ರನ್ ತಮ್ಮ ಹಿಂದಿನ ಸಿನಿಮಾಗಳಂತೆ ರಸಿಕತೆಯ ದೃಶ್ಯಗಳನ್ನು ಜೋಡಿಸಿರೋದು ಸ್ಯಾ‌ಂಡಲ್ ವುಡ್ ನಲ್ಲಿ ಸದ್ದು ಮಾಡಿದೆ.

ರವಿ ಬೋಪಣ್ಣ ಸಿನಿಮಾದ ಕೊನೆ ಸೀನ್ ನಲ್ಲಿ ನಟ ಸುದೀಪ್ ಕೂಡ ಕಾಣಿಸಿಕೊಳ್ಳಲಿದ್ದು,ವಕೀಲರ ಪಾತ್ರದಲ್ಲಿ ಸುದೀಪ್ ಮಿಂಚಲಿದ್ದಾರಂತೆ. ರವಿ ಬೋಪಣ್ಣ ಸಿನಿಮಾ ಅಂಗಾಂಗ ಗಳ ಮಾರಾಟ ಮಾಫಿಯಾದ ಮೇಲೆ ಹೆಣೆಯಲಾಗಿದ್ದು, ರವಿಚಂದ್ರನ್ ಆಕ್ಷ್ಯನ್ ಕಟ್ ಹೇಳಿದ್ದಾರೆ. ಮಲಯಾಳಂನಲ್ಲಿ ಸದ್ದು ಮಾಡಿದ ಜೋಸೆಫ್ ಸಿನಿಮಾವನ್ನು ಆಧರಿಸಿ ಕನ್ನಡಕ್ಕೆ ರವಿ ಬೋಪಣ್ಣ ಎಂದು ರಿಮೇಕ್ ಮಾಡಲಾಗಿದೆ.

ದೃಶ್ಯಂ ರಿಮೇಕ್ ಬಳಿಕ ರವಿಚಂದ್ರನ್ ಮತ್ತೊಂದು ಸಸ್ಪೆನ್ಸ್ ಕಥೆಯೊಂದಿಗೆ ತೆರೆಗೆ ಬರ್ತಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ಜೊತೆ ರಚಿತಾರಾಮ್, ಜೈ‌ಜಗದೀಶ್, ರಮ್ಯ ಕೃಷ್ಣನ್, ರವಿಶಂಕರ್ ಗೌಡ್ ಕೂಡ ನಟಿಸಿದ್ದಾರೆ. ಇನ್ನು ರವಿಚಂದ್ರನ್ ಈ ರವಿ ಬೋಪಣ್ಣ ಸಿನಿಮಾ ಇದೇ ಬರುವ 12 ರಂದು ತೆರೆಕಾಣಲಿದೆ.

ಇದನ್ನೂ ಓದಿ : rashmika mandanna : ಸಿನಿಮಾ ರಂಗಕ್ಕೆ ಗುಡ್​ಬೈ ಹೇಳಿ ರಾಜಕೀಯಕ್ಕೆ ಸೇರಲಿದ್ದಾರಾ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Radhika Pandit Celebration : ಯಶ್- ರಾಧಿಕಾ ಮನೆಯಲ್ಲಿ ಹೇಗಿತ್ತು ವರಮಹಾಲಕ್ಷ್ಮೀ ? ಇಲ್ಲಿದೆ ಪೋಟೋಸ್

E Shareera Yaake Hinge V Ravichandran entry with Ravi Bopanna

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular