Hara Ghara Tiranga Abhiyan : ಹರ ಘರ ತಿರಂಗಾ ಅಭಿಯಾನ : ಕಿಚ್ಚ ಸುದೀಪ್‌ ನಿವಾಸ ತಲುಪಿದ ತ್ರಿವರ್ಣ ಧ್ವಜ

Hara Ghara Tiranga Abhiyan : ಸದ್ಯ ವಿಕ್ರಾಂತ್ ರೋಣಾ ಗೆಲುವಿನ ಸಂಭ್ರಮದಲ್ಲಿರೋ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ ರಾಜಕೀಯಕ್ಕೆ ಬರ್ತಾರಾ? ಇಂತಹದೊಂದು ಸುದ್ದಿ ಹರಿದಾಡೋದಿಕ್ಕೆ ಕಾರಣವಾಗಿರೋದು ಬಿಜೆಪಿ ನಾಯಕರು ನಟ ಸುದೀಪ್ ಮನೆಗೆ ಭೇಟಿ ನೀಡಿದ ಸಂಗತಿ.ಹೌದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ನಟ ಸುದೀಪ್ ಮನೆಗೆ ಭೇಟಿ ನೀಡಿ ಅರ್ಧ ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ.

ಹೀಗಾಗಿ ನಟ ಸುದೀಪ್ ಅವರು ರಾಜಕೀಯಕ್ಕೆ ಬರುತ್ತಾರೆ‌. ಹೀಗಾಗಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷರೇ ಸುದೀಪ್ ನಿವಾಸಕ್ಕೆ ತೆರಳಿ ನಟ ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ರೂಮರ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಪೂರಕವಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ಸುದೀಪ್ ಹಾಗೂ ಇತರ ಬಿಜೆಪಿ ನಾಯಕರು ಇರುವ ಪೋಟೋಗಳು ವೈರಲ್ ಆಗಿವೆ.

ಆದರೆ ಈ ಪೋಟೋದ ಅಸಲಿಯತ್ತು ಬೇರೆಯದೇ ಇದೆ. ದೇಶ ಪ್ರಸ್ತುತ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಭ್ರಮದಲ್ಲಿದೆ. ಹೀಗಾಗಿ ಈ ಸಂಭ್ರಮವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಅನ್ವಯ ದೇಶದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಕೇಂದ್ರ ಸರ್ಕಾರ ಬಯಸಿದೆ. ಇದರ ಹೊಣೆಯನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ.

ಇದೇ ಕಾರ್ಯಕ್ರಮದ ಅಂಗವಾಗಿ ರಾಜ್ಯ ಬಿಜೆಪಿ ನಾಯಕರು ಸುದೀಪ್ ನಿವಾಸಕ್ಕೆ ತೆರಳಿ ಧ್ವಜ‌ನೀಡಿ ಗೌರವಿಸಿದ್ದಾರೆ. ಕೇಂದ್ರ ಸರ್ಕಾರದ ಆಶಯದಂತೆ ಬಿಜೆಪಿ ಹರ ಘರ ತಿರಂಗಾ ಯೋಜನೆ ಸಿದ್ಧಪಡಿಸಿದೆ. ಇದರನ್ವಯ ಸೆಲೆಬ್ರೆಟಿಗಳು ಹಾಗೂ ನಾಯಕರಿಗೆ ಖುದ್ದು ಬಿಜೆಪಿ ನಾಯಕರೇ ಹೋಗಿ ಧ್ವಜ ನೀಡುತ್ತಿದ್ದಾರೆ. ಜೆಪಿನಗರದಲ್ಲಿರೋ ಸುದೀಪ್ ನಿವಾಸಕ್ಕೆ ನಳಿನ್ ಕುಮಾರ್ ತೆರಳಿ ಧ್ವಜ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಜಿ ವಿ , ಕ್ಷೇತ್ರದ ಶಾಸಕರಾಧ ಶ್ರೀ ಸತೀಶ್ ರೆಡ್ಡಿ, ರಾಜ್ಯಸಭಾ ಸಂಸದರಾದ ಶ್ರೀ ಜಗ್ಗೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಮಂಜುನಾಥ ಸಾಥ್ ನೀಡಿದ್ದಾರೆ.

ಇದನ್ನೂ ಓದಿ : Radhika Pandit Celebration : ಯಶ್- ರಾಧಿಕಾ ಮನೆಯಲ್ಲಿ ಹೇಗಿತ್ತು ವರಮಹಾಲಕ್ಷ್ಮೀ ? ಇಲ್ಲಿದೆ ಪೋಟೋಸ್

ಇದನ್ನೂ ಓದಿ : Ravi Bopanna : ಈ ಶರೀರ ಯಾಕೆ ಹಿಂಗೇ….! ಮಾದಕ‌ ಹಾಡಿನೊಂದಿಗೆ ಮತ್ತೆ ಬಂದ‌ ರವಿಚಂದ್ರನ್

Hara Ghara Tiranga Abhiyan, flag reached Kiccha Sudeep residence

Comments are closed.