ಸೋಮವಾರ, ಏಪ್ರಿಲ್ 28, 2025
HomeCinemaEk Love Ya : ಅಗಲಿದ 12 ದಿನಕ್ಕೆ ಅಪ್ಪುಗೆ ಅವಮಾನ ! ಪವರ್ ಸ್ಟಾರ್...

Ek Love Ya : ಅಗಲಿದ 12 ದಿನಕ್ಕೆ ಅಪ್ಪುಗೆ ಅವಮಾನ ! ಪವರ್ ಸ್ಟಾರ್ ಪೋಟೋ ಎದುರು ಶಾಂಪೇನ್ ಸಿಡಿಸಿದ ಸಿನಿಮಾಸ್ಟಾರ್ಸ್

- Advertisement -

ಏಕ್ ಲವ್ ಯಾ ( ek love ya ) ಸಿನಿಮಾದ ಹಾಡು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುವ ಸಿದ್ಧತೆಯಲ್ಲಿದ್ದಾಗಲೇ ಚಿತ್ರತಂಡದ ಎಡವಟ್ಟಿನಿಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು, ಸೋಷಿಯಲ್ ಮೀಡಿಯಾ ಹಾಗೂ ಚಿತ್ರರಂಗದ ಗಣ್ಯರ ಕೆಂಗಣ್ಣಿಗೆ ಗುರಿಯಾಗಿದೆ.‌ ಇಷ್ಟಕ್ಕೂ ನಡೆದಿದ್ದೇನು ಅಂತಿರಾ ಈ ಸ್ಟೋರಿ ಓದಿ.

ನಿನ್ನೆ ಸ್ಯಾಂಡಲ್ ವುಡ್ ನ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ನಿರ್ದೇಶನದ ಚಿತ್ರ ಏಕ್ ಲವ್ ಯಾ ಸಿನಿಮಾದ. ಹೆಣ್ಣಿಗೂ ಎಣ್ಣೆಗೂ ಎಲ್ಲಿಂದ ಲಿಂಕ್ ಇಟ್ಟೆ ಪರಮಾತ್ಮ ವಿಡಿಯೋ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಸ್ಟಾರ್ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅದಿತಿಪ್ರಭುದೇವ್, ರಚಿತಾ ರಾಮ್, ನಟ ರಾಣಾ,ರಕ್ಷಿತಾ ಪ್ರೇಮ್, ಪ್ರೇಮ್ ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಅಪ್ಪು ಗೆ ನಮನ ಸಲ್ಲಿಸಿದ ಚಿತ್ರತಂಡ ಬಳಿಕ ಹಾಡು ಬಿಡುಗಡೆಯ ಖುಷಿಗೆ ಅಪ್ಪು ಪೋಟೋದ ಎದುರು ಶಾಂಪೇನ್ ಸಿಡಿಸಿ ಸಂಭ್ರಮಿಸಿದೆ. ಅಪ್ಪು‌ ನಿಧನರಾಗಿ ಎರಡು ವಾರಗಳೇ ಕಳೆದರೂ ಇನ್ನು ಜನರಿಗೆ ಆ ದುಃಖ ಪುನೀತ್ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಜನ ಇನ್ನೂ ಪುನೀತ್ ಗಾಗಿ ಕನವರಿಸುತ್ತಲೇ ಇದ್ದಾರೆ.

ಹೀಗಿರುವಾಗ ಅಪ್ಪು ನಿಧನವಾಗಿ ಎರಡು ವಾರದಲ್ಲೇ ಆಯೋಜಿಸಲಾದ ಸಾಂಗ್ ರಿಲೀಸ್ ಪ್ರೋಗ್ರಾಂ ನಲ್ಲಿ ಶಾಂಪೇನ್ ಸಿಡಿಸಿರುವುದು ಚಿತ್ರತಂಡ ಮೇಲೆ ಸೋಷಿಯಲ್ ಮೀಡಿಯಾ ಮಂದಿ ಮುನಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ತೆರೆ ಮೇಲೆ ಕೂಡ ಕುಡಿತ, ಜೂಜು, ಸಿಗರೇಟ್ ಸೇವನೆಯಂತಹ ಸಂಗತಿಗಳನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಹೀಗಿರುವಾಗ ಅವರ ಪೋಟೋದ ಎದುರು ಚಿತ್ರತಂಡ ಹುಚ್ಚಾಟ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಚಾರ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದ್ದು ಜನರು ಪ್ರೇಮ್, ರಕ್ಷಿತಾ ಪ್ರೇಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿರೋಧಗಳಿಂದ ಮುಜುಗರ ಕ್ಕೊಳಗಾದ ರಕ್ಷಿತಾ ಪ್ರೇಮ್ ಸೋಷಿಯಲ್ ಮೀಡಿಯಾದ ಮೂಲಕ ಅಪ್ಪು ಅಭಿಮಾನಿಗಳ‌ ಕ್ಷಮೆ ಕೋರಿದ್ದಾರೆ. ಸಿನಿಮಾ ನಟಿ ಹಾಗೂ ಸಾಂಗ್ ನಲ್ಲಿ ಮಿಂಚಿದ ರಚಿತಾ ರಾಮ್ ಕೂಡ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು ಕ್ಷಮೆಯಾಚಿಸಿದ್ದಾರೆ. ನಮ್ಮೆಲ್ಲರಿಗೂ ಪುನೀತ್ ಸದಾ ಸ್ಮರಣೀಯರು‌. ಅವರ ಅಭಿಮಾನಿಗಳಿಗೆ ನೋವಾಗಿದ್ದರೇ ನಾನು ಕ್ಷಮೆಯಾಚಿಸುತ್ತೆನೆ ಎಂದಿದ್ದಾರೆ.

ಇದನ್ನೂ ಓದಿ : Rachita Ram : Expose ಬಳಿಕ ಎಣ್ಣೆ ಹಾಡು : ಡಿಂಪಲ್ ಕ್ವೀನ್ ಅವತಾರಕ್ಕೆ ಮೆಚ್ಚಿದ ಫ್ಯಾನ್ಸ್

ಇದನ್ನೂ ಓದಿ : ‘ಏಕ್ ಲವ್ ಯಾ’ ನಲ್ಲಿ ರಚ್ಚು ಸಖತ್ ಹಾಟ್ : ವೈರಲ್ ಆಯ್ತು ಲಿಪ್ ಲಾಕ್ ಸೀನ್

(ek love ya movie controversy in the opening of a champagne bottle before the late Puneeth Rajkumar’s portrait during a song release)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular