Puneeth Eye : ಸಾವಿನಲ್ಲೂ ಸಾರ್ಥಕತೆ : 10 ಅಂಧರ ಬಾಳಿಗೆ ಬೆಳಕಾಗಲಿದೆ ಅಪ್ಪು ಕಣ್ಣು

ಕನ್ನಡದ ಪವರ್ ಸ್ಟಾರ್, ದೊಡ್ಮನೆಯ ಯುವರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಎರಡು ವಾರಗಳೇ ಕಳೆದಿವೆ.ಆದರೂ ಸಂತಾಪ ನಿಂತಿಲ್ಲ. ಈ ಮಧ್ಯೆ ಸಾವಿನಲ್ಲೂ ಪುನೀತ್ ಇತರರಿಗೆ ಮಾದರಿಯಾಗಿದ್ದು ಪುನೀತ್ ಪವರ್ ಫುಲ್ ಕಣ್ಣು (Puneeth Eye) ಈಗ 10 ಅಂಧರ ಬಾಳು ಬೆಳಗಲಿದೆ.

ಡಾ.ರಾಜ್ ಕುಮಾರ್ ನೆನಪಿಗಾಗಿ ರಾಜ್ಯದಲ್ಲಿ ಡಾ.ರಾಜ್ ಕುಮಾರ್ ಐ ಬ್ಯಾಂಕ್ ಇದೆ. ಡಾ.ರಾಜ್ ಕೂಡ ಸ್ವತಃ ತಮ್ಮ ಕಣ್ಣು ದಾನ ಮಾಡಿದ್ದರು. ತಂದೆಯ ಹಾದಿಯಲ್ಲೇ ಸಾಗಿದ ನಟ ಪುನೀತ್ ರಾಜ್ ಕುಮಾರ್ ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಪುನೀತ್ ಅಕಾಲಿಕ ಸಾವಿನ ಬಳಿಕ ವೈದ್ಯರು ಪುನೀತ್ ಆಸೆಯಂತೇ ಅವರ ಕಣ್ಣುಗಳನ್ನು ಸಂಗ್ರಹಿಸಿದ್ದರು. ಈ ಆ ಕಣ್ಣುಗಳನ್ನು ಬಳಸಿಕೊಂಡು ನಾರಾಯಣ ನೇತ್ರಾಲಯ 10 ಅಂಧರ ಬದುಕಿಗೆ ಬೆಳಕು ನೀಡಲು ಸಿದ್ಧವಾಗಿದೆ.

ಈ ಬಗ್ಗೆ ಬೆಂಗಳೂರಿನ ನಾರಾಯಣ ನೇತ್ರಾಲಯದ ವೈದ್ಯರಾದ ಡಾ.ಯತೀಶ್ ಮಾಹಿತಿ‌ನೀಡಿದ್ದು, ಕಣ್ಣನ್ನು ಇಷ್ಟೇ ಮಂದಿಗೆ ಹಾಕಲು ಸಾದ್ಯ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈಗಾಗಲೇ ಕಪ್ಪು ಗುಡ್ಡೆಗಳನ್ನು ನಾಲ್ಕು ಜನರಿಗೆ ಇಂಪ್ಲ್ಯಾಂಟ್ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೇ ಕಣ್ಣಿನ ಬಿಳಿಗುಡ್ಡೆ ಮಧ್ಯೆ ಸ್ಟೆಮ್ ಸೆಲ್ಸ್ ಇರುತ್ತದೆ. ಅದು ನಮ್ಮ ಕಣ್ಣು ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತದೆ.ಸ್ಟೆಮ್ ಸೆಲ್ಸ್ ಗೆ ಡ್ಯಾಮೇಜ್ ಆದರೆ ಕಣ್ಣಿನ ದೃಷ್ಟಿ ದೋಷ ಬರುತ್ತದೆ.

ಹೀಗಾಗಿ ಈಗ ನಾವು ಸ್ಟೆಮ್ ಸೆಲ್ಸ್ ಗಳಿಂದ ಕಣ್ಣಿನ ದೋಷ ಎದುರಿಸುತ್ತಿರುವವರಿಗೆ ಈ ಸ್ಟೆಮ್ ಸೆಲ್ಸ್ ಅಳವಡಿಸಲು ಸಿದ್ಧತೆ ನಡೆಸಿದ್ದೇವೆ ಎಂದು ವಿವರಣೆ ನೀಡಿದ್ದಾರೆ. ಅಪ್ಪು ಸ್ಟೆಮ್ ಸೆಲ್ಸ್ ನ್ನು ಲ್ಯಾಬೋರೇಟರಿಯಲ್ಲಿ ಇಟ್ಟಿರೋ ವೈದ್ಯರು ಅಭಿವೃದ್ಧಿ ಪಡಿಸುತ್ತಿದ್ದಾರಂತೆ. ಯಾರಿಗೆ ಅಳವಡಿಸಬೇಕು ಎಂಬ ವಿಚಾರವೂ ಚರ್ಚೆ ಯಲ್ಲಿದ್ದು ಡಾ. ರಾಜ್ ಕುಮಾರ್ ಐ ಬ್ಯಾಂಕ್ ಮೂಲಕ ಅಗತ್ಯ ಉಳ್ಳವ ರನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯಲಿದೆಯಂತೆ‌. ಇನ್ನು ಇಡಿ ವಿಶ್ವದಲ್ಲೇ ಇಂತಹದೊಂದು ಪ್ರಯತ್ನ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆದಿದ್ದು ಯಶಸ್ವಿಯಾದಲ್ಲಿ ಅಂಧತ್ವದ ಪ್ರಮಾಣ ಕುಗ್ಗಿ ಜನರಿಗೆ ಸಹಾಯವಾಗಲಿದೆ‌.

ಇದನ್ನೂ ಓದಿ : ಅಗಲಿದ 12 ದಿನಕ್ಕೆ ಅಪ್ಪುಗೆ ಅವಮಾನ ! ಪವರ್ ಸ್ಟಾರ್ ಪೋಟೋ ಎದುರು ಶಾಂಪೇನ್ ಸಿಡಿಸಿದ ಸಿನಿಮಾಸ್ಟಾರ್ಸ್

ಇದನ್ನೂ ಓದಿ : ಅಪ್ಪು ಅಗಲಿಕೆ ನೋವಿನಲ್ಲೂ ಸಿನಿತಂಡದ ಸಂಕಷ್ಟಕ್ಕೆ ಮಿಡಿದ ಶಿವರಾಜ್‌ ಕುಮಾರ್‌

( Puneeth Rajkumar donate Eyes may help to 10 people )

Comments are closed.