ಸೋಮವಾರ, ಏಪ್ರಿಲ್ 28, 2025
HomeCinemaKavya Thapar : ಕುಡಿದು ಅಪಘಾತ ನಡೆಸಿ, ಪೊಲೀಸರಿಗೆ ಹಲ್ಲೆ : ಜೈಲು ಸೇರಿದ ಖ್ಯಾತ...

Kavya Thapar : ಕುಡಿದು ಅಪಘಾತ ನಡೆಸಿ, ಪೊಲೀಸರಿಗೆ ಹಲ್ಲೆ : ಜೈಲು ಸೇರಿದ ಖ್ಯಾತ ನಟಿ ಕಾವ್ಯ ಥಾಪರ್‌

- Advertisement -

ತಡರಾತ್ರಿ ಪಾರ್ಟಿ ಮಾಡೋದು, ಕುಡಿದು ವಾಹನ ಚಲಾಯಿಸೋದು ಇತ್ತೀಚಿನ ದಿನಗಳ ಮಾಮೂಲಿ ಆಗ್ತಿದೆ. ಸೆಲೆಬ್ರಿಟಿಗಳ ವಿರುದ್ದ ಪ್ರಕರಣ ದಾಖಲಾಗಿದ್ರೂ ಕೂಡ ಪ್ರಭಾವ ಬಳಸಿ ಪ್ರಕರಣವನ್ನೇ ಮುಚ್ಚಿ ಹಾಕಿಸುತ್ತಾರೆ. ಆದ್ರೆ ಇಲ್ಲೋರ್ವ ನಟಿ ಕುಡಿದು ವಾಹನ ಚಲಾಯಿಸಿ ಅಪಘಾತ ನಡೆಸಿದ ತಪ್ಪಿಗೆ ಜೈಲು ಸೇರಿದ್ದಾಳೆ. ಏಕ್ ಮಿನಿ ಕಥಾ ಖ್ಯಾತಿಯ ಕಾವ್ಯಾ ಥಾಪರ್ (Kavya Thapar) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರ ಜೊತೆಗೆ ತಡರಾತ್ರಿ ಪಾರ್ಟಿ ನಡೆಸಿ, ಕುಡಿದ ಮತ್ತಲ್ಲಿ ವಾಹನ ಚಲಾಯಿಸಿದ್ದಾರೆ. ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ತಪಾಸಣೆ ನಡೆಸುವ ವೇಳೆಯಲ್ಲಿ ಪೊಲೀಸರನ್ನು ಅಮಾನುಷವಾಗಿ ನಿಂದಿಸಿರುವುದು ಮಾತ್ರವಲ್ಲದೇ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾವ್ಯಾ ಥಾಪರ್ ಅವರನ್ನು ಮುಂಬೈನ ಜುಹು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಜೆ ಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಬಳಿಯಲ್ಲಿ ನಟಿ ಕಾವ್ಯಾ ಥಾಪರ್‌, ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ನಡೆಸಿದ್ದಾರೆ. ಮಧ್ಯರಾತ್ರಿ ಸುಮಾರು 1 ಗಂಟೆಗೆ ತನ್ನ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ನಟಿ ಕಾವ್ಯಾ ಥಾಪರ್ ಕುಡಿದ ಅಮಲಿನಲ್ಲಿ ಕಾರನ್ನು ಚಲಾಯಿಸಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ, ನಟಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಆಕೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾಳೆ.

ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ನಟಿ ಕಾವ್ಯ ಥಾಪರ್‌ ಸಮವಸ್ತ್ರದ ಕಾಲರ್‌ ಹಿಡಿದಿದ್ದಾರೆ ಎಂದು ಪೊಲೀಸರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಕಾವ್ಯಾ ಥಾಪರ್ ಅವರನ್ನು ಬಂಧಿಸಿರುವ ಪೊಲೀಸರು ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಆಕೆಯನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗಿದೆ. ಜಾಮೀನು ರಹಿತ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ನಟಿ ಜಾಮೀನು ಸಿಗುವವರೆಗೂ ಜೈಲಿನಲ್ಲಿಯೇ ಉಳಿಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ತಡರಾತ್ರಿ ಪಾರ್ಟಿ ನಡೆಸೋದು, ಕುಡಿದು ವಾಹನ ಚಲಾಯಿಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಕಾವ್ಯ ಥಾಪರ್‌ ಕೂಡ ಅದೇ ಸಾಲಿಗೆ ಸೇರಿದ್ದಾಳೆ.

ಇದನ್ನೂ ಓದಿ : ಸನ್ನಿ ಲಿಯೋನ್ ಪಾನ್ ಕಾರ್ಡ್ ಗೂ ಕನ್ನ: 2 ಸಾವಿರ ರೂಪಾಯಿ ಸಾಲ ಪಡೆದ ಭೂಪ, ದುಃಖ ತೋಡಿಕೊಂಡ ನೀಲಿತಾರೆ

ಇದನ್ನೂ ಓದಿ : ಕೆಜಿಎಫ್- 2 ಗೆ ಬಾಲಿವುಡ್ ಕಂಟಕ : ಏಪ್ರಿಲ್ 14 ರಂದೇ ತೆರೆಗೆ ಬರಲಿದೆ ಜೆರ್ಸಿ ಸಿನಿಮಾ

(Ek Mini Katha fame Kavya Thapar arrested in Mumbai for abusing policemen and drunk driving)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular