Karnataka Budget 2022 : ವಿಧಾನಸಭಾ ಚುನಾವಣೆಗೆ ಮಾಸ್ಟರ್‌ ಫ್ಲ್ಯಾನ್‌ : ಬಜೆಟ್‌ ಮಂಡನೆ ಇನ್ನಷ್ಟು ವಿಳಂಭ

ಬೆಂಗಳೂರು : ಹಲವು ರಾಜಕೀಯ ಏರಿಳಿತಗಳ ನಡುವೆ ಸರ್ಕಾರ ನಡೆಸುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಬಜೆಟ್ ಮಂಡಿಸುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಬಜೆಟ್ ಗಾಗಿ ಪೂರ್ವಸಿದ್ಧತಾ ಸಭೆ, ಸಮಾಲೋಚನೆ, ತಜ್ಞರ ಅಭಿಪ್ರಾಯ ಪಡೆದಿರುವ ಸಿಎಂ ಬಜೆಟ್ ಗೆ (Karnataka Budget 2022) ಸಜ್ಜಾಗುತ್ತಿದ್ದರೂ ಮುಂದಿನ ವರ್ಷದ ಚುನಾವಣೆ ಯನ್ನು ಗಮನದಲ್ಲಿಟ್ಟುಕೊಂಡೇ ಆಯವ್ಯಯ ಮಂಡಿಸುವ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ನಿಗದಿತ ಸಮಯಕ್ಕೆ ಬಜೆಟ್ ಮಂಡನೆ ಅನುಮಾನ ಎನ್ನಲಾಗ್ತಿದೆ.

ಮಾರ್ಚ್ 4 ರಂದು ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಿದ್ಧತೆ ನಡೆಸಿದ್ದರು. ಆದರೇ ಇನ್ನೂ ಬಜೆಟ್ ಗೆ ಅಗತ್ಯ ಸಿದ್ಧತೆಗಳು ನಡೆಯಬೇಕಿರೋದರಿಂದ ಮಾರ್ಚ್ ಅಂತ್ಯದ ವೇಳೆಗೆ ಬಜೆಟ್‌ ಮಂಡನೆಯಾಗೋ ಸಾದ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಬಜೆಟ್ ಪೂರ್ವಭಾವಿ ಸಿದ್ದತೆ ನಡೆಸಿರುವ‌ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ರಾಜ್ಯದ ಸಂಸದರ ಜೊತೆ ಮಾತುಕತೆ ಚರ್ಚೆ ನಡೆಸಿ ಬಂದಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲೂ ಬಜೆಟ್ ಆಧಿವೇಶನ ನಡೆಸಿ ಆಯವ್ಯಯಕ್ಕೆ ಅಗತ್ಯ ಸಲಹೆ ಸೂಚನೆ ಪಡೆದಿದ್ದಾರೆ.

ಇಷ್ಟೆಲ್ಲ ನಡೆದಿದ್ದರೂ ನಿಗದಿತ ಅವಧಿಯಲ್ಲೇ ಬಜೆಟ್ ಮಂಡಿಸಲು ಸಿಎಂಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇದುವರೆಗಿನ ಮಾಹಿತಿ ಪ್ರಕಾರ ಮಾರ್ಚ್4 ಅಥವಾ 8 ರಂದು ರಾಜ್ಯದ ಆಯವ್ಯಯ ಮಂಡನೆಯಾಗಬೇಕಿತ್ತು. ಆದರೆ ಇದಕ್ಕಿಂತಲೂ ಹೆಚ್ಚಿನ ಅವಧಿ ಬಜೆಟ್ ಸಿದ್ಧತೆಗೆ ಬೇಕೆಂದು ಸ್ವತಃ ಆರ್ಥಿಕ ಸಚಿವರು ಆಗಿರುವ ಬೊಮ್ಮಾಯಿ ಹೇಳಿಕೊಂಡಿದ್ದಾರೆ.

ಹೀಗಾಗಿ ಮಾರ್ಚ್ 22 ರ ವೇಳೆಗೆ ರಾಜ್ಯದ ಬಜೆಟ್ ಮಂಡನೆಯಾಗೋ ಸಾಧ್ಯತೆ ಇದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ . ಚುನಾವಣೆಯ ಪೂರ್ವತಯಾರಿಯಾಗಿ ಬಜೆಟ್ ಮಂಡಿಸಬೇಕಾಗಿರೋದರಿಂದ ಸಿಎಂ ಮತ್ತಷ್ಟು ಒತ್ತಡದಲ್ಲಿದ್ದು ಇದರಿಂದಲೇ ಬಜೆಟ್ ವಿಳಂಬಗೊಳ್ಳಲಿದೆ ಎನ್ನಲಾಗುತ್ತಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಘೋಷಿಸಬೇಕಾದ ಅನುದಾನ, ಜಾತಿ ಸಮುದಾಯಗಳಿಗೆ ನೀಡಬೇಕಾದ ಯೋಜನೆಗಳ ಬಗ್ಗೆ ಸಿಎಂ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿರೋದರಿಂದ ಬಜೆಟ್ ಮಂಡನೆ ವಿಳಂಬವಾಗಲಿದೆ.

ಪಕ್ಷದ ನಾಯಕರೊಂದಿಗೆ ಚರ್ಚಿಸಿ ಬಿಜೆಪಿಯ ಶಾಸಕರ ಸಂಖ್ಯೆ ಹೆಚ್ಚಿಸಿಕೊಳ್ಳುವಂತ, ಚುನಾವಣೆಯಲ್ಲಿ ಮತಗಳಿಕೆಗೆ ನೆರವಾಗುವಂತ ಬಜೆಟ್ ಮಂಡಿಸೋ ಹೊಣೆಗಾರಿಕೆ ಸಿಎಂ ಮೇಲಿದೆ. ಹೀಗಾಗಿ ಆಯವ್ಯಯ ಸಿದ್ಧಪಡಿಸಲು ಬೊಮ್ಮಾಯಿ ಒಂದು ವಾರಗಳ ಎಕ್ಟ್ರಾ ಕಾಲಾವಕಾಶ ಕೋರಿದ್ದಾರಂತೆ. ಹೀಗಾಗಿ ಮಾರ್ಚ್ 15 ಅಥವಾ 22 ರಂದು ರಾಜ್ಯದ ಆಯವ್ಯಯ ಮಂಡನೆಯಾಗಲಿದೆ. ಸಾಕಷ್ಟು ಕ್ಷೇತ್ರಗಳಲ್ಲಿ ನೂರಾರು ಯೋಜನೆಗಳಿಗೆ ಅನುದಾನ ಹಾಗೂ ಒಪ್ಪಿಗೆ ಸಿಗೋ ನೀರಿಕ್ಷೆ ಜನರಲ್ಲಿದೆ.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆಗೆ ಮತ್ತೆ ಚಾಲನೆ : ಡಿಕೆಶಿ, ಸಿದ್ಧರಾಮಯ್ಯ ಘೋಷಣೆ

ಇದನ್ನೂ ಓದಿ : ವಾಟ್ಸಾಪ್ ಕಾಲ್ ರೆಕಾರ್ಡ್ ಮಾಡುವುದು ಇನ್ನು ಸುಲಭ

(Karnataka Budget 2022 to delay, because election purpose)

Comments are closed.