ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಜಗತ್ತು ಮರೆತಷ್ಟು ಬೇಗ ದೌರ್ಜನ್ಯ ಕ್ಕೆ ಒಳಗಾದವರು ಮರೆಯೋದಿಲ್ಲ. ಅವರು ಕಾಮನ್ ಹೆಣ್ಣ ಮಕ್ಕಳಾಗಲಿ ಅಥವಾ ಸೆಲೆಬ್ರೆಟಿಗಳಾಗಲಿ ವ್ಯಕ್ತಿತ್ವ ಮತ್ತು ಮನಸ್ಸಿನ ಮೇಲೆ ಆಗುವ ಗಾಯಗಳು ದೈಹಿಕ ನೋವಿಗಿಂತ ಹೆಚ್ಚು ಬಾಧಿಸುತ್ತವೇ. ಇಂತಹುದೇ ನೋವೊಂದರ ಬಗ್ಗೆ ಬಹುಭಾಷಾ ನಟಿ ಭಾವನಾ (Bhavana Menon ) ಮಾತನಾಡಿದ್ದು, ಕಳೆದ ಐದು ವರ್ಷಗಳ ಹಿಂದೆ ಕಳೆದುಕೊಂಡ ಡಿಗ್ನಿಟಿ ಪಡೆದುಕೊಳ್ಳಲು ನನ್ನ ಹೋರಾಟ ಎಂದಿದ್ದಾರೆ.

ಮಹಿಳಾ ದಿನಾಚರಣೆಯ ಅಂಗವಾಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಭಾವನಾ, ನನ್ನ ಯಾವುದೇ ತಪ್ಪಿಲ್ಲದೇ ನಾನು ತಪ್ಪಿತಸ್ಥಳಾಗಿದ್ದೇನ. ನನ್ನ ಡಿಗ್ನಿಟಿ ಗೌರವ ನೂರು ಚೂರಾಗಿದೆ. ನನ್ನ ಕುಟುಂಬಸ್ಥರು, ಸಂಬಂಧಿಗಳು, ಆಪ್ತರು ನನ್ನ ಪತಿ ನನ್ನ ಬೆಂಬಲಕ್ಕೆ ನಿಂತಿದ್ದರು. ಆದರೂ ನಾನು ನೋವು ಅನುಭವಿಸಿದೆ.

ನಾನು ಈ ನೋವಿನಿಂದ ಹೊರಬರಲು ತುಂಬ ಕಷ್ಟಪಟ್ಟಿದ್ದೇನೆ. 2020 ರಲ್ಲಂತೂ ನಾನು ಕೋರ್ಟ್ ನ ಕಟಕಟೆಯಲ್ಲಿ ತುಂಬ ಹಿಂಸೆ ಅನುಭವಿಸಿದ್ದೇನೆ. ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡಲಾರದೇ ಕಷ್ಟಪಟ್ಟಿದ್ದೇನೆ. ನನ್ನನ್ನು ವಕೀಲರು ಇನ್ನಿಲ್ಲದಂತೆ ಕ್ರಾಸ್ ಚೆಕ್ ಮಾಡಿ ಪ್ರಶ್ನೆ ಮಾಡುತ್ತಿದ್ದರು. ನಾನು ಮುಗ್ಧೆ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ನಾನು 7 ವಕೀಲರಿಗೆ ಉತ್ತರ ನೀಡಬೇಕಾಗುತ್ತಿತ್ತು ಎಂದು ಭಾವನಾ (Bhavana Menon) ತಮ್ಮ ನೋವು ತೋಡಿಕೊಂಡಿದ್ದಾರೆ.

2017 ರಲ್ಲಿ ನಟಿ ಭಾವನಾ ಶೂಟಿಂಗ್ ನಿಂದ ಹಿಂತಿರುಗುತ್ತಿದ್ದ ವೇಳೆ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಮಾತ್ರವಲ್ಲ ಅವರ ಮೇಲೆ ಹಲ್ಲೆ ಹಾಗೂ ಅವರಿಗೆ ಲೈಂಗಿಕ ಕಿರುಕುಳ ಕೂಡ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ರನ್ನು ಬಂಧಿಸಲಾಗಿತ್ತು. ಬಳಿಕ ದಿಲೀಪ್ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಭಾವನಾ (Bhavana Menon) ಮಾತ್ರ ಘಟನೆ ನಡೆದ ಇಷ್ಟು ವರ್ಷಗಳ ಬಳಿಕವೂ ಹಿಂಸೆ ಅನುಭವಿಸುತ್ತಿದ್ದು, ತಮ್ಮ ಡಿಗ್ನಿಟಿಗಾಗಿ ಮತ್ತೆ ಹೋರಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಘಟನೆ ವೇಳೆ ಸಂಚಲನ ಮೂಡಿಸಿತ್ತು. ಈ ವೇಳೆ ಹಲವರು ಭಾವನಾ (Bhavana Menon) ವಿರುದ್ಧವೇ ಟ್ರೋಲ್ ಮಾಡಿದ್ದರು. ಸೋಷಿಯಲ್ ಮೀಡಿಯಾ ಸೇರಿದಂತೆ ಹಲವೆಡೆ ಭಾವನಾರಿಗೆ ನಡೆದ ಅನ್ಯಾಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದವು. ಅದಾದ ಬಳಿಕ ಬಹುಕಾಲ ಭಾವನಾ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ಚಟುವಟಿಕೆಗಳಿಂದ ದೂರ ಉಳಿದಿದ್ದರು.

ಮಲೆಯಾಳಂನ ಪ್ರಥ್ವಿರಾಜ್ ಸುಕುಮಾರನ್, ಜಯಸೂರ್ಯ, ಆಶಿಕ್ ಬಾಬು, ಶಾಜಿ ಕೈಲಾಸ್ ಬಿಟ್ಟು ಬೇರೆ ಯಾರೂ ಸಿನಿಮಾ ಅವಕಾಶಗಳನ್ನು ಕೂಡ ನೀಡಿರಲಿಲ್ಲ. ಸದ್ಯ ಇವೆಲ್ಲದರಿಂದ ಹೊರಬಂದಿರೋ ನಟಿ ಭಾವನಾ (Bhavana Menon) ನ್ಯಾಯಕ್ಕಾಗಿ ಹಾಗೂ ಈ ಘಟನೆಗೆ ಕಾರಣವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಮತ್ತೊಮ್ಮೆ ಯಾರು ಇಂಥಹ ಅಗ್ನಿಪರೀಕ್ಷೆಗೆ ಒಳಗಾಗಬಾರದು ಎಂಬ ಕಾರಣಕ್ಕಾಗಿ ನಾನು ನನ್ನ ಈ ಹೋರಾಟವನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.

ಕನ್ನಡದ ಟಗರು, ವಿಷ್ಣುವರ್ಧನ್, 99, ಟೋಪಿವಾಲಾ, ಬಚ್ಚನ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದು, ಇದಲ್ಲದೇ ಮಲೆಯಾಳಂ ಭಾಷೆಯಲ್ಲೂ ಭಾವನಾ ಹಲವು ಸಿನಿಮಾದಲ್ಲಿ ನಟಿಸಿ ಮಿಂಚಿದ್ದಾರೆ.


ಇದನ್ನೂ ಓದಿ : Sonakshi Sinha : ವಂಚನೆ ಪ್ರಕರಣ, ಸಂಕಷ್ಟಕ್ಕೆ ಸಿಲುಕಿದ ಸೋನಾಕ್ಷಿ ಸಿನ್ಹಾ
ಇದನ್ನೂ ಓದಿ : Divya Agarwal : ದಿವ್ಯ ಅಗರವಾಲ್ – ವರುಣ್ ಸೂದ್ 4 ವರ್ಷಗಳ ಪ್ರೀತಿಗೆ ಬ್ರೇಕ್‌ಅಪ್
(Actress Bhavana Menon breaks silence on sexual assault )