ಮುಂಬೈ : ಡ್ರಗ್ಸ್ ಪಾರ್ಟಿ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಮಾಡಿರುವ ಬಾಂಬೆ ಹೈಕೋರ್ಟ್ ಏಕ ಸದಸ್ಯ ಪೀಠ ಕೊನೆಗೂ ಆರ್ಯ ಅರ್ಜಿಯನ್ನು ಪುರಸ್ಕರಿಸಿದೆ. ಆರ್ಯನ್ ಖಾನ್ ಜೊತೆಗೆ ಬಂಧನಕ್ಕೆ ಒಳಗಾಗಿರುವ ಮುನ್ ಮುನ್ ಧರ್ಮೇಚಾ, ಅರ್ಬಾಜ್ ಮರ್ಚೆಂಟ್‌ಗೆ ಕೂಡ ಜಾಮೀನು ದೊರೆತಿದೆ.

ಸಮುದ್ರದ ಮಧ್ಯದಲ್ಲಿ ಗೋವಾಕ್ಕೆ ತೆರಳಿದ್ದ ಐಶಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯನ್ ಖಾನ್ ಭಾಗಿಯಾಗಿದ್ದರು. ಪಾರ್ಟಿಯ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳ ತಂಡ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಜಾಮೀನು ನೀಡದಂತೆ ಎನ್‌ಸಿಬಿ ಪರ ವಕೀಲರು ವಾದವನ್ನು ಮಂಡಿಸಿದ್ದರು. ಅದ್ರಲ್ಲೂ ಡ್ರಗ್ಸ್ ಸೇವನೆ ಮಾಡಿರುವುದನ್ನು ಆರ್ಯನ್ ಖಾನ್ ಜೊತೆಗಿದ್ದ ಅರ್ಬಾಜ್ ಖಾನ್ ಒಪ್ಪಿಕೊಂಡಿದ್ದ. ಅಲ್ಲದೇ ಅರ್ಯನ್ ಖಾನ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಕುರಿತು ದಾಖಲೆಯೂ. ತಾಂತ್ರಿಕ ದಾಖಲೆಯಲ್ಲಿ ಆರ್ಯನ್ ಖಾನ್ ವಾಣಿಜ್ಯ ಉದ್ದೇಶಕ್ಕೆ ಡ್ರಗ್ಸ್ ಇಟ್ಟು ಕೊಂಡಿದ್ದರು ಎಂದು ಎನ್‌ಸಿಬಿ ಪರ ವಕೀಲರಾದ ಎಎಸ್‌ಜಿ ಅನಿಲ್ ಸಿಂಗ್ ವಾದವನ್ನು ಮಂಡಿಸಿದ್ದರು.

ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಬಂಧನಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ. ಆದರೆ ಬಂಧನಕ್ಕೂ ಮುನ್ನ ಸೂಕ್ತ ಕಾರಣವನ್ನು ತಿಳಿಸಬೇಕಾಗಿತ್ತು. ಅದನ್ನು ತಿಳಿದು ಕೊಳ್ಳುವ ಹಕ್ಕು ಇದೆ ಎಂದು ಆರ್ಯನ್ ಖಾನ್ ಪರ ವಕೀಲ ಮುಕುಲ್ ರೋಹ್ಟಗಿ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು.

ವಾದ ವಿವಾದವನ್ನು ಆಲಿಸಿರುವ ಮುಂಬೈ ಹೈಕೋರ್ಟ್ ಆರ್ಯನ್ ಖಾನ್ ಸೇರಿದಂತೆ ಇತರ ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಆರ್ಯನ್ ಖಾನ್‌ಗೆ ಯಾವ ಕಾರಣಕ್ಕೆ ಜಾಮೀನು ನೀಡಲಾಗಿದೆ ಎನ್ನುವ ಕಾರಣವನ್ನು ನ್ಯಾಯಾಲಯ ಶುಕ್ರವಾರ ವಿವರಣೆಯನ್ನು ನೀಡಲಿದೆ.
ಇದನ್ನೂ ಓದಿ : ಆರ್ಯನ್ ಖಾನ್ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ : 18 ಕೋಟಿ ರೂ. ನಡೆದಿತ್ತಾ ಡೀಲ್
ಇದನ್ನೂ ಓದಿ : ಆರ್ಯನ್ ಖಾನ್ ಪ್ರಕರಣದ ಎನ್‌ಸಿಬಿ ಸಾಕ್ಷಿ ಕಿರಣ್ ಗೋಸಾವಿ ಆರೆಸ್ಟ್
(Aryan Khan Bail plea Bombay High court Granted bail to Shah rukh Khan Son Aryan Khan )