IT Raid : ಉಪ್ಪುಂದ ಮೂಲದ ಗುತ್ತಿಗೆದಾರ ಯು.ಬಿ. ಶೆಟ್ಟಿಗೆ ಐಟಿ ಶಾಕ್‌

ಕುಂದಾಪುರ / ಧಾರವಾಡ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಅತ್ಯಾಪ್ತರಾಗಿರುವ ಗುತ್ತಿಗೆದಾರ ಯು.ಬಿ. ಶೆಟ್ಟಿ ಅವರಿಗೆ ಐಟಿ ಅಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ. ಧಾರವಾಡ ಹಾಗೂ ಉಪ್ಪುಂದದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಧಾರವಾಡದ ದಾಸನಕೊಪ್ಪ ವೃತ್ತದಲ್ಲಿರುವ ಪ್ರತಿಷ್ಠಿತ ಗುತ್ತಿಗೆದಾರ ಯು.ಬಿ. ಶೆಟ್ಟಿ ಅವರ ಧಾರವಾಡದ ಮನೆಯ ಮೇಲೆ ಗೋವಾದ ಐಟಿ ಅಧಿಕಾರಿಗಳ ತಂಡ ದಾಳಿಯನ್ನು ನಡೆಸಿತ್ತು. ದಾಳಿಯ ವೇಳೆಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಉಪ್ಪುಂದ ಮೂಲದವರಾಗಿರುವ ಯು.ಬಿ. ಶೆಟ್ಟಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೇ ಐಟಿ ಅಧಿಕಾರಿಗಳು ಯುಬಿ ಶೆಟ್ಟಿ ಅವರಿಗೆ ಸೇರಿದ ಉಪ್ಪುಂದದ ಮನೆಯ ಮೇಲೆಯೂ ದಾಳಿಯನ್ನು ನಡೆಸಿದ್ದಾರೆ. ಉಪ್ಪುಂದದಲ್ಲಿ ಯುಬಿ ಶೆಟ್ಟಿ ಅವರು ಬಂಗಲೆಯನ್ನು ಹೊಂದಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಬೈಂದೂರು ತಾಲೂಕಿನಲ್ಲಿ ಎರಡು ಶಾಲೆಗಳನ್ನು ಖರೀದಿ ಮಾಡಿದ್ದರು. ಎಚ್ಎಂಎಂ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಖರೀದಿಸಿದ್ದರು. ಅಲ್ಲದೇ ಮತ್ತೊಂದು ಶಾಲೆಯಲ್ಲಿ ಅವರು ದತ್ತು ಪಡೆದಿದ್ದರು. ತಂದೆ, ತಾಯಿಯ ನಿಧನದ ನಂತರದಲ್ಲಿ ಪತ್ನಿ ಕೂಡ ಅಪಘಾತದಲ್ಲಿ ನಿಧನರಾಗಿದ್ದರು ಎಂದು ತಿಳಿದು ಬಂದಿದೆ.

ಧಾರವಾಡದಲ್ಲಿಯೇ ಗುತ್ತಿಗೆ ವ್ಯವಹಾರವನ್ನು ನಡೆಸುತ್ತಿದ್ದ ಯುಬಿ ಶೆಟ್ಟಿ ಅವರ ಸಹೋದರರು ಉಪ್ಪುಂದದ ಮನೆಯಲ್ಲಿ ವಾಸ್ತವ್ಯ ಹೂಡಿದಿದ್ದರು. ಇದೀಗ 9 ಮಂದಿ ಅಧಿಕಾರಿಗಳ ತಂಡದಿಂದ ದಾಳಿಯನ್ನು ನಡೆಸಿದ್ದು ದಾಖಲೆಗಳ ಪರಿಶೀಲನೆಯನ್ನು ನಡೆಸುತ್ತಿದೆ.

ಇದನ್ನೂ ಓದಿ : ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ವಕೀಲ ರಾಜೇಶ್‌ ಭಟ್‌ಗೆ ಸಹಕರಿಸಿದ್ದ ಸ್ನೇಹಿತ ಬಂಧನ

ಇದನ್ನೂ ಓದಿ : ಜೂಜಾಡಲು ತನ್ನ ಅಪಹರಣ ನಾಟಕ ; ಪತಿಯಿಂದ 5 ಲಕ್ಷ ಪಡೆದ ಕಿಲಾಡಿ ಮಹಿಳೆ

(It Raid on Contractor UB Shetty House Kundapur and Dharwad )

Comments are closed.