ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಶೋ ಬಡವ ರ್ಯಾಸ್ಕಲ್. ಅವಕಾಶಕ್ಕಾಗಿ ಸೈಕಲ್ ಹೊಡೆದು ಗೆದ್ದ ನಟ ಡಾಲಿ ಧನಂಜಯ್ ಈ ಸಿನಿಮಾದ ಮೂಲಕ ಸ್ಟಾರ್ ಪಟ್ಟಕ್ಕೇರಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಬಡವ ರಾಸ್ಕಲ್ (Badava Rascal ) ಸಖತ್ ಹವಾ ಕ್ರಿಯೇಟ್ ಮಾಡಿದೆ. ಇದರ ಬೆನ್ನಲ್ಲೇ ಈಗ ಡಾಲಿ ಧನಂಜಯ್ ಟಾಲಿವುಡ್ ನತ್ತ ತಮ್ಮ ವಿಜಯಯಾತ್ರೆ ಆರಂಭಿಸಿದ್ದಾರೆ. ಪುಷ್ಪ ಸಿನಿಮಾದಲ್ಲಿ ಡಾಲಿ ಧನಂಜಯ್ ವಿಲನ್ ರೋಲ್ ನಲ್ಲಿಕಾಣಿಸಿಕೊಂಡು ಮೋಡಿ ಮಾಡಿದ್ದರು.
ಇದಾದ ಬಳಿಕ ಡಾಲಿ ಬಡವ ರಾಸ್ಕಲ್ ಸಿನಿಮಾ ಕನ್ನಡದಲ್ಲಿ ಮೋಡಿ ಮಾಡಿದ್ದು ಸಖತ್ ರೆಸ್ಪಾನ್ಸ್ ಪಡೆದುಕೊಂಡಿತು. ಹೀಗಾಗಿ ಈ ಸಿನಿಮಾವನ್ನು ತೆಲುಗಿಗೆ ಡಬ್ಬಿಂಗ್ ಮಾಡುವಂತೆ ತೆಲುಗು ಚಿತ್ರರಂಗದಿಂದ ಬೇಡಿಕೆ ಬಂದಿತ್ತು. ಹೀಗಾಗಿ ಬಡವ ರಾಸ್ಕಲ್ ಈಗ ತೆಲುಗಿನಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಸದ್ಯ ಸಿನಿಮಾದ ಡಬ್ಬಿಂಗ್ ಕಾರ್ಯ ಆರಂಭಗೊಂಡಿದ್ದು, ಫೆಬ್ರವರಿ ವೇಳೆಗೆ ಸಿನಿಮಾ ತೆರೆಗೆ ಬರಲಿದೆ.
ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಡಾಲಿ ಧನಂಜಯ್ ಬಡವ ರ್ಯಾಸ್ಕಲ್ ಸಿನಿಮಾದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಸಿನಿಮಾದ ಕತೆ ಸಾಹಿತ್ಯ ಹಾಗೂ ನಿರೂಪಣೆಯಿಂದ ಪ್ರೇಕ್ಷಕರ ಮನಗೆದ್ದಿದ್ದು ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ. ಹೀಗಾಗಿ ಈ ಸಿನಿಮಾಕ್ಕೆ ತೆಲುಗು ಚಿತ್ರರಂಗದಿಂದ ಬೇಡಿಕೆ ಬಂದಿತ್ತು.
ಕೆಲ ದಿನಗಳ ಹಿಂದೆಯಷ್ಟೇ ಡಾಲಿ ಧನಂಜಯ್ ತೆಲುಗಿನ ಬಹುನೀರಿಕ್ಷಿತ ಸಿನಿಮಾ ಪುಷ್ಪದಲ್ಲಿ ಸಖತ್ ಮಿಂಚಿದ್ಧರು. ಡಾಲಿ ನಟನೆ ನೋಡಿ ತೆಲುಗು ಭಾಷಿಕರು ಮನಸೋತಿದ್ದರು. ಹೀಗಾಗಿ ಈಗಾಗಲೇ ಕನ್ನಡದಲ್ಲಿ ಗೆದ್ದ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಲಾಗುತ್ತಿದೆ. ಈಗಾಗಲೇ ಸಿನಿಮಾದ ತೆಲುಗು ಪೋಸ್ಟರ್ ಕೂಡ ರಿಲೀಸ್ ಆಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಡಾಲಿ ಧನಂಜಯ್ ಕೈತುಂಬ ಸಂಬಳ ಬರೋ ಕೆಲಸ ಬಿಟ್ಟು ನಟನೆಯ ಮೇಲೆ ಪ್ರೀತಿಯಿಂದ ಸಿನಿಮಾ ಇಂಡಸ್ಟ್ರಿ ಗೆ ಬಂದಿದ್ದರು.
. @daali_pictures Associates With @RizwanEntrepre1 To Execute @Dhananjayaka ’s #BadavaRascal In Telugu@amrutha_iyengar @dir_shankarguru @vasukivaibhav @dr_bhushana @PoornaMysore @Kushi_FME@aanandaaudio@ramvamsikrishna@TheSaiSatish@ParvathaneniRam pic.twitter.com/CzP2pInPQX
— Ramesh Bala (@rameshlaus) January 29, 2022
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದ ಪಾತ್ರದ ಮೂಲಕ ಸಾಕಷ್ಟು ಹೆಸರು ಗಳಿಸಿದ್ದರು. ಅದಾದ ಬಳಿಕ ಡಾಲಿ ಧನಂಜಯ್ ಗೆ ಬೇಡಿಕೆ ಹೆಚ್ಚಾಗಿತ್ತು. ಬಡವ ರಾಸ್ಕಲ್ ಬಳಿಕ ಹೆಡಬುಷ್ ಸಿನಿಮಾಗೂ ಡಾಲಿ ಸಿದ್ಧವಾಗಿದ್ದು ಈ ಚಿತ್ರವನ್ನು ಡಾಲಿ ಧನಂಜಯ್ ನಟಿಸಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮತ್ತೇರಿಸಿದ ಮಾಳವಿಕಾ : ಬೋಲ್ಡ್ ಬಿಕನಿ ವಿಡಿಯೋ ವೈರಲ್
ಇದನ್ನೂ ಓದಿ : ನೀನಾಸಂ ಸತೀಶ್ – ರಚಿತಾ ರಾಮ್ ಹೊಸ ದಾಖಲೆ : 100 ಮಿಲಿಯನ್ ವೀವ್ಸ್ ಪಡೆದ ಏನಮ್ಮಿ ಯಾಕಮ್ಮಿ ಹಾಡು
( Dolly Dhananjay acting movie Badava Rascal telugu poster Release)