Ravi D Channannavar : ಖಾಕಿ ಬಿಟ್ಟು ಖಾದಿ ತೊಡ್ತಾರಾ ಖಡಕ್ ಆಫೀಸರ್ : ಮತ್ತೆ ರವಿ ಚೆನ್ನಣ್ಣನವರ್ ಬಿಜೆಪಿ ಸೇರ್ಪಡೆ ಗಾಸಿಪ್

ಬೆಂಗಳೂರು : ರಾಜ್ಯದಲ್ಲಿ ಮುಂಬರುವ 2023 ರ ವಿಧಾನಸಭಾ ಚುನಾವಣೆ ಸಿದ್ಧತೆ ಜೋರಾಗಿದೆ. ಈಗಾಗಲೇ ರಾಜ್ಯದಲ್ಲಿ ಪಕ್ಷಾಂತರ, ಸ್ಥಾನಾಂತರ, ಕ್ಷೇತ್ರಾಂತರದ ಸಿದ್ಧತೆಗಳು ನಡೆದಿದ್ದು, ಜೆಡಿಎಸ್,ಕಾಂಗ್ರೆಸ್ ಬಿಜೆಪಿ ಅಧಿಕಾರದ ಗದ್ದುಗೆ ಏರುವ ನೀರಿಕ್ಷೆಯೊಂದಿಗೆ ರಣತಂತ್ರ ಹೂಡುತ್ತಿದ್ದಾರೆ. ಈ ಮಧ್ಯೆ ಖಡಕ್ ಐಪಿಎಸ್ ಖ್ಯಾತಿಯ ಅಣ್ಣಾಮಲೈ ಆರಂಭಿಸಿದ ಖಾಕಿ ತ್ಯಜಿಸಿ ಖಾದಿ ತೊಡುವ ಸಂಪ್ರದಾಯ ಮತ್ತೆ ಮುಂದುವರಿಯುವ ಲಕ್ಷಣ ದಟ್ಟವಾಗಿದ್ದು, ಸದ್ಯದಲ್ಲೇ ಕರ್ನಾಟಕದ ಸಿಂಗಂ ಖ್ಯಾತಿಯ ರವಿ.ಡಿ.ಚನ್ನಣ್ಣನವರ್ (Ravi D Channannavar) ಲಾಠಿ ಸೈಡ್ ಗಿಟ್ಟು ಕಮಲ ಹಿಡಿಯಲಿದ್ದಾರೆ.

ಈಗಾಗಲೇ ಹಲವು ಭಾರಿ ರವಿ ಚೆನ್ನಣ್ಣನವರ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದ ಸಂಗತಿ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಭಾರಿಯೂ ರವಿ ಚೆನ್ನಣ್ಣನವರ್ ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ ಸದ್ಯ ಏಕಾಏಕಿ ರವಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ವರ್ಗಾಯಿಸಲ್ಪಟ್ಟಿರೋದು ಮುಂದಿನ‌ ಬೆಳವಣಿಗಳ ಪೂರ್ವ ಸಿದ್ಧತೆ ಎಂದು ವಿಶ್ಲೇಷಿಸಲ್ಪಡುತ್ತಿದೆ. ಖಡಕ್ ಖಾಕಿಯಾಗಿದ್ದ ರವಿ ಚೆನ್ನಣ್ಣನವರನ್ನು ಸದ್ಯ ವಾಲ್ಮೀಕಿ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಹೀಗೆ ದಿಢೀರ್ ಪೊಲೀಸ್ ಇಲಾಖೆಯಿಂದ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ವರ್ಗಾವಣೆ ಮಾಡಿರೋದು ಬಿಜೆಪಿಯ ಮಾಸ್ಟರ್ ಪ್ಲ್ಯಾನ್. ರವಿ ಚೆನ್ನಣ್ಣನವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿ‌ವರ್ಗವಿದೆ. ಹೀಗಾಗಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಅವಕಾಶ ನೀಡಲಾಗಿದೆ. ಇದರಿಂದ ರವಿಯವರು ಇನ್ನಷ್ಟು ಜನರ ಸಂಪರ್ಕಕ್ಕೆ ಬರಲಿದ್ದು ಬಳಿಕ ಸೂಕ್ತ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ‌ಮಾಡಿ ರವಿಗೆ ಟಿಕೇಟ್ ನೀಡಲು ಬಿಜೆಪಿ ಸಿದ್ಧತೆ ಮಾಡಿದೆ ಎನ್ನಲಾಗುತ್ತಿದೆ.

ಹೀಗಾಗಿ ರವಿ.ಡಿ.ಚೆನ್ನಣ್ಣನವರ್ ರನ್ನು ಚುನಾವಣೆಗೆ ಸಿದ್ಧಪಡಿಸಲು ಪೂರ್ವಸಿದ್ಧತೆ ರೂಪದಲ್ಲಿ ಬಿಜೆಪಿ ಸರ್ಕಾರ ಅವರನ್ನು ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ವರ್ಗಾಯಿಸಿದೆ.
ಕಳೆದ ಕೆಲ‌ದಿನಗಳ ಹಿಂದೆಯಷ್ಟೇ ರವಿ ಚೆನ್ನಣ್ಣನವರ್ ರಾಜ್ಯದಾದ್ಯಂತ ಓಡಾಡಿ ಹಲವಾರು ಮಠಾಧೀಶರ ಭೇಟಿ ಮಾಡಿದ್ದರು. ಆ ವೇಳೆಯಲ್ಲಿಯೇ ರವಿಯವರು ರಾಜಕೀಯ ಪ್ರವೇಶಕ್ಕಾಗಿ ಚರ್ಚೆ ನಡೆಸಲು ಮಠಾಧೀಶರ ಭೇಟಿ‌ಮಾಡುತ್ತಿದ್ದಾರೆ ಎಂಬ ಊಹಾಪೋಹ ಹರಡಿತ್ತು. ಅದಕ್ಕೆ ಸ್ವತಃ ರವಿ .ಡಿ.ಚೆನ್ನಣ್ಣನವರ್ ಸ್ಪಷ್ಟನೆ ನೀಡಿದ್ದರು.

ಈಗ ಮತ್ತೊಮ್ಮೆ ವಿಧಾನಸೌಧದ ಪಡಶಾಲೆಯಲ್ಲೇ ರವಿ ಚೆನ್ನಣ್ಣನವರ್ ರಾಜಕೀಯ ಒ್ರವೇಶದ ಗುಸು ಗುಸು ಕೇಳಿ ಬರಲಾರಂಭಿಸಿದ್ದು 2023 ರ ಚುನಾವಣೆಯಲ್ಲಿ ರವಿ ಚೆನ್ನಣ್ಣನವರ್ ಖಾಕಿ ತೊಟ್ಟು ಲಾಠಿ ಹಿಡಿದು ಭದ್ರತೆ ನೋಡಿಕೊಳ್ತಾರಾ ಅಥವಾ ಖಾದಿ ತೊಟ್ಟು ಮತಯಾಚನೆ ಮಾಡ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

ಇದನ್ನೂ ಓದಿ : ಜೆಡಿಎಸ್ ಗೆ ಮತ್ತೊಂದು ಶಾಕ್ : ತೆನೆ ಇಳಿಸಿ ಕೈ ಹಿಡಿತಾರಾ ಸಿ.ಎಸ್.ಪುಟ್ಟರಾಜು

( IPS officer Ravi D Channannavar join BJP party)

Comments are closed.