ಚೆಲುವಿನ ಚಿತ್ತಾರದ ಮೂಲಕ ಕನ್ನಡಿಗರ ಮನೆಮಾತಾದ ನಟಿ ಅಮೂಲ್ಯ ( Amulya Baby Shower ) ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ನಟಿಯಾಗಿಯೂ ಮಿಂಚಿದವರು. ಸಾಲು ಸಾಲು ಸಿನಿಮಾದಲ್ಲಿ ನಟಿಸಿದ ಅಮೂಲ್ಯ ಸದ್ಯ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದಾರೆ. ಮಾತ್ರವಲ್ಲ ವೈವಾಹಿಕ ಬದುಕಿನ ಹೊಸ ಖುಷಿಯನ್ನು ಎದುರುಗೊಳ್ಳಲು ಕಾತುರರಾಗಿದ್ದು, ಅಮೂಲ್ಯ ಸೀಮಂತ ಗ್ರ್ಯಾಂಡ್ ಆಗಿನಡೆದಿದೆ.
ಹೌದು, ಶ್ರಾವಣಿ ಸುಬ್ರಹ್ಮಣ್ಯದಂತಹ ಸಿನಿಮಾದಲ್ಲಿ ಮುದ್ದು ಮುದ್ದಾಗಿ ಅಭಿನಯಿಸಿ ಮನಗೆದ್ದ ಅಮೂಲ್ಯ ಈಗ ಮುದ್ದಾದ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಅಮೂಲ್ಯ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಹೂವಿನಿಂದ ಅಲಂಕೃತ ಮಂಟಪದಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಮಲ್ಲಿಗೆ ಹೂವಿನಲ್ಲಿ ಸುಂದರವಾದ ಗಿಳಿಗಳನ್ನು ನಿರ್ಮಿಸಿ ಅದರ ಅಡಿಯಲ್ಲಿ ಮಂಟಪ ಮಾಡಲಾಗಿತ್ತು . ಈ ಮಂಟಪದಲ್ಲಿ ತೆಳುಕ್ರೀಂ ಬಣ್ಣದ ಸೀರೆ ಯಲ್ಲಿ ತುಂಬು ಬಸುರಿ ಅಮೂಲ್ಯ ಮುದ್ದಾಗಿ ಕಾಣಿಸಿದ್ದಾರೆ.
ಕೊರೋನಾ ಕಾರಣದಿಂದ ಅಮೂಲ್ಯ ನಿವಾಸದಲ್ಲಿ ಸರಳವಾಗಿ ಸಮಾರಂಭ ನಡೆದಿದ್ದು, ಕೇವಲ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಸೀಮಂತ ಕ್ಕೆ ಆಹ್ವಾನ ನೀಡಲಾಗಿತ್ತು . ಗೋಲ್ಟನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಅಮೂಲ್ಯ ಸೀಮಂತ ಶಾಸ್ತ್ರದಲ್ಲಿ ಪಾಲ್ಗೊಂಡು ಶುಭಹಾರೈಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಬಾಲನಟಿಯಾಗಿ ಕೆರಿಯರ್ ಆರಂಭಿಸಿದ ಅಮೂಲ್ಯ ನಿರ್ದೇಶಕ ಎಸ್.ನಾರಾಯಣ್ ಪುತ್ರನಿಗೆ ಜೋಡಿಯಾಗೋ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಅದರಿಂದಾಚೆಗೆ ಹಲವು ಚಿತ್ರದಲ್ಲಿ ನಟಿಸಿದ್ದ ಅಮೂಲ್ಯ, ಚೆಲುವಿನ ಚಿತ್ತಾರ ದಲ್ಲಿ ಐಶೂ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. 2017 ರಲ್ಲಿ ಉದ್ಯಮಿ ಹಾಗೂ ಮಾಜಿ ಬಿಬಿಎಂಪಿ ಕಾರ್ಪೋರೇಟರ್ ಪುತ್ರ ಜಗದೀಶ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಅಮೂಲ್ಯ ನಟನೆಯಿಂದ ಬ್ರೇಕ್ ಪಡೆದಿದ್ದರು
ಮದುವೆಯಾದ ಐದು ವರ್ಷದ ಬಳಿಕ ನಟಿ ಅಮೂಲ್ಯ ಸಿಹಿ ಸುದ್ದಿ ನೀಡಿದ್ದು, ಚೊಚ್ಚಲಮಗುವಿನ ನೀರಿಕ್ಷೆಯಲ್ಲಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಆಪ್ತ ಸ್ನೇಹಿತೆಯರ ಜೊತೆ ಅಮೂಲ್ಯ ಔಟಿಂಗ್ ಹೋಗಿದ್ದು ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಪೋಟೋಸ್ ಹಂಚಿಕೊಂಡಿದ್ದರು. ಇವರಿಬ್ಬರು ಬಾಲ್ಯದಿಂದಲೂ ಸ್ನೇಹಿತರು. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯ ಪತಿ ಜೊತೆ ಅದ್ದೂರಿ ಬೇಬಿ ಬಂಪ್ ಪೋಟೋಶೂಟ್ ಮಾಡಿಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಟೋಸ್ ಹಂಚಿಕೊಂಡಿದ್ದರು. ಈಗ ಅಮೂಲ್ಯ ಸೀಮಂತದ ಪೋಟೋಸ್ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : ಮಡಿದ ಮಗಳಿಗಾಗಿ ಮಿಡಿದ ಅಮೃತಾ ನಾಯ್ಡು: ಮತ್ತೆ ನನ್ನ ಹೊಟ್ಟೆಯಲ್ಲಿ ಸಮನ್ವಿಯೇ ಹುಟ್ಟಿ ಬರಲಿ ಎಂದ ನಟಿ
ಇದನ್ನೂ ಓದಿ : ಸೌಂದರ್ಯದ ಖಣಿ ಬ್ರಿಟಿಷ್ ಗಾಯಕಿ ಸೋಫಿ ಚೌದರಿ ಹಾಟ್ ಪೋಟೋಸ್ ವೈರಲ್
(Kannada Actress Amulya Baby Shower Photos)