Karnataka covid-19 : ಕರ್ನಾಟಕದಲ್ಲಿಂದು 47 ಸಾವಿರ ಕೋವಿಡ್‌-19 ಪ್ರಕರಣ : 2.93 ಲಕ್ಷ ಸಕ್ರೀಯ ಪ್ರಕರಣ ದಾಖಲು

ಬೆಂಗಳೂರು : ರಾಜ್ಯದಲ್ಲಿಂದು (Karnataka covid-19) ಕೊರೊನಾ ಮಹಾಸ್ಪೋಟ ಸಂಭವಿಸಿದೆ. ಇಂದು ಬರೋಬ್ಬರಿ 47,754 ಸೋಂಕಿತ ಪ್ರಕರಣ ದಾಖಲಾಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ2,93,231 ಲಕ್ಷಕ್ಕೆ ಏರಿಕೆಯಾಗಿದೆ. ಅದ್ರಲ್ಲೂ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿಯೇ 30,540 ಪ್ರಕರಣ ಪತ್ತೆಯಾಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿದಾಟಿದೆ.

ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ರಾಜ್ಯದಲ್ಲಿ ಒಟ್ಟು 2,58,290 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿದ್ದು, 47,754 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ರಾಜ್ಯದಲ್ಲಿಂದು 22,143 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ರೆ, 29 ಮಂದಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇನ್ಮುಂದೆ ಹತ್ತಿರದ ಮೆಡಿಕಲ್​ ಸ್ಟೋರ್​ನಲ್ಲಿಯೂ ಲಭ್ಯವಿರಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್​ ವಿರುದ್ಧ ಹೋರಾಡಲು ಕೋವಿಡ್​ ಲಸಿಕೆಗಳು ಪ್ರಮುಖ ಅಸ್ತ್ರವಾಗಿದೆ ಎಂಬ ಮಾತನ್ನು ನಾವು ತಳ್ಳಿ ಹಾಕುವಂತಿಲ್ಲ. ಕೋವಿಡ್​ ಮೊದಲ ಹಾಗೂ ಎರಡನೇ ಡೋಸ್​ಗಳನ್ನು ಹಾಕಿಸಲು ಕಷ್ಟಪಟ್ಟಂತೆ ಮುಂದಿನ ದಿನಗಳಲ್ಲಿ ಬೂಸ್ಟರ್​ ಡೋಸ್​ಗಳಿಗೆ ಕಷ್ಟ ಪಡುವ ಅಗತ್ಯವಿಲ್ಲ. ಏಕೆಂದರೆ ಕೇಂದ್ರ ಸರ್ಕಾರದ ಸಮಿತಿಯಾದ ಎಸ್​ಇಸಿಯು ಕೋವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್​ ಲಸಿಕೆಗಳನ್ನು ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಹೀಗಾಗಿ ಶೀಘ್ರದಲ್ಲಿಯೇ ನಿಮ್ಮ ಹತ್ತಿರದ ಮೆಡಿಕಲ್​ ಸ್ಟೋರ್​ಗಳಲ್ಲಿ ಕೋವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್​ ಲಸಿಕೆಗಳು ಲಭ್ಯವಿರಲಿವೆ.

ಬುಧವಾರ ಸಭೆ ನಡೆಸಿದ ಎಸ್​ಇಸಿಯು ತಜ್ಞರ ಜೊತೆಯಲ್ಲಿ ಚರ್ಚೆ ನಡೆಸಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹಲವು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಕೋವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್​ ಲಸಿಕೆಗಳೆರಡರ ಮೇಲೆಯೂ ಇರುವ ತುರ್ತು ಬಳಕೆಯನ್ನು ತೆಗೆದು ಹಾಕಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಎಸ್​​ಇಸಿಯ ಈ ನಿರ್ಧಾರದಿಂದಾಗಿ ಇನ್ಮುಂದೆ ಭಾರತ್​ ಬಯೋಟೆಕ್​ ಹಾಗೂ ಸೀರಂ ಇನ್​ಸ್ಟಿಟ್ಯೂಟ್​ ತಮ್ಮ ಲಸಿಕೆಗಳ ಉತ್ಪಾದನೆಯ ವೇಗಕ್ಕೆ ಚುರುಕು ಮುಟ್ಟಿಸಲೇಬೇಕುದೆ. ಆಗ ಮಾತ್ರ ಕೊರೊನಾ ಲಸಿಕೆಗಳನ್ನು ಪ್ರತಿಯೊಂದು ಆಸ್ಪತ್ರೆಗಳೂ ಹಾಗೂ ಮೆಡಿಕಲ್​ ಸ್ಟೋರ್ಸ್​ಗಳಿಗೆ ತಲುಪಿಸುವುದು ಸಾಧ್ಯವಾಗುತ್ತದೆ.

ಮಾರುಕಟ್ಟೆಗಳಲ್ಲಿ ಕೊರೊನಾ ಲಸಿಕೆಗಳು ಲಭ್ಯವಾದ ಬಳಿಕ ಕೋವಿನ್​ ಆ್ಯಪ್​ಗಳಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅಥವಾ ಲಸಿಕಾ ಕೇಂದ್ರಗಳಿಗೆ ತೆರಳಬೇಕು ಎಂಬುದೂ ಇರುವುದಿಲ್ಲ. ಕೇವಲ ಮೆಡಿಕಲ್​ಗೆ ತೆರಳಿ ಅಲ್ಲಿಂದ ಕೊರೊನಾ ಲಸಿಕೆಯನ್ನು ಪಡೆದು ಬಳಿಕ ವೈದ್ಯರು ಅಥವಾ ನರ್ಸ್​ಗಳ ಕೈನಿಂದ ಲಸಿಕೆ ಸ್ವೀಕರಿಸ ಬಹುದಾಗಿದೆ. ಇನ್ನು ಇದು ಮಾತ್ರವಲ್ಲದೇ ಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕೊರೊನಾ ಲಸಿಕೆಗಳಿಂದಾಗಿ ಉಂಟಾದ ಧನಾತ್ಮಕ ಹಾಗೂ ಋಣಾತ್ಮಕಗಳೆರಡೂ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ : ದೇಶದಲ್ಲಿ 3 ಲಕ್ಷ ಗಡಿದಾಟಿದ ದೈನಂದಿನ ಕೋವಿಡ್​ ಪ್ರಕರಣ

ಇದನ್ನೂ ಓದಿ : ಕೋವಿಡ್​ ಮಾರ್ಗಸೂಚಿ ವಿಚಾರದಲ್ಲಿ ಅಡಕತ್ತರಿಗೆ ಸಿಲುಕಿದ ರಾಜ್ಯ ಸರ್ಕಾರ

(Karnataka covid-19 live updates, today record 47,754 cases)

Comments are closed.