ಭಾನುವಾರ, ಏಪ್ರಿಲ್ 27, 2025
HomeCinemaಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಜ್ಜಾದ ಫ್ಯಾನ್ಸ್ : ನಾಲ್ಕು ದಿನಗಳ ಕಾಲ ನಡೆಯಲಿದೆ ಪುನೀತ್‌ ರಾಜ್‌...

ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಜ್ಜಾದ ಫ್ಯಾನ್ಸ್ : ನಾಲ್ಕು ದಿನಗಳ ಕಾಲ ನಡೆಯಲಿದೆ ಪುನೀತ್‌ ರಾಜ್‌ ಕುಮಾರ್ ಬರ್ತಡೇ

- Advertisement -

ಪ್ರತಿ ವರ್ಷ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಮಾರ್ಚ್ 17 ದೀಪಾವಳಿ ಹಬ್ಬಕ್ಕಿಂತ ದೊಡ್ಡ ದಿನ.‌ಕಾರಣ ಅಂದು ಪುನೀತ್ ರಾಜ್ ಕುಮಾರ್ (Puneeth Raj Kumar Birthday) ಹುಟ್ಟುಹಬ್ಬ. ಆದರೆ ಈ ಭಾರಿ ವಿಧಿಯಾಟದಿಂದ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸುವ ಸ್ಥಿತಿಯಲ್ಲಿದ್ದಾರೆ. ಆದರೇ ಇದೇ ದಿನ ತೆರೆಗೆ ಬರಲಿರುವ ಪುನೀತ್ ಅಭಿನಯದ ಕೊನೆ ಚಿತ್ರ ಜೇಮ್ಸ್ ಅಭಿಮಾನಿಗಳ ದುಃಖಕ್ಕೆ ಕೊಂಚ ಸಾಂತ್ವನ‌ ನೀಡಲಿದೆ.

ಈ ಮಧ್ಯೆ ಪುನೀತ್ ಇಲ್ಲದಿದ್ದರೂ ಅವರ ಹುಟ್ಟುಹಬ್ಬವನ್ನು ಉತ್ಸವದಂತೆ ಆಚರಿಸಲು ಪುನೀತ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಪುನೀತ್ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬ ವನ್ನು ಸಾಮಾಜಿಕ ಕಾರ್ಯಗಳ ಜೊತೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಲ ಅಪ್ಪು ಇಲ್ಲದ ಹುಟ್ಟು ಹಬ್ಬವನ್ನು ನಾಲ್ಕು ದಿನ ಆಚರಿಸಲು ಸಿದ್ದತೆ ನಡೆಯುತ್ತಿದೆ. ಮಾರ್ಚ್ 17 ಕ್ಕೆ ವೀರೇಶ ಚಿತ್ರಮಂದಿರದ ಬಳಿ ಅಪ್ಪು ಅಭಿನಯದ 30 ಸಿನಿಮಾಗಳ ಪ್ರಮುಖ ಪಾತ್ರದ ಕಟೌಟ್ ತಲೆ ಎತ್ತಲಿದೆ. ಅಲ್ಲದೆ ಅದೇ ದಿನ ಹೆಲಿಕಾಪ್ಟರ್ ಮೂಲಕ ಅಪ್ಪು ಕಟೌಟ್ ಗಳಿಗೆ ಪುಷ್ಪಾರ್ಚನೆ ನಡೆಯಲಿದೆ.

ಇದರ ಜೊತೆ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಮತ್ತು ವೃದ್ದರು, ಮಕ್ಕಳಿಗೆ ಉಚಿತವಾಗಿ ಬಟ್ಟೆ ವಿತರಣೆ ಮಾಡಲು ಅಪ್ಪು ಫ್ಯಾನ್ಸ್ ಸಿದ್ದರಾಗಿದ್ದಾರೆ. ಜೊತೆಗೆ ಮಾರ್ಚ್ 18ರಂದು ವಿರೇಶ ಚಿತ್ರಮಂದಿರದ ಬಳಿ ಬೆಳಗ್ಗೆ ಸಿಹಿ ವಿತರಣೆ. ಮತ್ತು ಮಧ್ಯಾನ ಅನ್ನದಾನ ಮಾಡಿ ರಾತ್ರಿ ದೀಪೋತ್ಸವ ನಡೆಸಲಿದ್ದಾರೆ. ಅಲ್ಲದೇ,   ಶನಿವಾರ ಮತ್ತು ಭಾನುವಾರವು ಅಪ್ಪು ಹುಟ್ಟಿದ ಹಬ್ಬವನ್ನು ಆಚರಿಸಲು ಅಭಿಮಾನಿ ಗಳು ನಿರ್ಧರಿಸಿದ್ದು, ಶನಿವಾರ ವಿರೇಶ ಚಿತ್ರಮಂದಿರದ ಬಳಿ ಬೆಳಗ್ಗೆ ಸಿಹಿ ಹಂಚಿ, ಮಧ್ಯಾನ ಅನ್ನದಾನ, ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ರಕ್ತದಾನ‌ ಶಿಬಿರ ಅಯೋಜನೆ ಮಾಡಿದ್ದಾರೆ..ಭಾನುವಾರ ಮಧ್ಯಾನ ಕಮಲಾನಗರ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಚಿಕನ್ ಬಿರ್ಯಾನಿ ಹಂಚಲಿದ್ದಾರೆ.

ಅಲ್ಲದೇ ರವಿವಾರ ಸಾಯಂಕಾಲ 4:30 ಕ್ಕೆ ಭಾರಿ ಹೂವಿನ ಪಲ್ಲಕ್ಕಿಗಳ ಮೂಲಕ ಅಣ್ಣಾವ್ರು ಹಾಗೂ ಅಪ್ಪು ಭಾವಚಿತ್ರವನ್ನು ಅದ್ದೂರಿಯಾಗಿ ಡೊಳ್ಳು ಕುಣಿತದ ಜೊತೆಗೆ ರಾಜಾಜಿನಗರದಿಂದ ಮಾಗಡಿ ರಸ್ತೆಯ ವಿರೇಶ್ ಚಿತ್ರಮಂದಿರದ ವರೆಗೂ ಮೆರವಣಿಗೆ ಮಾಡಿ.ರಾತ್ರಿ ವಿರೇಶ್ ಚಿತ್ರಮಂದಿರದ ನೃತ್ಯ ಕಾರ್ಯ ಕ್ರಮ ಹಮ್ಮಿಕೊಂಡಿದ್ದಾರೆ. ಒಟ್ಟಿನಲ್ಲಿ ಅಪ್ಪು ಇಲ್ಲದ ದುಃಖದಲ್ಲೂ ಪವರ್ ಸ್ಟಾರ್ ಹುಟ್ಟುಹಬ್ಬವನ್ನು ಸಂಭ್ರಮದ ಜೊತೆಗೆ, ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲು ಅಭಿಮಾನಿಗಳು ಸಿದ್ದರಾಗಿದ್ದಾರೆ. ಈ ಕಾರ್ಯಗಳ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಕೋರಲು ಅಭಿಮಾನಿಗಳು ಪ್ರಯತ್ನಿಸುತ್ತಿದ್ದು, ಕರುನಾಡಿನ ಮನೆಮಗನ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ.

ಇದನ್ನೂ ಓದಿ :‌ ಪುನೀತ್‌ ರಾಜ್‌ ಕುಮಾರ್ ಪುಣ್ಯಸ್ಮರಣೆ : ಅಭಿಮಾನಿಗಳಿಗೆ ಊಟ ಬಡಿಸಿದ ದೊಡ್ಮನೆ ಕುಟುಂಬ

ಇದನ್ನೂ ಓದಿ : ಕುಡಿದು ಅಪಘಾತ ನಡೆಸಿ, ಪೊಲೀಸರಿಗೆ ಹಲ್ಲೆ : ಜೈಲು ಸೇರಿದ ಖ್ಯಾತ ನಟಿ ಕಾವ್ಯ ಥಾಪರ್‌

(Power star Puneeth Raj Kumar Birthday this year celebration 4 days)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular