ಸೋಮವಾರ, ಏಪ್ರಿಲ್ 28, 2025
HomeCinemaRocking Star Yash Teaching : ರಾಕಿಂಗ್ ಸ್ಟಾರ್ ಯಶ್ ಕನ್ನಡ ಪಾಠ : ರಾಧಿಕಾ...

Rocking Star Yash Teaching : ರಾಕಿಂಗ್ ಸ್ಟಾರ್ ಯಶ್ ಕನ್ನಡ ಪಾಠ : ರಾಧಿಕಾ ಪಂಡಿತ್ ಹಂಚಿಕೊಂಡ್ರು ಸ್ಪೇಶಲ್ ವಿಡಿಯೋ

- Advertisement -

ಸ್ಯಾಂಡಲ್ ವುಡ್ ಗಡಿ ದಾಟಿ ದೇಶದ ಸಿನಿ ಇತಿಹಾಸದಲ್ಲೇ ಕುತೂಹಲ ಮೂಡಿಸಿರುವ ಚಿತ್ರ ಕೆಜಿಎಫ್ 2 . ಈಗಾಗಲೇ ಶೂಟಿಂಗ್ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಸಿ ರಿಲೀಸ್ ಗೆ ಸಿದ್ಧವಾಗಿರೋ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ರಾಕಿಂಗ್ ಸ್ಟಾರ್ ಈ ಸಿನಿಮಾದ ಪ್ರಮೋಶನ್ ವರ್ಕ್ ನಡುವೆಯೂ ಫ್ಯಾಮಿಲಿ ಗೆ ಟೈಂ ಕೊಡ್ತಿದ್ದು, ಮಗಳ ಜೊತೆ ತುಂಟಾಟವಾಡ್ತಿರೋ (Rocking Star Yash Teaching) ಹೊಸ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಮಗಳು ಆಯ್ರಾ ಜೊತೆ ಯಶ್ ಮಾಡಿರೋ ಈ ವಿಡಿಯೋ ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಯಾಂಡಲ್ ವುಡ್ ಸ್ಟಾರ್ ಕಪಲ್ಸ್ ರಾಧಿಕಾ ಹಾಗೂ ಯಶ್ ಇಬ್ಬರು ಮುದ್ದಾದ ಮಕ್ಕಳ ಪೋಷಕರು. ಮಕ್ಕಳ ತುಂಟಾಟವನ್ನು ಸದಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳು ತ್ತಲೇ ಇರುತ್ತಾರೆ ಯಶ್ ಮತ್ತು ರಾಧಿಕಾ. ಇದೇ ಕಾರಣಕ್ಕೆ ಯಶ್ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜ್ಯೂನಿಯರ್ ಸೆಲೆಬ್ರೇಟಿಗಳೇ ಆಗಿದ್ದಾರೆ. ರಾಧಿಕಾ ಹಾಗೂ ಯಶ್ ಶೇರ್ ಮಾಡೋ ಈ ಪುಟಾಣಿಗಳ ಒಂದೊಂದು ವಿಡಿಯೋಗೂ ಲಕ್ಷಾಂತರ ಲೈಕ್ಸ್ ಬರುತ್ತದೆ. ಹೀಗಿರುವಾಗಲೇ ಶನಿವಾರ ನಟಿ ರಾಧಿಕಾ ಪಂಡಿತ್ ಸೋಷಿಯಲ್‌ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಅದರಲ್ಲಿ ಯಶ್ ತಮ್ಮ‌ಮಗಳು ಆಯ್ರಾಳನ್ನು ಕಾಲ‌ಮೇಲೆ ಕೂರಿಸಿಕೊಂಡು ಅಆ,ಇಈ,ಉಊ ಎಂದು ಕನ್ನಡ ವರ್ಣಮಾಲೆ ಪಾಠ ಹೇಳಿಕೊಟ್ಟಿದ್ದಾರೆ. ಅಪ್ಪ ಹೇಳಿಕೊಟ್ಟ ಪಾಠವನ್ನು ಅಷ್ಟೇ ಆಸಕ್ತಿಯಿಂದ ಕಲಿಯುತ್ತಿರುವ ಆಯ್ರಾ ಸ್ಪಷ್ಟವಾಗಿ ಅಆಇಈ ಉಚ್ಛರಿಸಿದ್ದಾಳೆ. ತಾಯಿ ರಾಧಿಕಾ ಪಂಡಿತ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

ಯಶ್ ಹಾಗೂ ರಾಧಿಕಾ ಹಂಚಿಕೊಂಡ ಈ ವಿಡಿಯೋಗೆ ಲಕ್ಷಾಂತರ ಲೈಕ್ಸ್ ಹರಿದುಬಂದಿದ್ದು, ಸಾವಿರಾರು ಜನರು ವಿಡಿಯೋ ಶೇರ್ ಮಾಡಿದ್ದಾರೆ. ಹಲವರು ಯಶ್ ಹಾಗೂ ರಾಧಿಕಾ ತಮ್ಮ ಮಗುವಿಗೆ ಚಿಕ್ಕ ವಯಸ್ಸಿನಲ್ಲಿ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸುತ್ತಿರುವುದಕ್ಕೆ ಹಾಗೂ ಕನ್ನಡ ಕಲಿಸುತ್ತಿರುವುದಕ್ಕೆ ಅಭಿನಂದಿಸಿದ್ದಾರೆ. ಈ ಹಿಂದೆ ರಾಧಿಕಾ ತಮ್ಮ ಮಗಳು ಹಾಗೂ ಮಗ ಕೊಂಕಣಿಯಲ್ಲಿ ಮಾತನಾಡುವ ವಿಡಿಯೋ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದರು. ಮಕ್ಕಳಿಗೆ ಮೊದಲು ನೀವು ಅನ್ನ ದುಡಿಯುವ ಕನ್ನಡ ಭಾಷೆಯನ್ನು ಕಲಿಸಿ ಎಂದು ಜನರು ಕಮೆಂಟ್ ಮಾಡಿದ್ದರು.

ಈ ಕಮೆಂಟ್ ಗೆ ತಕ್ಕ ಉತ್ತರ ನೀಡಿದ್ದ ರಾಧಿಕಾ, ನನ್ನ ಮಕ್ಕಳಿಗೆ ಮೂರು ಭಾಷೆ ಕಲಿಸುತ್ತೇನೆ.‌ಕೊಂಕಣಿ ನನ್ನ ತಾಯಿ ಭಾಷೆ. ಕನ್ನಡ ನನ್ನ ಉಸಿರು ಅಂತೆಯೇ ನನ್ನ ಮಕ್ಕಳು ಇಂಗ್ಲೀಷ್ ನ್ನು ಕಲಿಯುತ್ತಾರೆ ಎಂದು ಸಮಜಾಯಿಷಿ ನೀಡಿದ್ದರು. ರಾಧಿಕಾ ಹೇಳಿದ ಮಾತಿನಂತೆ ಈಗ ಮುದ್ದು ಮಗು ಆಯ್ರಾ ಕನ್ನಡ ವರ್ಣಮಾಲೆ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾಳೆ.

ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ಕೊನೆ ಸಿನಿಮಾದಲ್ಲಿ ಅಣ್ಣಾವ್ರ ಮಕ್ಕಳು

ಇದನ್ನೂ ಓದಿ : ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

(Rocking Star Yash Teaching Kannada Alphabets for his daughter Aira, Radhika Pandit Share Special Video)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular