ಕನ್ನಡಿಗರ ಮನೆಮಗ, ಪವರ್ ಸ್ಟಾರ್, ಎಲ್ಲದಕ್ಕಿಂತ ಮುಖ್ಯವಾಗಿ ಅಳಿದ ಮೇಲೂ ಕನ್ನಡಿಗರ ಮನೆಮನದಲ್ಲಿ ಸದಾ ನೆನಪಾಗಿ ಉಳಿದ ಪುನೀತ್ ರಾಜ್ ಕುಮಾರ್ (Puneeth Rajkumar) ನಮ್ಮನ್ನೆಲ್ಲ ಅಗಲಿ 10 ತಿಂಗಳು ಕಳೆದಿದೆ. ಆದರೆ ಈ 10 ತಿಂಗಳಿನಲ್ಲೂ ಪುನೀತ್ ಅಭಿಮಾನಿಗಳ ನೊರೆಂಟು ಒಳ್ಳೆಯ ಕಾರ್ಯಗಳಿಂದ ಪ್ರತಿನಿತ್ಯ ಜೀವಂತವಾಗಿದ್ದಾರೆ ಎನ್ನಿಸುವಂತೆ ಮಾಡಿದ್ದಾರೆ ಅಭಿಮಾನಿಗಳು. ಇನ್ನೂ ಪುನೀತ್ ಸ್ವತಃ ಪಾಲಿಸಿದ ನೇತ್ರದಾನ (Eye donation) ,ರಕ್ತದಾನದಲ್ಲೂ ಪುನೀತ್ ಅಭಿಮಾನಿಗಳು ಅಪರೂಪದ ಸಾಧನೆ ಮಾಡಿದ್ದು ವಿವರ ಇಲ್ಲಿದೆ.
ಹೌದು ಪುನೀತ್ ರಾಜಕುಮಾರ್ ಅಗಲಿಕೆಯ ನಡುವೆಯೂ ಅಮರರಾಗಿದ್ದಾರೆ. ತಮ್ಮ ನೆಚ್ಚಿನ ನಟನ ಅಗಲಿಕೆಯನ್ನು ಅವರ ಅಭಿಮಾನಿಗಳು ಅತ್ಯಂತ ನೋವಿನಲ್ಲೂ ಸಮಾಜಕ್ಕೆ ನೆರವಾಗುವ ರೀತಿಯಲ್ಲಿ ಅರ್ಥಪೂರ್ಣ ಆಚರಣೆಗಳ ಮೂಲಕ ಮರೆಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡಿದ್ದರು. ತಂದೆಯ ಆದರ್ಶವನ್ನು ಪುನೀತ್ ಪಾಲಿಸಿದ್ದರು. ಈಗ ಅಭಿಮಾನಿಗಳು ಪುನೀತ್ ಆದರ್ಶವನ್ನು ಪಾಲಿಸುತ್ತಿದ್ದು, ಸಾವಿರಾರು ಪುನೀತ್ ಅಭಿಮಾನಿಗಳು ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಅಪ್ಪು ಹೆಸರಲ್ಲಿ ನಾರಾಯಣ ನೇತ್ರಾಲಯ ಹಾಗೂ ಲಯನ್ಸ್ ಬ್ಲಡ್ ಕ್ಲಬ್ ನಿಂದ ನಡೆಯುತ್ತಿರೋ ಶಿಬಿರಗಳಲ್ಲಿ ಸಾಕಷ್ಟು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
Puneeth Rajkumar Eye donation: ನೇತ್ರದಾನಕ್ಕೆ 1,24,500 ಮಂದಿಯಿಂದ ನೋಂದಣಿ
ಪುನೀತ್ ನಿಧನದ ಬಳಿಕ ಪುನೀತ್ ಪುಣ್ಯ ಸ್ಮರಣೆಯಿಂದ ಪ್ರಾರಂಭವಾದ ನೇತ್ರದಾನ ರಿಜಿಸ್ಟ್ರೇಷನ್ ಇದುವರೆಗೂ ನೀರಿಕ್ಷೆಗೂ ಮೀರಿ ರೆಸ್ಪಾನ್ಸ್ ಸಿಕ್ಕಿದೆ. ಬರೋಬ್ಬರಿ 1,24,500 ಮಂದಿಗೂ ಹೆಚ್ಚು ನೇತ್ರದಾನಕ್ಕೆ ರಜಿಸ್ಟ್ರೇಶನ್ ಮಾಡಿಕೊಂಡಿದ್ದು, ಕರ್ನಾಟಕದ ಎಲ್ಲ ಭಾಗದಿಂದ ನಾರಾಯಣ ನೇತ್ರಾಲಯಕ್ಕೆ ನೋಂದಣಿ ಕರೆ ಬರುತ್ತಿದೆ. ಇದಕ್ಕಾಗಿಯೇ ಅಪ್ಪು ಹೆಸರಲ್ಲಿ ನೇತ್ರದಾನ ನೋಂದಾಯಿಸಿಕೊಳ್ಳಲು ಸಹಾಯವಾಣಿ ಸಹ ಪ್ರಾರಂಭಿಸಲಾಗಿದ್ದು,8884018800 ನಂಬರ್ ಗೆ ಮಿಸ್ ಕಾಲ್ ಕೊಟ್ರೆ ರಿಜಿಸ್ಟ್ರೇಷನ್ ನಂಬರ್ ಕನ್ಪರ್ಮ್ ಮೆಸೇಜ್ ಬರಲಿದೆ. ಬಳಿಕ ನೇತ್ರದಾನದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಹಾಗೂ ಕ್ರಮಗಳ ವಿವರವನ್ನು ನೀವು ಪಡೆಯಬಹುದು.
ಇನ್ನು ಕೇವಲ ನೇತ್ರದಾನ ಮಾತ್ರವಲ್ಲ ರಕ್ತದಾನ ಮಾಡುವಲ್ಲಿಯೂ ಅಭಿಮಾನಿಗಳು ಮೇಲುಗೈ ಸಾಧಿಸಿದ್ದು, ಇದುವರೆಗೂ ಬರೋಬ್ಬರಿ 6500 ಮಂದಿಗೂ ಹೆಚ್ಚು ರಕ್ತದಾನಕ್ಕೆ ಮುಂದಾಗಿದ್ದು, ಕಿದ್ವಾಯಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಬ್ಲಡ್ ಡೊನೆಟ್ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ರಾಜ್ಯದ ಹಲವೆಡೆ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರಿಂದ ಅಗತ್ಯ ರೋಗಿಗಳಿಗೆ ರಕ್ತವೂ ಸಕಾಲಕ್ಕೆ ಸಿಕ್ಕಂತಾಗುತ್ತಿದೆ. ಕೊರೋನಾ ಬಳಿಕ ಜನರು ನೇತ್ರದಾನ, ರಕ್ತದಾನ ಗಳನ್ನು ಬಹುತೇಕ ಮರೆತೇ ಬಿಟ್ಟಿದ್ದರು. ಆದರೆ ಪುನೀತ್ ನಿಧನದ ಬಳಿಕ ಪುನೀತ್ ಮೇಲಿನ ಅಭಿಮಾನದಿಂದ ಅಭಿಮಾನಿಗಳು ಸಾವಿರಾರು ರೋಗಿಗಳ ಬದುಕಿಗೆ ಬೆಳಕಾಗುತ್ತಿದ್ದಾರೆ.
ಇದನ್ನೂ ಓದಿ : Sushant Rajput : ನಟ ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ನೀಡಿದ್ದೇ ರಿಯಾ ಚಕ್ರವರ್ತಿ : ಎನ್ಸಿಬಿ ಸ್ಫೋಟಕ ಮಾಹಿತಿ
ಇದನ್ನೂ ಓದಿ : Pooja Hegde : ಬಿಕಿನಿ ಲುಕ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಪೂಜಾ ಹೆಗ್ಡೆ
Eye donation in memory of Puneeth Rajkumar, pledge from more than 1 lakh people