( Fact check ) ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿಯೇ ಕೋವಿಡ್ 19ನ ಹೊಸ ರೂಪಾಂತರಿ ಓಮಿಕ್ರಾನ್ (The Omicron Variant)ಕಾಣಿಸಿಕೊಂಡಿದೆ. ಸಂಭವನೀಯ ಕೋವಿಡ್ ಮೂರನೆ ಅಲೆಯು ಈ ರೂಪಾಂತರಿಯಿಂದಲೇ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಸರ್ಕಾರ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳು ಹಾಗೂ ಮೂರನೆ ಅಲೆಯನ್ನು ನಿರ್ವಹಿಸಲು ಸಕಲ ತಯಾರಿಯನ್ನು ಕೈಗೊಳ್ಳುತ್ತಿದೆ. ಈ ಎಲ್ಲದರ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಓಮಿಕ್ರಾನ್ ರೂಪಾಂತರಿ ( The Omicron Variant )ಎಂಬ ಹೆಸರಿನ ಸಿನಿಮಾದ ಪೋಸ್ಟರ್ ( Viral poster ) ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕೊರೊನಾದ ಈ ರೂಪಾಂತರಿ ಜನ್ಮ ತಾಳುವುದಕ್ಕೂ ಮುನ್ನವೇ ಈ ಹೆಸರಿನ ಸಿನಿಮಾವೊಂದು ತೆರೆ ಕಂಡಿತ್ತು ಎಂದು ನೆಟ್ಟಿಗರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.
ಈ ಸಿನಿಮಾದ ಪೋಸ್ಟರ್ ನೋಡಿದ ತಕ್ಷಣವೇ ಇದೊಂದು ಹಾರರ್ ಮೂವಿ ಇರಬಹುದು ಎಂದು ಅಂದಾಜಿಸುವಂತಿದೆ. ಪೋಸ್ಟರ್ನಲ್ಲಿ ಯುವಕ ಹಾಗೂ ಯುವತಿ ಆಕಾಶದಲ್ಲಿರುವ ನಕ್ಷತ್ರವನ್ನು ನೋಡುತ್ತಿದ್ದರೆ ಹಿಂದೆ ಬ್ಯಾಕ್ಗ್ರೌಂಡ್ನಲ್ಲಿ ರಕ್ತ ಸಿಕ್ತವಾದ ಕೈಯೊಂದನ್ನು ಕಾಣಬಹುದಾಗಿದೆ.
Hi. It’s been brought to my attention that one of my posters is circulating on Spanish language Twitter as “proof” of a COVID hoax. It’s just a goof because I thought Omicron Variant sounded like a 70s sci-fi movie. Please do not get sick on account of my dumb joke. Thanks https://t.co/iecwEEOVBq
— Becky Cheatle (@BeckyCheatle) December 1, 2021
ಇಡೀ ಭೂಮಿಯೇ ಸ್ಮಶಾನವಾಗಿ ಪರಿವರ್ತನೆಯಾದ ದಿನ ಎಂದು ಈ ಸಿನಿಮಾದ ಪೋಸ್ಟರ್ನಲ್ಲಿ ಟ್ಯಾಗ್ಲೈನ್ ಕೂಡ ಇರೋದನ್ನು ನೀವು ಕಾಣಬಹುದಾಗಿದೆ.
ಈ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಬಹಳ ಹಿಂದೆಯೇ ಈ ಸಾಂಕ್ರಾಮಿಕದ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ಅಭಿಪ್ರಾಯ ಹೊರಹಾಕಲು ಆರಂಭಿಸಿದ್ದಾರೆ.
ಅಂದಹಾಗೆ ಈ ಪೋಸ್ಟರ್ನ್ನು ಈ ರೀತಿ ಎಡಿಟರ್ ಮಾಡಿದ್ದು ಐರಿಷ್ ನಿರ್ದೇಶಕಿ ಬೆಕ್ಕಿ ಚೀಟಲ್. 1974ರಲ್ಲಿ ತೆರೆಕಂಡ ಸ್ಪ್ಯಾನಿಶ್ ಭಾಷೆಯ ಸುಸೆಸೋಸ್ ಎನ್ ಲಾ ಕ್ವೇರ್ತಾ ಫಾಸೆ ಎಂಬ ಹೆಸರಿನ ಸಿನಿಮಾ ಪೋಸ್ಟರ್ನ್ನು ಬಳಸಿ ಈ ರೀತಿ ಒಮಿಕ್ರಾನ್ ರೂಪಾಂತರಿ ಎಂಬ ನಕಲಿ ಪೋಸ್ಟರ್ ಹರಿಬಿಟ್ಟಿದ್ದಾರೆ. ಈ ಮೂಲಕ ಓಮಿಕ್ರಾನ್ ಹೆಸರಿನ ಸಿನಿಮಾ ತೆರೆಕಂಡಿತ್ತೇ ಎಂಬ ವಂದತಿಗೆ ತೆರೆ ಎಳೆದಂತಾಗಿದೆ.
ಇದನ್ನು ಓದಿ :GOAT : ಇದು ಕೋತಿಚೇಷ್ಟೆಯಲ್ಲ ಮೇಕೆಚೇಷ್ಟೆ..! ಉದ್ಯೋಗಿಯೊಬ್ಬನ ಆಫೀಸ್ ಫೈಲು ಹಿಡಿದು ಅಡ್ಡಾಡಿಸಿದ ಮೇಕೆ
Fact check: Is there a movie called ‘The Omicron Variant’? Viral poster is fake