ಭಾನುವಾರ, ಏಪ್ರಿಲ್ 27, 2025
HomeCinemaVijayakanth Passed Away : ಖ್ಯಾತ ನಟ ವಿಜಯಕಾಂತ್ ಕೋವಿಡ್‌ ಸೋಂಕಿಗೆ ಬಲಿ

Vijayakanth Passed Away : ಖ್ಯಾತ ನಟ ವಿಜಯಕಾಂತ್ ಕೋವಿಡ್‌ ಸೋಂಕಿಗೆ ಬಲಿ

- Advertisement -

Tamil Actor Vijayakanth Passed Away : ಚೆನ್ನೈ : ಕೋವಿಡ್‌ ವೈರಸ್‌ ಸೋಂಕು ಮತ್ತೆ ಆರ್ಭಟಿಸುತ್ತಿದೆ. ಇದೀಗ ತಮಿಳುನಾಡಿನ ಡಿಎಂಡಿಕೆ ಪಕ್ಷದ ಮುಖ್ಯಸ್ಥ, ಖ್ಯಾತ ನಟ ವಿಜಯಕಾಂತ್‌ ಇದೀಗ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮಂಗಳವಾರ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು, ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ -19 ಪಾಸಿಟಿವ್‌ ಇರುವುದು ದೃಢಪಟ್ಟಿತ್ತು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Famous Tamil Actor Vijayakanth Passed Away DMDK Founder In Chennai Kannada News
Image Credit to Original Source

ನಟ ಮತ್ತು ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಗುರುವಾರ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ. ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಅವರು, ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸಹಾಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ವಿಜಯಕಾಂತ್‌ ಅವರಿಗೆ ನ್ಯೂಮೋನಿಯಾ ಸಮಸ್ಯೆ ಉಂಟಾಗಿತ್ತು. ನಂತರದಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿತ್ತು. ಆರಂಭಿಕ ಚಿಕಿತ್ಸೆಯ ಬಳಿಕ ಅವರು ಗುಣಮುಖರಾಗುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ದಿನೇ ದಿನೇ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಈ ಹಿಂದೆ ಡಿಎಂಡಿಕೆ ವಿಜಯಕಾಂತ್‌ ಅವರು ನವೆಂಬರ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಹ್ಯಾಪಿ ಕ್ರಿಸ್ಮಸ್ : ಸ್ವತಃ ತಾವೇ ಕೇಕ್ ತಯಾರಿಸಿದ ರಾಧಿಕಾ ಪಂಡಿತ್

ತಮಿಳು ಚಿತ್ರರಂಗಕ್ಕೆ ವಿಜಯ್‌ ಕಾಂತ್‌ ಅವರ ನಿಧನ ಇದೀಗ ತುಂಬಲಾರದ ನಷ್ಟವಾಗಿದೆ. ಅವರು ತಮ್ಮ ಸಿನಿಮಾ ವೃತ್ತಿ ಬದುಕಿನಲ್ಲಿ ಒಟ್ಟು 154 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಅವರು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು.

ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿದ್ದು, ವಿರುಧಾಚಲಂ ಮತ್ತು ರಿಷಿವಂಡಿಯಂ ಕ್ಷೇತ್ರಗಳನ್ನು ಪ್ರತಿನಿಧಿಸುವ ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದಾಗ ಅವರ ರಾಜಕೀಯ ಜೀವನ ಉತ್ತುಂಗಕ್ಕೇರಿತು.

ಇದನ್ನೂ ಓದಿ : ಕ್ರಿಸ್ಮಸ್ ಗಾಗಿ ಕೈಯಾರೆ ಕೇಕ್ ಸಿದ್ಧಪಡಿಸಿದ ಮೇಘನಾ ರಾಜ್ : ರಾಯನ್‌ ರಾಜ್ ಸರ್ಜಾಗೆ ಗೂಗಲ್ ಮಮ್ಮಿ ಸ್ಪೆಶಲ್ ಗಿಫ್ಟ್

ಇತ್ತೀಚಿನ ಕೆಲ ವರ್ಷಗಳಲ್ಲಿ ವಿಜಯಕಾಂತ್‌ ಅವರ ಅನಾರೋಗ್ಯ ಕೈಕೊಟ್ಟಿತ್ತು. ಹೀಗಾಗಿ ಅವರು ಸಕ್ರೀಯ ರಾಜಕಾರಣದಿಂದ ಅವರು ದೂರ ಉಳಿದಿದ್ದರು. ಆದರೆ ಇದೀಗ ಕೋವಿಡ್‌ ಹೆಮ್ಮಾರಿ ಅವರನ್ನು ಬಲಿ ಪಡೆದುಕೊಂಡಿದೆ.

Famous Tamil Actor Vijayakanth Passed Away DMDK Founder In Chennai Kannada News
Image Credit to Original Source

ಇದನ್ನೂ ಓದಿ : ರಾಜ್ ಕಪ್- 6 ಜರ್ಸಿ ಬಿಡುಗಡೆಗೊಳಿಸಿದ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌

ಇನ್ನಿಕ್ಕುಮ್‌ ಇಳಮೈ ಸಿನಿಮಾದ ಮೂಲಕ ತಮಿಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ. ಅಮ್ಮನ್‌ ಕೋಯಿಲ್‌ ಕಿಜಕ್ಕಲೆ, ವೈದೇಗಿ ಕತಿರುಂಡಾಲ್‌, ಚಿನ್ನ ಗೌಂಡರ್‌, ವಲ್ಲರಸು, ಕ್ಯಾಪ್ಟನ್‌ ಪ್ರಭಾಕರ್‌, ಕಣ್ಣುಪಾದ ಪೋಕುತಯ್ಯ ರಮಣ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

Famous Tamil Actor Vijayakanth Passed Away DMDK Founder In Chennai Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular