ರೈತ ದೇಶದ ಬೆನ್ನೆಲುಬು ಅಂತಾರೇ. ಅಂತಹ ರೈತನ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಪ್ರಾರಂಭವಾಗಿರೋ ಫೀಡ್ ಯುವರ್ ಫಾರ್ಮರ್ಸ್ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ರಾಂಡ್ ಅಂಬಾಸಿಡರ್ ಆಗಿರೋದು ಖುಷಿಯ ವಿಚಾರ. ಈ ಅಭಿಯಾನಕ್ಕೆ ಚಂದನವನದ ತಾರೆಯರೆಲ್ಲಾ ಸೇರಿ ಸಾಥ್ ಕೊಡ್ತಿದ್ದಾರೆ.

ಶ್ರೀವತ್ಸ ವಾಜಪೇಯಿ ಅವರ ನೈತೃತ್ವದ ಪೌಂಡೇಶನ್ ಈ ಅಭಿಯಾನಕ್ಕೆ ಪವರ್ ತುಂಬಾ ಉತ್ಸುಕರಾಗಿ ಸಾಥ್ ನೀಡಿದ್ದು, ಪ್ರೇಮ ಕವಿ ಕೆ ಕಲ್ಯಾಣ್ ಅವರು ಈ ಅಭಿಯಾನಕ್ಕೆ ರೈತ ಗೀತೆ ಮಾಡಿ ಈ ಅಭಿಯಾನಕ್ಕೆ ಮತ್ತಷ್ಟು ಪುಷ್ಟಿಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆಗೆ ಶಿವಣ್ಣ, ಅಜಯ್ ರಾವ್, ವಿಜಯ ರಾಘವೇಂದ್ರ, ಎಸ್ ನಾರಾಯಣ್,ಲವ್ಲಿ ಸ್ಟಾರ್ ಪ್ರೇಮ್, ಗರುಡ ರಾಮ್, ಅದಿತಿ ಪ್ರಭುದೇವ, ಜೋಗಿ ಪ್ರೇಮ್, ಹೀಗೆ ತಾರೆಯರಲ್ಲದೇ, ಅಣ್ಣಾ ಮಲೈ, ರವಿ ಡಿ ಚನ್ನಣ್ಣನವರ್, ಅಶೋಕ್ ಕುಮಾರ್ ಹೀಗೆ ಹಲವಾರು ಮಹನೀಯರು ಸಾಥ್ ಕೊಟ್ಟಿದ್ದಾರೆ.

ಅಪ್ಪು ಪೂರ್ಣ ಪ್ರಮಾಣದ ಬೆಂಬಲ ಕೊಟ್ಟಿರೋದು ಶ್ರೀವತ್ಸ ವಾಜಪೇಯಿ ಪೌಂಡೇಶನ್ ಗೆ ದೊಡ್ಡ ಬಲ ಜೊತೆಯಿದ್ದಂತಾಗಿದೆ. ಬಗಾರದ ಮನುಷ್ಯನ ಮಗ ಈ ರೈತರ ಕೆಲಸಗಳಿಗೆ ಸಪೋರ್ಟ್ ಮಾಡಿರೋದು ಹೊಸದೇನಲ್ಲ, ಅವರದ್ದೇ ಪೌಂಡೇಶನ್ ಮೂಲಕ ಸಾಕಷ್ಟು ಕೆಲ್ಸ ಮಾಡೋ ಅಪ್ಪು, ಶಿಕ್ಷಣ ,ವಸತಿ ಹೀಗೆ ಹಲವಾರು ಸಮಾಜಮುಖಿ ಕೆಲಸಗಳಿಗೆ ತೊಡೆಸಿಕೊಳ್ಳುತ್ತಾರೆ.