ಖಳನಾಯಕನಾಗಿ ರೀ ಎಂಟ್ರಿ ಕೊಡ್ತಿದ್ದಾರೆ ಶಿಷ್ಯ ದೀಪಕ್

0

ಶಿಷ್ಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ದೀಪಕ್ ಚಂದನವನದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದರು. ಆದರೆ ಹಲವು ಕಾರಣಗಳಿಂದಾಗಿ ದೀಪಕ್ ಕೆಲಕಾಲ ಚಿತ್ರರಂಗದಿಂದ ದೂರವಿದ್ದರು. ಹೌದು ಅದೇ ದೀಪಕ್ ಮತ್ತೆ ಜೋರಾಗಿ ಸೌಂಡ್ ಮಾಡ್ತಾ ಕಮ್ ಬ್ಯಾಕ್ ಮಾಡ್ತಿದ್ದಾರೆ. ಹೀರೋ ಆಗಿ ಅಲ್ಲ ಬದಲಾಗಿ ಖಳನಾಯಕನಾಗಿ. ಜೋಗಿ ಪ್ರೇಮ್ ನಿರ್ದೇಶನದ ಏಕಲವ್ಯ ಮತ್ತು ಪ್ರಜ್ವಲ್ ದೇವರಾಜ್ ನಟನೆಯ ವೀರಂ ಸಿನಿಮಾಗಳ ಮೂಲಕ ತಮ್ಮ ನಟನೆಯ ಛಾಪು ಮೂಡಿಸಲು ಸ್ಯಾಂಡಲ್ವುಡ್ ಗೆ ವಾಪಸಾತಿ ಮಾಡಿದ್ದಾರೆ.

14 ವರ್ಷಗಳ ಸಿನಿಮಾ ಜರ್ನಿಯಲ್ಲಿ ದೀಪಕ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದರು. ಶಿಷ್ಯ ಸಿನಿಮಾ ನಂತರ 18th Cross, ಬಾ ಬೇಗ ಚಂದಮಾಮ, ಚನ್ನ, ತ್ಯಾಗೂ, ಧೀನ, ಖದೀಮರು, ಜನವರಿ 1 ಬಿಡುಗಡೆ, ಮಾಗಡಿ, ಬೆಳ್ಳಿ ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕಕನ್ನು ರಂಜಿಸಿದ್ದ ದೀಪಕ್ ಮತ್ತೆ ಚಂದನವನದಲ್ಲಿ ಬ್ಯಾಂಗ್ ಬ್ಯಾಂಗ್ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

ದೀಪಕ್ ಅವರ 18th Cross ಸಿನಿಮಾ ಮೂಲಕವೇ ರಾಧಿಕಾ ಪಂಡಿತ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಶಿಷ್ಯ ಮತ್ತೆ ಮಾಗಡಿ ಸಿನಿಮಾಗಳು ಸಾಕಷ್ಟು ಸೌಂಡ್ ಮಾಡಿದ್ದು, ಮತ್ತೆ ಅದೇ ಸೌಂಡ್ ಮಾಡೋಕೆ ಖಡಕ್ ವಿಲನ್ ಆಗಿ ಬರ್ತಿದ್ದಾರೆ ದೀಪಕ್. ಬಹುನಿರೀಕ್ಷಿತ ಪ್ರೇಮ್ಸ್ ನಿರ್ದೇಶನದ ಏಕಲವ್ಯ ಚಿತ್ರದ ಮೂಲಕ ಖಡಕ್ ಪೋಲಿಸ್ ಪಾತ್ರದಲ್ಲಿ ಮಿಂಚಲಿರೋ ದೀಪಕ್ ಮತ್ತೊಂದು ಬ್ರೇಕ್ ಕೊಡುವ ನಿರೀಕ್ಷೆಯಲ್ಲಿದ್ದಾರೆ. ವೀರಂ ಸಹ ಸಿನಿಮಾ ಶೂಟಿಂಗ್ ಶುರುವಿಗಿಂತ ಮುಂಚೆಯಿದನೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಪ್ರಜ್ವಲ್ ದೇವರಾಜ್ ಗೆ ಪೈಪೋಟಿ ಮಾಡಲಿದ್ದಾರೆ. 15 ವರ್ಷದ ಸಿನಿಮಾ ಜರ್ನಿಗೆ ಕಾಲಿಟ್ಟಿರೋ ದೀಪಕ್ ಅವರಿಗೆ ನಮ್ ಕಡೆಯಿಂದ ಶುಭಹಾರೈಕೆ.

Leave A Reply

Your email address will not be published.