ಸೋಮವಾರ, ಏಪ್ರಿಲ್ 28, 2025
HomeCinemaವಂಚನೆ ಪ್ರಕರಣ : ಮಠ ನಿರ್ದೇಶಕ ಗುರುಪ್ರಸಾದ್‌ ಬಂಧನ

ವಂಚನೆ ಪ್ರಕರಣ : ಮಠ ನಿರ್ದೇಶಕ ಗುರುಪ್ರಸಾದ್‌ ಬಂಧನ

- Advertisement -

ಸ್ಯಾಂಡಲ್‌ವುಡ್‌ನ “ಮಠ” ಹಾಗೂ “ಎದ್ದೇಳು ಮಂಜುನಾಥ” ಹಿಟ್‌ ಸಿನಿಮಾಗಳ ನಿರ್ದೇಶಕ ಗುರುಪ್ರಸಾದ್‌ನ್ನು (Guruprasad) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಅನ್ನು ಗಿರಿ‌ನಗರ ಪೊಲೀಸರು ಬಂಧಿಸಿದ್ದಾರೆ.

ಕೆಲ ಸಮಯದ ಹಿಂದೆ ಶ್ರೀನಿವಾಸ್ ಹೆಸರಿನ ವ್ಯಕ್ತಿಯೊಬ್ಬರು ಗುರುಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆಗೆ ಗುರುಪ್ರಸಾದ್ ಸತತವಾಗಿ ಗೈರಾಗಿದ್ದರಿಂದ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಇದೇ ಕಾರಣಕ್ಕೆ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದು, ಪ್ರಾಥಮಿಕ ವಿಚಾರಣೆ ಹಾಗೂ ತಪಾಸಣೆ ಬಳಿಕ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುತ್ತದೆ.

ಇದನ್ನೂ ಓದಿ : ನಟ ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆಗೆ ಕೊನೆಗೂ ಕೂಡಿ ಬಂತು ಕಾಲ

ಇದನ್ನೂ ಓದಿ : ಬಾಲಿವುಡ್‌ಗೆ ಲಗ್ಗೆ ಇಟ್ಟ ಕಾಂತಾರ ಲೀಲಾ ಖ್ಯಾತಿಯ ನಟಿ ಸಪ್ತಮಿ ಗೌಡ

ಇದನ್ನೂ ಓದಿ : ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

ಗುರುಪ್ರಸಾದ್‌ ಅವರು ಕನ್ನಡ ಸಿನಿರಂಗದ ಉತ್ತಮ ನಟ ಮತ್ತು ನಿರ್ದೇಶಕರಾಗಿದ್ದಾರೆ. ಮೊದಲು ಟಿ.ಎನ್‌.ಸೀತಾರಾಮ ಅವರ “ಮನ್ವಂತರ” ಧಾರಾವಾಹಿಯಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದರು. ಸುನೀಲ್‌ ಕುಮಾರ್‌ ದೇಸಾಯಿಯವರ “ಮರ್ಮ” ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. 2006ರಲ್ಲಿ ಮಠ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದರು. ಇದು ನವರಸನಾಯಕ ಜಗ್ಗೇಶ್‌ ಅಭಿನಯದ ನೂರನೇ ಸಿನಿಮಾವಾಗಿದೆ.

ಇದನ್ನೂ ಓದಿ : ಜೂ. ಎನ್‌ಟಿಆರ್‌ ಜೊತೆ ನಟಿಸುವುದನ್ನು ದುನಿಯಾ ವಿಜಯ್‌ ಮಿಸ್‌ ಮಾಡಿಕೊಂಡಿದ್ದೇಕೆ ?

ಇದುವರೆಗೂ ಗುರುಪ್ರಸಾದ್‌ ಸುಮಾರು ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಅವರ ಐದನೇ “ಅದೇಮಾ” ಸಿನಿಮಾ ನಿರ್ಮಾಣ ಹಂತದಲ್ಲಿರುತ್ತದೆ. ಗುರುಪ್ರಸಾದ್‌ ನಟ ಹಾಗೂ ನಿರ್ದೇಶಕ ಮಾತ್ರವಲ್ಲದೇ ಉತ್ತಮ ಸಾಹಿತ್ಯ ರಚನಾಕಾರರೂ ಹೌದು. ಅನೇಕ ಸಿನಿಮಾ ಹಾಡುಗಳಿಗೆ ಸಾಹಿತ್ಯವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರಮುಖ ಮಾಸಿಕ “ಚಿತ್ತಾರ”ಕ್ಕೆ ಪತ್ರಕರ್ತರಾಗಿ ಕೂಡ ಕಾರ್ಯನಿರ್ಹಿಸಿದ್ದಾರೆ.

ಇದನ್ನೂ ಓದಿ : ನಟ ದಳಪತಿ ವಿಜಯ್‌ ಅಭಿನಯದ “ವಾರಿಸು”ಗೆ ಮೊದಲ ದಿನವೇ ಭರ್ಜರಿ ಕಲೆಕ್ಷನ್

Fraud case: Mutt director Guruprasad arrested

RELATED ARTICLES

Most Popular