ದೊಡ್ಮನೆ ಮಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” ಕಳೆದ ವರ್ಷ ಅಕ್ಟೋಬರ್ 28ರಂದು ತೆರೆಕಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸು (Gandhagudi movie re-release) ಕಂಡಿತ್ತು. ಇದೊಂದು ಡ್ಯಾಕುಮೆಂಟರಿ ಸಿನಿಮಾವಾಗಿದ್ದು, ಕರ್ನಾಟಕದ ಅರಣ್ಯ ಸಂಪತ್ತನ್ನು ಗಂಧದಗುಡಿ ಮೂಲಕ ತೋರಿಸಬೇಕು ಎಂಬ ಪುನೀತ್ ರಾಜ್‌ಕುಮಾರ್ ಅವರ ಆಸೆ ಅಚ್ಚುಕಟ್ಟಾಗಿ ನೆರವೇರಿತ್ತು. ನಟ ಪುನೀತ್ ಅಭಿಮಾನಿಗಳು ಕೂಡ ಬಹಳ ಇಷ್ಟ ಪಟ್ಟು ಈ ಸಿನಿಮಾವನ್ನು ಸಿನಿಮಂದಿರಗಳಲ್ಲಿ ನೋಡಿದ್ದಾರೆ. ಆದರೆ ಸಿನಿಮಾ ಬಿಡುಗಡೆಯಾಗಿ ಇಷ್ಟು ದಿನವಾದ್ರೂ “ಗಂಧದಗುಡಿ” ಓಟಿಟಿಗೆ ಬರದಿರಲು ಕಾರಣವೇನು ಎನ್ನುವ ಅಭಿಮಾನಿಗಳ ಪ್ರೆಶ್ನೆಗೆ ಈಗ ಉತ್ತರ ದೊರಕಿದೆ.
ಲಾಕ್‌ಡೌನ್ ಸಮಯದಲ್ಲಿ ಶುರುವಾದ ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಅವರ ಕಾಡಿನ ಅಲೆದಾಟ ತೆರೆಯ ಮೇಲೆ ಪ್ರೇಕ್ಷಕನಿಗೆ ವಾವ್ ಎನ್ನುವ ಫೀಲ್ ಕೊಟ್ಟಿತ್ತು. ಪುನೀತ್ ಅಗಲಿಕೆಯ ನಂತರ ಬಿಡುಗಡೆಯಾದ ಅಪ್ಪು ಅವರ ಕೊನೆಯ ಸಿನಿಮಾ ಎನ್ನುವ ಕಾರಣದಿಂದ ಹಾಗೂ ರಾಜ್ಯದ ವಿಶೇಷತೆಗಳನ್ನು ಅಚ್ಚುಕಟ್ಟಾಗಿ ತೋರಿಸಿದ ಕಾರಣದಿಂದ ಗಂಧದ ಗುಡಿ ಪ್ರತಿಯೊಬ್ಬ ಅಪ್ಪು ಅಭಿಮಾನಿಗೆ ಹಾಗೂ ಕನ್ನಡ ಸಿನಿ ರಸಿಕರಿಗೆ ಎಂದೂ ಮರೆಯಲಾಗದ ಒಂದು ಎಮೋಷನ್ ಆಗಿ ಉಳಿದುಕೊಂಡಿದೆ.
ಹೀಗೆ ಅಭೂತಪೂರ್ವ ಪ್ರಶಂಸೆಯನ್ನು ಪಡೆದುಕೊಂಡು ಜನಮಾನಸದಲ್ಲಿ ಬೇರೂರಿರುವ ಗಂಧದಗುಡಿ ಸಿನಿಮಾವನ್ನು ಓಟಿಟಿಯಲ್ಲಿ ವೀಕ್ಷಿಸಲೂ ಸಹ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಹೌದು, ಗಂಧದ ಗುಡಿ ಸಿನಿಮಾದ ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಖರೀದಿಸಿದ್ದು, ಸಿನಿಮಾ ಯಾವಾಗ ಓಟಿಟಿಗೆ ಬರಲಿದೆ ಎಂಬ ಕುತೂಹಲವಿದೆ. ಈ ಸಿನಿಮಾ ಬಿಡುಗಡೆಯಾಗಿ ಐವತ್ತು ದಿನಗಳು ಕಳೆದರೂ ಸಹ ಓಟಿಟಿಯಲ್ಲಿ ಬಾರದಿರುವುದು ಸಿನಿ ರಸಿಕರಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಇಷ್ಟು ದಿನಗಳಾದರೂ ಗಂಧದಗುಡಿ ಓಟಿಟಿಗೆ ಏಕೆ ಬಂದಿಲ್ಲ, ಏನಾದರೂ ಅಡೆತಡೆ ಇದೆಯಾ ಎಂಬ ಅನುಮಾನ ಸಹಜವಾಗಿ ಮೂಡಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಗಂಧದ ಗುಡಿ ಸಿನಿಮಾ ಓಟಿಟಿಗೆ ಬರದಿರಲು ಕಾರಣವೇನೆಂಬುದನ್ನು ಬಿಚ್ಚಿಟ್ಟಿದೆ.
ಗಂಧದ ಗುಡಿ ಸಿನಿಮಾ ಬಿಡುಗಡೆಯಾಗಿ ಐವತ್ತು ದಿನಗಳು ಕಳೆದರೂ ಸಹ ಓಟಿಟಿಯಲ್ಲಿ ಬಿಡುಗಡೆಯಾಗದಿರಲು ಕಾರಣ ಸಿನಿಮಾವನ್ನು ಮರು ಬಿಡುಗಡೆ ಮಾಡಲು ನಡೆಸಿರುವ ಚಿಂತನೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು, ಮುಂಬರುವ ಮಾರ್ಚ್ 17ರಂದು ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಗಂಧದಗುಡಿ ಸಿನಿಮಾವನ್ನು ಮರಳಿ ತೆರೆ ಮೇಲೆ ತಂದು ನಂತರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಇನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಆತನ ಹುಟ್ಟುಹಬ್ಬದ ಪ್ರಯುಕ್ತ ವೀಕ್ಷಿಬೇಕೆಂಬ ಆಸೆ ಹಿಂದಿನಿಂದಲೂ ಇತ್ತು. ಆದರೆ ಅಪ್ಪು ಇದ್ದಾಗ ಅಭಿಮಾನಿಗಳ ಆಸೆ ಈಡೇರಲೇ ಇಲ್ಲ. ಇದು ಪುನೀತ್ ರಾಜ್‌ಕುಮಾರ್ ಅವರ ಆಸೆ ಕೂಡ ಆಗಿತ್ತು. ಹೀಗಾಗಿ ಅಪ್ಪು ಆಸೆಯಂತೆ ಕಳೆದ ವರ್ಷ ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಜೇಮ್ಸ್ ಸಿನಿಮಾವನ್ನು ಬಿಡುಗಡೆಗೊಳಿಸಲಾಗಿತ್ತು. ಅದೇ ರೀತಿ ಇದೀಗ ಪುನೀತ್ ರಾಜ್‌ಕುಮಾರ್ ನಟನೆಯ ಗಂಧದಗುಡಿ ಸಿನಿಮಾವನ್ನು ಹುಟ್ಟುಹಬ್ಬದ ಪ್ರಯುಕ್ತ ಮತ್ತೊಮ್ಮೆ ತೆರೆಮೇಲೆ ತರಲು ಸಿದ್ಧತೆ ನಡೆಸಲಾಗ್ತಿದೆ.
ಇದನ್ನೂ ಓದಿ : “ಭೋಲಾ” ಸಿನಿಮಾದ ಟಬು ಫಸ್ಟ್ ಲುಕ್ ಹಂಚಿಕೊಂಡ ಅಜಯ್ ದೇವಗನ್
ಇದನ್ನೂ ಓದಿ : ಮೈಸೂರು ಪಬ್‌ನಲ್ಲಿ ಅಂದು ನಡೆದಿದ್ದೇನು? ದರ್ಶನ್‌ರ ವೈರಲ್ ವಿಡಿಯೋ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ರಚಿತಾ ರಾಮ್
ಇದನ್ನೂ ಓದಿ : ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರ ಅಪಾರ ಪ್ರೀತಿ ,ಮೆಚ್ಚುಗೆ ತಂದುಕೊಟ್ಟಿದೆ ಎಂದ ರಶ್ಮಿಕಾ ಮಂದಣ್ಣ
ಇನ್ನು ಗಂಧದ ಗುಡಿ ಮಾತ್ರವಲ್ಲದೇ ಪುನೀತ್ ರಾಜ್‌ಕುಮಾರ್ ನಟನೆಯ ಹಿಟ್ ಸಿನಿಮಾಗಳನ್ನು ಸಹ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೌದು, ಅಪ್ಪು, ಜಾಕಿ, ಅರಸು ರೀತಿಯ ಸಿನಿಮಾಗಳನ್ನು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮರುಬಿಡುಗಡೆ ಮಾಡಿ ಎಂಬ ಕೂಗು ಜೋರಾಗಿದ್ದು, ಯಾವುದಾದರೊಂದು ಸಿನಿಮಾವನ್ನು ಮರು ಬಿಡುಗಡೆ ಮಾಡಿ ಅಪ್ಪು ಅವರನ್ನು ಸಂಭ್ರಮಿಸುವುದು ಖಚಿತ.
Gandhagudi movie re-release for actor Puneeth Rajkumar’s birthday